ಯುವ ಪ್ರವಾಸೋದ್ಯಮವನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ಭಾರತ@75 ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರ ಭಾಗವಾಗಿ ಭಾರತ ಸರ್ಕಾರ ಯುವ ಟೂರಿಸಂ ಕ್ಲಬ್‌ಗಳನ್ನು ಆಯೋಜಿಸುತ್ತಿದೆ. ಯುವಕರು ಪ್ರವಾಸೋದ್ಯಮ ಕ್ಷೇತ್ರಕ್ಕೆ ಯುವ ರಾಯಭಾರಿಗಳಾಗುತ್ತಾರೆ. ಯುವಕರು ಹಂಚಿಕೊಳ್ಳುವ ಅನುಭವಗಳು ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಪ್ರಯಾಣಿಸಲು ಮತ್ತಷ್ಟು ಉತ್ತೇಜಿಸುತ್ತದೆ ಎಂದು ಅದು ಹೇಳಿದೆ.