ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಇ-ಪಾಸ್‌ಬುಕ್ ಸೇವೆಯನ್ನು ಕಳೆದ ಕೆಲವು ದಿನಗಳಿಂದ ಸ್ಥಗಿತಗೊಳಿಸಲಾಗಿದೆ. EPFO ವೆಬ್‌ಸೈಟ್‌ನಲ್ಲಿ ಲಾಗಿನ್ ಆದ ನಂತರ ಇ-ಪಾಸ್‌ಬುಕ್ ಓಪನ್ ಆಗ್ತಿಲ್ಲ. ಉಮಾಂಗ್ ಅಪ್ಲಿಕೇಶನ್‌ನಲ್ಲಿ ಇ-ಪಾಸ್‌ಬುಕ್ ಲಭ್ಯವಿಲ್ಲದ ಕಾರಣ, ಚಂದಾದಾರರು ತಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಸಾಧ್ಯವಿಲ್ಲ. ತಾಂತ್ರಿಕ ದೋಷದಿಂದಾಗಿ ಇಪಿಎಫ್‌ಒದ ಇ-ಪಾಸ್‌ಬುಕ್ ಸೇವೆಯನ್ನು ಸ್ಥಗಿತಗೊಳಿಸಿರುವುದು ಈ ವರ್ಷ ಇದು ಎರಡನೇ ಬಾರಿ. ಇ-ಪಾಸ್‌ಬುಕ್ ಸೇವೆಯನ್ನು ಸ್ಥಗಿತಗೊಳಿಸಿರುವ ಕುರಿತು ಹಲವು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡುತ್ತಿದ್ದಾರೆ. (ಸಾಂಕೇತಿಕ ಚಿತ್ರ)
“ಆತ್ಮೀಯ ಸದಸ್ಯರೇ, ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಸಂಬಂಧಪಟ್ಟ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ದಯವಿಟ್ಟು ಸ್ವಲ್ಪ ಸಮಯ ಕಾಯಿರಿ. ಹಿಂದಿನ ಜನವರಿಯಲ್ಲಿ, ಇ-ಪಾಸ್‌ಬುಕ್ ಸೌಲಭ್ಯವು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅನೇಕ ಬಳಕೆದಾರರು ದೂರಿದ್ದರು. ಕಂಪನಿಯು ದೋಷಗಳನ್ನು ಸರಿಪಡಿಸುವ ಭರವಸೆ ನೀಡಿದೆ. ಕೆಲವು ದಿನಗಳ ನಂತರ ಸೌಲಭ್ಯವನ್ನು ಮರುಪ್ರಾರಂಭಿಸಲಾಯಿತು. (ಸಾಂಕೇತಿಕ ಚಿತ್ರ)