ಹೈಡ್ರೋಜನ್ ಕಾರ್: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ಸಹಯೋಗದೊಂದಿಗೆ ವಿಶ್ವದ ಅತ್ಯಾಧುನಿಕ FCEV ಟೊಯೋಟಾ ಮಿರಾಯ್ ಅನ್ನು ಅಧ್ಯಯನ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಪ್ರಾಯೋಗಿಕ ಯೋಜನೆಯನ್ನು ಕೈಗೊಂಡಿದೆ.
2/ 8
ದೇಶದ ಮೊದಲ ಹೈಡ್ರೋಜನ್ ಕಾರು ಬುಧವಾರ ರಾಜಧಾನಿ ದೆಹಲಿಗೆ ಆಗಮಿಸಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೈಡ್ರೋಜನ್ ಚಾಲಿತ ಮಾಡರ್ನ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಫ್ಸಿಇವಿ) ಗಾಗಿ ಪ್ರಾಯೋಗಿಕ ಯೋಜನೆ ನೀಡಿದ್ದಾರೆ. (ಚಿತ್ರ: ANI)
3/ 8
ಕಡಿಮೆ ವೆಚ್ಚದಲ್ಲಿ ಈ ಕಾರನ್ನು ಓಡಿಸಬಹುದು ಎಂದು ನಿತಿನ್ ಗಡ್ಕರಿ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಹೇಳಿದರು. ಭವಿಷ್ಯದಲ್ಲಿ ನಮ್ಮ ದೇಶದಲ್ಲಿ ಹೈಡ್ರೋಜನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಮತ್ತು ನಂತರ ಒಂದು ರೂಪಾಯಿಯಲ್ಲಿ ಎರಡು ಕಿಲೋಮೀಟರ್ ಪ್ರಯಾಣಿಸಬಹುದು ಎಂದು ಅವರು ಹೇಳಿದರು. (ಚಿತ್ರ: ANI)
4/ 8
ಒಂದು ಕಿಲೋ ಹೈಡ್ರೋಜನ್ ಬೆಲೆ ಒಂದು ಡಾಲರ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಹೀಗೆ ಸುಮಾರು 70 ರೂಪಾಯಿಗೆ 120 ಕಿ.ಮೀ. ದೂರವನ್ನು ಕ್ರಮಿಸಬಹುದು.
5/ 8
ಟೊಯೊಟಾ ಹೈಡ್ರೊಜನ್ ಕಾರಿನ ಲುಕ್ ಹೀಗಿದೆ!
6/ 8
ಹೈಡ್ರೋಜನ್ ಕಾರುಗಳ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದೀಗ ಈ ನಿಟ್ಟಿನಲ್ಲಿ ಕಾಮಗಾರಿ ವೇಗವಾಗಿ ಸಾಗುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದರು. (ಚಿತ್ರ: ANI)
7/ 8
ಇದು ಭಾರತೀಯ ರಸ್ತೆಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಹೈಡ್ರೋಜನ್ ಮೇಲೆ ಚಲಿಸುತ್ತದೆ. ಈ ಕಾರಿನ ಹೆಸರು ಟೊಯೊಟಾ ಮಿರಾಯ್. ದೇಶದಲ್ಲಿ ಹೈಡ್ರೋಜನ್, FCEV ತಂತ್ರಜ್ಞಾನ ಮತ್ತು ಹೈಡ್ರೋಜನ್ ಆಧಾರಿತ ಸಮಾಜಗಳಿಗೆ ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
8/ 8
ಒಂದು ಕಿಲೋಗ್ರಾಂ ಹೈಡ್ರೋಜನ್ 120 ಕಿಲೋಮೀಟರ್ ಪ್ರಯಾಣಿಸಬಲ್ಲದು. ಇದರ ಟ್ಯಾಂಕ್ 6.2 ಕೆ.ಜಿ. ಅಂದರೆ ಒಮ್ಮೆ ಟ್ಯಾಂಕ್ ತುಂಬಿದರೆ ಕಾರು ಸುಮಾರು 650 ಕಿ.ಮೀ. ವರೆಗೆ ಓಡಬಹುದು. (ಸಾಂಕೇತಿಕ ಚಿತ್ರ)