Cooking Oil: ಗೃಹಿಣಿಯರಿಗೆ ಗುಡ್ ನ್ಯೂಸ್; ಅಡುಗೆ ಎಣ್ಣೆ ಬೆಲೆ ಇಳಿಸಲು ಮುಂದಾದ ಕೇಂದ್ರ
Cooking Oil News: ಅಡುಗೆ ಎಣ್ಣೆ ಮತ್ತು ಎಣ್ಣೆಕಾಳುಗಳ ಬೆಲೆಯನ್ನು ನಿಯಂತ್ರಿಸಲು ಸರಕುಗಳ ಮೇಲಿನ ಸ್ಟಾಕ್ ಮಿತಿ ಆದೇಶವನ್ನು ಜಾರಿಗೊಳಿಸಲು ಕೇಂದ್ರವು ಇತ್ತೀಚೆಗೆ ರಾಜ್ಯಗಳನ್ನು ಕೇಳಿತ್ತು.
ಕಚ್ಚಾ ತಾಳೆ ಎಣ್ಣೆ ಆಮದು ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಶೇ.8.25ರಿಂದ ಶೇ.5.5ಕ್ಕೆ ಇಳಿಸಿದೆ. ಸರ್ಕಾರದ ಈ ನಿರ್ಧಾರದಿಂದ ದೇಶೀಯ ತೈಲ ಉತ್ಪಾದಕರಿಗೆ ಲಾಭವಾಗಲಿದೆ. (ಸಾಂದರ್ಭಿಕ ಚಿತ್ರ)
2/ 8
ಅಡುಗೆ ಎಣ್ಣೆ ಬೆಲೆ ಏರಿಕೆ ಹಣದುಬ್ಬರದ ಮತ್ತೊಂದು ಕೊಡುಗೆಯಾಗಿತ್ತು. ಸಿಬಿಐಸಿ ಪಾಮ್ ಆಯಿಲ್ ಮೇಲಿನ ಅಗ್ರಿ ಇನ್ಫ್ರಾ ಡೆವಲಪ್ಮೆಂಟ್ ಸೆಸ್ ಅನ್ನು 7.5% ರಿಂದ 5% ಕ್ಕೆ ಇಳಿಸಿದೆ. ಇದು ಫೆಬ್ರವರಿ 13 ರಿಂದ ಜಾರಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)
3/ 8
ಸಿಬಿಐಸಿ ಕಚ್ಚಾ ಪಾಮ್ ಆಯಿಲ್ ಮತ್ತು ಇತರ ಕಚ್ಚಾ ತೈಲಗಳ ಮೇಲಿನ ಸುಂಕ ಕಡಿತದ ಅವಧಿಯನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 30 ರವರೆಗೆ 6 ತಿಂಗಳವರೆಗೆ ವಿಸ್ತರಿಸಿದೆ (ಸಾಂದರ್ಭಿಕ ಚಿತ್ರ)
4/ 8
ಕಚ್ಚಾ ತಾಳೆ ಎಣ್ಣೆ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆಯ ನಡುವಿನ ಸುಂಕದ ಅಂತರವನ್ನು ಶೇಕಡಾ 11 ಕ್ಕೆ ಇಳಿಸಬೇಕೆಂದು ಅಡುಗೆ ತೈಲ ಉದ್ಯಮಗಳ ಸಂಘ (ಎಸ್ಇಎ) ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿವೆ. (ಸಾಂದರ್ಭಿಕ ಚಿತ್ರ)
5/ 8
ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಆಮದು ಸುಂಕ ಪ್ರಸ್ತುತ ಶೇ.13.75ರಷ್ಟಿದೆ. ಕಳೆದ ವರ್ಷದಿಂದ ಅಡುಗೆ ಎಣ್ಣೆ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ಇದೆ. ಸರ್ಕಾರವು ಅನೇಕ ಸಂದರ್ಭಗಳಲ್ಲಿ ತಾಳೆ ಎಣ್ಣೆಯ ಆಮದು ಸುಂಕವನ್ನು ಕಡಿಮೆ ಮಾಡಿದೆ (ಸಾಂದರ್ಭಿಕ ಚಿತ್ರ)
6/ 8
ಅಡುಗೆ ಎಣ್ಣೆ ಮತ್ತು ಎಣ್ಣೆಕಾಳುಗಳ ಬೆಲೆಯನ್ನು ನಿಯಂತ್ರಿಸಲು ಎಣ್ಣೆಕಾಳುಗಳ ಮೇಲಿನ ಸ್ಟಾಕ್ ಮಿತಿ ಆದೇಶವನ್ನು ಜಾರಿಗೊಳಿಸಲು ಕೇಂದ್ರವು ಇತ್ತೀಚೆಗೆ ರಾಜ್ಯಗಳನ್ನು ಕೇಳಿದೆ. ಈ ವ್ಯವಹಾರದಲ್ಲಿ ಯಾವುದೇ ಅಡೆತಡೆಯಿಲ್ಲದೆ ಸರಬರಾಜು ನಿರ್ವಹಿಸಲು ಮತ್ತು ಆದೇಶವನ್ನು ಕಾರ್ಯಗತಗೊಳಿಸಲು ಕೇಂದ್ರವು ರಾಜ್ಯಗಳನ್ನು ಕೇಳಿದೆ. (ಸಾಂದರ್ಭಿಕ ಚಿತ್ರ)
7/ 8
ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಜೊತೆ ಅಡುಗೆ ಎಣ್ಣೆ ದರವೂ ನೂರರ ಗಡಿ ದಾಟಿದೆ. ಬೆಲೆ ಏರಿಕೆಗೆ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. (ಸಾಂದರ್ಭಿಕ ಚಿtತ್ರ)
8/ 8
ಖಾದ್ಯ ತೈಲಗಳು ಕೊಬ್ಬಿನ ಮೂಲವಾಗಿದೆ, ಆದರೆ ಅತಿಯಾದ ಬಳಕೆ ಹೃದ್ರೋಗದ ಅಪಾಯಕ್ಕೆ ಕಾರಣವಾಗಬಹುದು. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತೈಲಗಳು ಲಭ್ಯವಿವೆ, ಆದರೆ ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಪೂರಕವಾಗಿವೆ ಎಂದು ಹೇಳಲು ಬರುವುದಿಲ್ಲ. (ಸಾಂದರ್ಭಿಕ ಚಿತ್ರ)