Aadhar card Franchise: ಆಧಾರ್ ಕಾರ್ಡ್ ಫ್ರ್ಯಾಂಚೈಸ್ ಪಡೆಯಲು ನೀವು ಯುಐಡಿಎಐ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಪರೀಕ್ಷೆ ಉತ್ತೀರ್ಣರಾದ ಬಳಿಕ ಸೇವಾ ಕೇಂದ್ರ ಆರಂಭಿಸಲು ಪರವಾನಗಿ ನೀಡಲಾಗುತ್ತದೆ. ನಂತರ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೋಂದಾಯಿಸಿ ನಿಮ್ಮ ಕೆಲಸ ಆರಂಭಿಸಬಹುದು. ಇದಕ್ಕಾಗಿ ಆಧಾರ್ ನೋಂದಣಿ ಸಂಖ್ಯೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಅಗತ್ಯವಿರುತ್ತದೆ. (ಸಾಂದರ್ಭಿಕ ಚಿತ್ರ)
SBI ATM: ಎಸ್ಬಿಐ ಎಟಿಎಂ ಫ್ರಾಂಚೈಸಿಯನ್ನು ಪ್ರಾರಂಭಿಸಲು ನಿಮಗೆ ಸ್ಥಳಾವಕಾಶ ಬೇಕು. ಯಾವುದೇ ಬ್ಯಾಂಕ್ ಎಟಿಎಂ ಸ್ಥಾಪನೆ ಮಾಡಲ್ಲ. ಬದಲಾಗಿ ಎಟಿಎಂ ಸ್ಥಾಪಿಸಲು ಕೆಲವು ಕಂಪನಿಗಳಿಗೆ ಗುತ್ತಿಗೆ ನೀಡುತ್ತದೆ. ಆ ಕಂಪನಿಗಳು ಎಟಿಎಂ ಕೇಂದ್ರ ಸ್ಥಾಪನೆ ಮಾಡುತ್ತವೆ. ನೀವು ನಿಮ್ಮ ಮನೆ ಅಥವಾ ಅಂಗಡಿಗಳಲ್ಲಿ ಎಟಿಎಂ ಆರಂಭಿಸಬೇಕಾದ್ರೆ ಫ್ರಾಂಚೈಸ್ ತೆಗೆದುಕೊಳ್ಳಬೇಕು. (ಸಾಂದರ್ಭಿಕ ಚಿತ್ರ)
Post office Franchise: ಈ ಫ್ರಾಂಚೈಸ್ನ್ನು ಪೋಸ್ಟ್ ಆಫೀಸ್ ನೀಡುತ್ತದೆ. ಪೋಸ್ಟ್ ಆಫೀಸ್ ತೆರೆಯುವ ಮೂಲಕ ನೀವು ಹಣವನ್ನು ಗಳಿಸಬಹುದು. ಮೊದಲನೆಯದು ಫ್ರ್ಯಾಂಚೈಸ್ ಔಟ್ಲೆಟ್ ಮತ್ತು ಎರಡನೆಯದು ಪೋಸ್ಟಲ್ ಏಜೆಂಟ್ಸ್ ಫ್ರ್ಯಾಂಚೈಸ್ ಆಗಿದೆ. ಫ್ರಾಂಚೈಸಿಯನ್ನು ಹೊಂದಲು ನೀವು ಕೇವಲ 5000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಫ್ರ್ಯಾಂಚೈಸ್ ಪಡೆದ ನಂತರ ನೀವು ಕಮಿಷನ್ ಮೂಲಕ ಹಣ ಗಳಿಸಬಹುದು. (ಸಾಂದರ್ಭಿಕ ಚಿತ್ರ)
Amul Franchise- ಅಮುಲ್ ಎರಡು ರೀತಿಯ ಫ್ರ್ಯಾಂಚೈಸ್ ನೀಡುತ್ತದೆ. ಮೊದಲನೆಯದು ಅಮುಲ್ ಔಟ್ಲೆಟ್ ಮತ್ತು ಎರಡನೆಯದು ಕಿಯೋಸ್ಕ್ಗಳ ಫ್ರಾಂಚೈಸ್ ಹೊಂದಿರುವ ರೈಲ್ವೇ ಪಾರ್ಲರ್ ಆಗಿದೆ. ಇನ್ನೊಂದು ಅಮುಲ್ ಐಸ್ ಕ್ರೀಂನ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸ್. ಇದಕ್ಕಾಗಿ ನೀವು ಸಾಮಾನ್ಯವಾಗಿ 2 ಲಕ್ಷ ರೂಪಾಯಿಗಳನ್ನು ಹೊಂದಿರಬೇಕು. ಎರಡನೇ ವಿಧಕ್ಕೆ 5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಅಗತ್ಯವಿದೆ. ಇದರಿಂದ ನೀವು ಸುಲಭವಾಗಿ 25 ರಿಂದ 50 ಸಾವಿರ ರೂಪಾಯಿ ಹಣ ಗಳಿಸಬಹುದು.