Delhivery IPO: ಎಲ್ಐಸಿ ಆಯ್ತು, ಇದೀಗ ಹೊಸ ಕಂಪನಿಯ ಐಪಿಒ ಶುರು! ಬೆಲೆ ವಿವರ ಇಲ್ಲಿದೆ
LIC IPO ಇಡೀ ದೇಶದ ಗಮನ ಸೆಳೆದಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಕಂಪನಿಯ ಐಪಿಒ ಸಹ ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಯಾವ ಕಂಪನಿಯದು? ಹೂಡಿಕೆ ಮಾಡಿದರೆ ಲಾಭವೋ? ನಷ್ಟವೋ? ಇಲ್ಲಿದೆ ನೋಡಿ
ಎಲ್ಐಸಿ ಐಪಿಒ ಇಡೀ ದೇಶದ ಗಮನ ಸೆಳೆದಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಕಂಪನಿಯ ಐಪಿಒ ಸಹ ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಯಾವ ಕಂಪನಿಯದು? ಹೂಡಿಕೆ ಮಾಡಿದರೆ ಲಾಭವೋ? ನಷ್ಟವೋ? ಇಲ್ಲಿದೆ ನೋಡಿ
2/ 8
ಎಲ್ಐಸಿಯ ಮೆಗಾ ಐಪಿಒ ಪ್ರಕ್ರಿಯೆಯ ನಡುವೆ, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ಸ್ಟಾರ್ಟ್ಅಪ್ ಡೆಲ್ಹಿವರಿ ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಸ್ಟಾರ್ಟಪ್ ಐಪಿಒ ಬಿಡುಗಡೆಗೊಳಿಸಲಿದ್ದು ಷೇರಿನ ಬೆಲೆಯನ್ನು 462-487 ರೂ.ಗೆ ನಿಗದಿಪಡಿಸಿದೆ.
3/ 8
ಡೆಲ್ಹಿವರಿ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಕಂಪನಿ. ಇದು ದೇಶದಾದ್ಯಂತ ಬಹುತೇಕ ನಗರಗಳಲ್ಲಿ ಜಾಲ ವಿಸ್ತರಿಸಿದೆ. ಜೂನ್ 30, 2021 ರಂತೆ ಡೆಲ್ಹಿವರಿ 17,045 ಪೋಸ್ಟಲ್ ಇಂಡೆಕ್ಸ್ ಸಂಖ್ಯೆ (ಪಿನ್) ಕೋಡ್ಗಳಲ್ಲಿ ಸೇವೆಗಳನ್ನು ಒದಗಿಸುತ್ತದೆ.
4/ 8
ಡೆಲ್ಹಿವರಿ ಸ್ಟಾರ್ಟ್ಅಪ್ ಐಪಿಒ ಮೇ 11 ರಂದು ಚಂದಾದಾರಿಕೆಗಾಗಿ ತೆರೆಯುತ್ತದೆ. ಮೇ 13 ರವರೆಗೂ ಐಪಿಒ ಅಪ್ಲೈ ಮಾಡಲು ಸಮಯಾವಕಾಶ ನೀಡಲಾಗಿದೆ.
5/ 8
ಈ ಐಪಿಒದ 5,235 ಕೋಟಿ ರೂ.ಗಳಲ್ಲಿ 4,000 ಕೋಟಿ ರೂ.ಗಳನ್ನು ತಾಜಾ ವಿತರಣೆಯ ಮೂಲಕ ಸಂಗ್ರಹಿಸಲಾಗುವುದು. ಅದೇ ಸಮಯದಲ್ಲಿ, ಉಳಿದ 1,235 ಕೋಟಿ ರೂ.ಗಳನ್ನು ಆಫರ್ ಫಾರ್ ಸೇಲ್ (OFS) ಮೂಲಕ ಸಂಗ್ರಹಿಸಲಾಗುತ್ತದೆ.
6/ 8
ಅಂದಹಾಗೆ, ಈ ಮೊದಲು ಈ ಐಪಿಒ ಗಾತ್ರ 7,460 ಕೋಟಿ ಕೋಟಿ ಆಗಿತ್ತು. ಕೊಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ, ಬೋಫಾ ಸೆಕ್ಯುರಿಟೀಸ್ ಇಂಡಿಯಾ, ಮೋರ್ಗಾನ್ ಸ್ಟಾನ್ಲಿ ಇಂಡಿಯಾ ಕಂಪನಿ ಮತ್ತು ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಈ ಸಂಚಿಕೆಯ ಪ್ರಮುಖ ವ್ಯವಸ್ಥಾಪಕರು.
7/ 8
ಕಂಪನಿಯು ತನ್ನ OFS ಭಾಗವನ್ನು 2,460 ಕೋಟಿಯಿಂದ 1,235 ಕೋಟಿಗೆ ಇಳಿಸಿದೆ. ಕಾರ್ಲೈಲ್ನಂತಹ ಖಾಸಗಿ ಷೇರು ಹೂಡಿಕೆದಾರರು ತಮ್ಮ ಒಎಫ್ಎಸ್ ಷೇರನ್ನು 920 ಕೋಟಿಯಿಂದ 454 ಕೋಟಿಗೆ ಇಳಿಸಿದ್ದಾರೆ. ಅದೇ ಸಮಯದಲ್ಲಿ, ಸಾಫ್ಟ್ಬ್ಯಾಂಕ್ ತನ್ನ ಪಾಲನ್ನು ಹಿಂದಿನ 750 ಕೋಟಿಯಿಂದ 365 ಕೋಟಿಗೆ ಇಳಿಸಿದೆ.
8/ 8
ವಿವಿಧ ಐಪಿಒಗಳು ಹೂಡಿಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದ ನಂತರ ಕಂಪನಿಯು IPO ಪ್ರಾರಂಭಿಸಲು ನಿರ್ಧರಿಸಿದೆ.