ಯಾರ್ ಗುರೂ ಕಾರ್ ವಾಶಿಂಗ್ ಕೊಡ್ತಾರೆ, ಮನೆಯಲ್ಲೇ ತೊಳೆದುಬಿಡ್ತೀನಿ ಅನ್ನೋರೆ ಹೆಚ್ಚು. ಈ ರೀತಿ ನೀವೂ ಕೂಡ ಈ ರೀತಿ ಮಾಡ್ತಿದ್ರೆ, ಈ ವಿಚಾರಗಳ ಬಗ್ಗೆ ಮೊದಲು ತಿಳಿದುಕೊಳ್ಳಿ. ಹೆಚ್ಚಿನ ಜನರು ಕಾರನ್ನು ತೊಳೆಯುವಾಗ ಲಾಂಡ್ರಿ ಡಿಟರ್ಜೆಂಟ್ ಅನ್ನು ಬಳಸುತ್ತಾರೆ. ಇದು ನಿಮ್ಮ ಕಾರಿನ ಬಣ್ಣಕ್ಕೆ ಅಪಾಯಕಾರಿ ಮಾತ್ರವಲ್ಲ, ಇದು ಕಾರಿನ ಬಾಡಿ ಲೈನ್ ಕೂಡ ಹಾಳುಮಾಡುತ್ತೆ. ಡಿಟರ್ಜೆಂಟ್ ನೇರವಾಗಿ ಕಾರಿನ ಬಣ್ಣದ ಪದರವನ್ನು ಹಾನಿಗೊಳಿಸುತ್ತದೆ. ಹೀಗೆ ನಿರಂತರವಾಗಿ ಮಾಡುವುದರಿಂದ ಹಲವೆಡೆ ಕಾರಿನ ಬಣ್ಣ ಕಳಚಬಹುದು.