ಭಾರತದಲ್ಲಿ ಕತ್ತೆ ಮಾಂಸವನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದು ಮತ್ತು ಖರೀದಿಸುವುದು ಕಾನೂನುಬಾಹಿರವಾಗಿದೆ. ಕತ್ತೆ ಸತ್ತ ನಂತರವೂ ಇದನ್ನೂ ಮಾಂಸವಾಗಿ ಮಾರಾಟ ಮಾಡುವುದು ಅಥವಾ ತಿನ್ನುವುದಕ್ಕೆ ನಿಷೇಧವಿದೆ. ಒಂದು ವೇಳೆ ಅದನ್ನು ತಿಂದರೆ ಅದು ಅಪರಾಧದ ವ್ಯಾಪ್ತಿಗೆ ಬರುತ್ತದೆ. ಭಾರತದಲ್ಲಿ ಐಪಿಸಿಯ ಸೆಕ್ಷನ್ 429 ರ ಪ್ರಕಾರ ಈ ಅಪರಾಧವು 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಪ್ರಕಾರ ಭಾರತದಲ್ಲಿ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.