ಹೌದು, ತೈಲ ಸಚಿವಾಲಯದ ಸಮಿತಿಯು ಮಾಡಿದ ಶಿಫಾರಸಿನಲ್ಲಿ 2027ರ ವೇಳೆಗೆ ಡೀಸೆಲ್ ಚಾಲಿತ ನಾಲ್ಕು-ಚಕ್ರ ವಾಹನಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಹೇಳಲಾಗಿದೆ. ಹೊಗೆಯನ್ನು ಹೊರಸೂಸುವಿಕೆಯನ್ನು ಕಡಿತಗೊಳಿಸುವ ಸಲುವಾಗಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ವಿದ್ಯುತ್ ಮತ್ತು ಅನಿಲ-ಇಂಧನ ವಾಹನಗಳಿಗೆ ಬದಲಾಯಿಸಬೇಕಾಗುತ್ತದೆ ಎಂದು ತೈಲ ಸಚಿವಾಲಯದ ಸಮಿತಿಯು ಶಿಫಾರಸಿನಲ್ಲಿ ಹೇಳಿದೆ.
ಹಸಿರು ಮನೆ ಅನಿಲಗಳನ್ನು ಅತಿ ಹೆಚ್ಚು ಹೊರಸೂಸುವ ದೇಶಗಳಲ್ಲಿ ನಮ್ಮ ದೇಶವೂ ಒಂದು. ಆದ್ದರಿಂದ 2070 ರ ವೇಳೆಗೆ ನಿವ್ವಳ ಶೂನ್ಯ ಗುರಿಯನ್ನು ಸಾಧಿಸಲು ನವೀಕರಿಸಬಹುದಾದ 40% ನಷ್ಟು ವಿದ್ಯುತ್ ಅನ್ನು ಉತ್ಪಾದಿಸಲು ಯೋಜನೆ ರೂಪಿಸಲಾಗುತ್ತಿದೆ. 2030ರ ವೇಳೆಗೆ ಎಲೆಕ್ಟ್ರಿಕ್ ಅಲ್ಲದಂತಹ ಯಾವುದೇ ಸಿಟಿ ಬಸ್‌ಗಳನ್ನು ಸೇರಿಸಬಾರದು, ಹಾಗೆಯೇ2024 ರಿಂದ ನಗರ ಸಾರಿಗೆಗೆ ಡೀಸೆಲ್ ಬಸ್‌ಗಳನ್ನು ಸೇರಿಸಬಾರದು ಎಂದು ಸಮಿತಿಯು ತೈಲ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ವರದಿಯಲ್ಲಿ ತಿಳಿಸಿದೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು, ಮಾರ್ಚ್ 31ರ ನಂತರ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವೆಹಿಕಲ್ಸ್ ಸ್ಕೀಮ್ (FAME) ನ ವೇಗದ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಅಡಿಯಲ್ಲಿ ನೀಡಲಾದ "ಉದ್ದೇಶಿತ ವಿಸ್ತರಣೆ" ಯನ್ನು ಸರ್ಕಾರ ಪರಿಗಣಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಡೀಸೆಲ್ ಭಾರತದಲ್ಲಿ ಸುಮಾರು ಐದನೇ ಎರಡರಷ್ಟು ಸಂಸ್ಕರಿಸಿದ ಇಂಧನ ಬಳಕೆಯನ್ನು ಹೊಂದಿದೆ. ಅದರಲ್ಲಿ 80% ಸಾರಿಗೆ ವಲಯದಲ್ಲಿ ಬಳಕೆಯಾಗುತ್ತದೆ.
2020 ಮತ್ತು 2050 ರ ನಡುವೆ 9.78% ಸಂಯುಕ್ತ ಸರಾಸರಿ ಬೆಳವಣಿಗೆ ದರದಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಎರಡು ತಿಂಗಳ ಬೇಡಿಕೆಗೆ ಸಮಾನವಾದ ಭೂಗತ ಅನಿಲ ಸಂಗ್ರಹಣೆಯನ್ನು ನಿರ್ಮಿಸಲು ಭಾರತವು ಪರಿಗಣಿಸಬೇಕು ಎಂದು ಸಮಿತಿ ಹೇಳಿದೆ. ಇನ್ನು, ಮಾಜಿ ತೈಲ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಇಂಧನ ಪರಿವರ್ತನಾ ಸಲಹಾ ಸಮಿತಿಯ ಶಿಫಾರಸುಗಳಿಗೆ ಕ್ಯಾಬಿನೆಟ್ ಅನುಮೋದನೆಯನ್ನು ನೀಡುತ್ತದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಷ್ಟೇ.