Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

Bank News | ನೀವು ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಸಾರ್ವಜನಿಕ ವಲಯದ ಬ್ಯಾಂಕ್ ಇತ್ತೀಚೆಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನಾಳೆಯಿಂದ ಈ ಬ್ಯಾಂಕ್​​ನ ಶುಲ್ಕ ಹೆಚ್ಚಾಗಲಿದೆ.

First published:

  • 19

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    Debit Card | ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡುತ್ತಿದೆ. ನಾಳೆ ಅಂದ್ರೆ ಫೆಬ್ರವರಿ 13ರಂದು ಶುಲ್ಕವನ್ನು ಹೆಚ್ಚಿಸುವ ನಿರ್ಧಾರವನ್ನು ಕೆನರಾ ಬ್ಯಾಂಕ್ ತೆಗೆದುಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    ಕೆನರಾ ಬ್ಯಾಂಕ್ ವಿವಿಧ ರೀತಿಯ ಡೆಬಿಟ್ ಕಾರ್ಡ್‌ಗಳ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ. ವಾರ್ಷಿಕ ಶುಲ್ಕಗಳು, ಬದಲಿ ಶುಲ್ಕಗಳು, ಇನ್-ಆಕ್ಟಿವಿಟಿ ಶುಲ್ಕಗಳು ಇತ್ಯಾದಿಗಳನ್ನು ಹೆಚ್ಚಿಸಲಾಗಿದೆ. ಶುಲ್ಕ ಹೆಚ್ಚಳ ಬ್ಯಾಂಕ್ ಗ್ರಾಹಕರಿಗೆ ಹೊರೆ ಆಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, ಸಾರ್ವಜನಿಕ ವಲಯದ ಬ್ಯಾನ್ ಕ್ಲಾಸಿಕ್ ಕಾರ್ಡ್‌ನಲ್ಲಿ ವಾರ್ಷಿಕ ಶುಲ್ಕ ರೂ. 125 ರಿಂದ ರೂ. 200ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಪ್ಲಾಟಿನಂ ಕಾರ್ಡ್‌ನಲ್ಲಿ ಈ ಶುಲ್ಕಗಳು ರೂ. 250 ರಿಂದ ರೂ. 500 ತಲುಪಿದೆ. ಅಲ್ಲದೆ ಬ್ಯುಸಿನೆಸ್ ಕಾರ್ಡ್‌ಗಳಲ್ಲಿ ವಾರ್ಷಿಕ ಶುಲ್ಕ ರೂ. 300 ರಿಂದ ರೂ. 500 ತಲುಪಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    ಆದರೆ ಕೆಲವು ಕಾರ್ಡ್​ಗಳ ಮೇಲಿನ ಶುಲ್ಕ ಹೆಚ್ಚಳ ಮಾಡಿಲ್ಲ. ಇನ್ನು ಕಾರ್ಡ್ ವಿಧವನ್ನು ಬದಲಿಸುವ ಪ್ರಕ್ರಿಯೆಗೆ ಯಾವುದೇ ಶುಲ್ಕ ಇರಲಿಲ್ಲ. ಆದರೆ ನಾಳೆಯಿಂದ ಈ ಪ್ರಕ್ರಿಯೆಗೆ 150 ರೂಪಾಯಿ ಪಾವತಿಸಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    ಪ್ಲಾಟಿನಂ ಕಾರ್ಡ್​ ಶುಲ್ಕ ಸಹ 50 ರಿಂದ 150 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಬ್ಯುಸಿನೆಸ್ ಕಾರ್ಡ್ ಶುಲ್ಕ 150 ರೂ.ನಿಂದ 300ಕ್ಕೆ ಹೆಚ್ಚಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    ಡೆಬಿಟ್ ಕಾರ್ಡ್ ನಿಷ್ಕ್ರಿಯತೆಯ ಶುಲ್ಕವೂ (Inactivity fee) ಇದೆ. ಕ್ಲಾಸಿಕ್ ಕಾರ್ಡ್‌ಗಳು ಮತ್ತು ಪ್ಲಾಟಿನಂ ಕಾರ್ಡ್‌ಗಳ ಮೇಲೆ ಯಾವುದೇ ಶುಲ್ಕಗಳು ಇರಲಿಲ್ಲ. ಈಗ ಶುಲ್ಕಗಳು ಅನ್ವಯಿಸುತ್ತವೆ. 300 ರೂಪಾಯಿ ಡೆಬಿಟ್ ಕಾರ್ಡ್​ ನಿಷ್ಕ್ರಿಯತೆ ಶುಲ್ಕ ಪಾವತಿಸಬೇಕು. (ಸಾಂದರ್ಭಿಕ ಚಿತ್ರ )

    MORE
    GALLERIES

  • 79

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    ಹೆಚ್ಚುವರಿಯಾಗಿ ಬ್ಯಾಂಕಿನ ಮೇಲಿನ ಸೇವಾ ಶುಲ್ಕಗಳ ಮೇಲೆ ತೆರಿಗೆಗಳು ಏರಿಕೆಯಾಗಿವೆ. ಈ ಎಲ್ಲಾ ಹೊಸ ಸೇವಾ ಶುಲ್ಕಗಳು ಫೆಬ್ರವರಿ 13 ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಹೇಳಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    ಶುಲ್ಕ ಹೆಚ್ಚಳ ಡೆಬಿಟ್ ಕಾರ್ಡ್ ಬಳಕೆದಾರರ ಮೇಲೆ ನಕರಾತ್ಮಕ ಪರಿಣಾಮ ಬೀರಲಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಬ್ಯಾಂಕ್​ಗಳು ಶುಲ್ಕ ಹೆಚ್ಚಿಸುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Bank Charges: ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್; ನಾಳೆಯಿಂದ ಹೆಚ್ಚಾಗುತ್ತೆ ಶುಲ್ಕ

    ಕೆನರಾ ಬ್ಯಾಂಕಿನ ಹೊಸ ಸೇವಾ ಶುಲ್ಕಗಳ ಪಟ್ಟಿ ಹೀಗಿದೆ. ಶುಲ್ಕ ಎಷ್ಟು ಹೆಚ್ಚಾಗಿದೆ ಎಂಬುದನ್ನು ಟೇಬಲ್ ರೂಪದಲ್ಲಿ ತಿಳಿಯಿರಿ. (ಸಾಂದರ್ಭಿಕ ಚಿತ್ರ)

    MORE
    GALLERIES