Business Idea: ಕುರಿ-ಕೋಳಿನು ಅಲ್ಲ, ಹಸು-ಎಮ್ಮೆನೂ ಅಲ್ಲ! ಈ ಪಕ್ಷಿ ಫಾರ್ಮಿಂಗ್ ಶುರು ಮಾಡಿದ್ರೆ ಸಿಕ್ಕಾಪಟ್ಟೆ ದುಡ್ಡು
ಟರ್ಕಿ ಪಕ್ಷಿಯ ಮೊಟ್ಟೆಯ ತೂಕವೂ ಕೋಳಿ ಮೊಟ್ಟೆಗಿಂತ ಹೆಚ್ಚು. ಟರ್ಕಿಯು ವರ್ಷಕ್ಕೆ 100 ರಿಂದ 120 ಮೊಟ್ಟೆಗಳನ್ನು ಇಡುತ್ತದೆ. ಇತ್ತ ಮೊಟ್ಟೆಯಿಂದಲೂ ಲಾಭ, ಮಾಂಸದಿಂದಲೂ ಲಾಭ ಎನ್ನಬಹುದು.
ಪ್ರಾಣಿ, ಪಕ್ಷಿಗಳ ಫಾರ್ಮಿಂಗ್ನಿಂದ ಅದೆಷ್ಟೋ ಮಂದಿ ಹಣ ಗಳಿಸುತ್ತಾ ನೆಮ್ಮದಿಯಾಗಿದ್ದಾರೆ. ನೀವೂ ಕೂಡ ಏನಾದ್ರೂ ಬ್ಯುಸಿನೆಸ್ ಮಾಡಿ ಹಣ ಮಾಡಬೇಕು ಅಂತ ಇದ್ದರೆ, ನೀವೂ ಅನಿಮಲ್ ಫಾರ್ಮಿಂಗ್ ಶುರು ಮಾಡಿ. ಎಲ್ಲರಿಗಿಂತ ಭಿನ್ನವಾಗಿ ಈ ಪಕ್ಷಿ ಫಾರ್ಮಿಂಗ್ ಶುರು ಮಾಡಿದ್ರೆ ಡಬಲ್ ಲಾಭ ಗಳಿಸಬಹುದು.
2/ 8
ನಮ್ಮ ದೇಶದಲ್ಲಿ ಟರ್ಕಿ ಕೃಷಿ ವೇಗವಾಗಿ ಹೆಚ್ಚುತ್ತಿದೆ. ಕುರಿ, ಕೋಳಿ, ಹಸು, ಎಮ್ಮೆ ಫಾರ್ಮಿಂಗ್ ಕಾಮನ್ ಆಗಿದೆ. ಆದರೆ, ಈ ಟರ್ಕಿಯನ್ನು ನಂಬಿಕೊಂಡಿರುವ ರೈತರು ಡಬಲ್ ಪಾಫ್ರಿಟ್ನಲ್ಲಿದ್ದಾರೆ. ಟರ್ಕಿ ಕೃಷಿಯಿಂದಾಗಿ ರೈತರ ಆದಾಯವು ಹೆಚ್ಚಾಗುತ್ತದೆ.
3/ 8
ಮಹಾರಾಣಾ ಪ್ರತಾಪ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಉದಯಪುರದ ಅಡಿಯಲ್ಲಿ ಪಶು ಉತ್ಪಾದನಾ ಇಲಾಖೆಯು ಕೇರಿ ವಿರಾಟ್ ತಳಿಯ ಟರ್ಕಿಯನ್ನು ಸಾಕುತ್ತಿದೆ. ಟರ್ಕಿ ಸಾಕಣೆಯನ್ನು ಮುಖ್ಯವಾಗಿ ಮಾಂಸ, ಮೊಟ್ಟೆ ಮತ್ತು ಗೊಬ್ಬರಕ್ಕಾಗಿ ಮಾಡಲಾಗುತ್ತದೆ.
4/ 8
ಅದರ ಮಾಂಸದಲ್ಲಿ ಸುಮಾರು 25 ಪ್ರತಿಶತದಷ್ಟು ಮತ್ತು ಮೊಟ್ಟೆಗಳಲ್ಲಿ 13 ಪ್ರತಿಶತದಷ್ಟು ಪ್ರೋಟೀನ್ ಕಂಡುಬರುತ್ತದೆ. ಸಾರಜನಕ 5 ರಿಂದ 6 ಪ್ರತಿಶತ ಮತ್ತು ಪೊಟ್ಯಾಶ್ 2 ರಿಂದ 3 ಪ್ರತಿಶತ ಇದರ ಗೊಬ್ಬರದಲ್ಲಿ ಕಂಡುಬರುತ್ತದೆ. ಹೀಗಾಗಿ ಟರ್ಕಿ ಫಾರ್ಮಿಂಗ್ ಮಾಡುವುದು ಉತ್ತಮ.
5/ 8
ಟರ್ಕಿ ಕೃಷಿಯು ವಿಶೇಷವಾಗಿ ಹಳ್ಳಿಗಳಲ್ಲಿ ಮತ್ತು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ವ್ಯವಹಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಸೂಕ್ತವಾಗಿದೆ.
6/ 8
ಟರ್ಕಿಯ ದೇಹದ ಬೆಳವಣಿಗೆಯು ವೇಗವಾಗಿರುತ್ತದೆ, ಇದರಿಂದಾಗಿ ಅದರ ತೂಕವು 7 ರಿಂದ 8 ತಿಂಗಳುಗಳಲ್ಲಿ 10 ರಿಂದ 12 ಕೆಜಿ ಆಗುತ್ತದೆ. 7 ರಿಂದ 8 ತಿಂಗಳು ಅವುಗಳಿಗೆ ಸೂಕ್ತವಾದ ಆಹಾರ ನೀಡಿದರೆ ಸಾಕು, ನಂತರ ನೀವು ಹೆಚ್ಚಿನ ಆದಾಯ ಗಳಿಸಬಹುದು.
7/ 8
ಟರ್ಕಿ ಪಕ್ಷಿಯ ಮೊಟ್ಟೆಯ ತೂಕವೂ ಕೋಳಿ ಮೊಟ್ಟೆಗಿಂತ ಹೆಚ್ಚು. ಟರ್ಕಿಯು ವರ್ಷಕ್ಕೆ 100 ರಿಂದ 120 ಮೊಟ್ಟೆಗಳನ್ನು ಇಡುತ್ತದೆ. ಇತ್ತ ಮೊಟ್ಟೆಯಿಂದಲೂ ಲಾಭ, ಮಾಂಸದಿಂದಲೂ ಲಾಭ ಎನ್ನಬಹುದು.
8/ 8
ಟರ್ಕಿ ಮಾಂಸ ಮಧುಮೇಹಿಗಳಿಗೆ ಉಪಯುಕ್ತವಾಗಿದೆ. ಇದರ ಮಾಂಸವು ಅಮೈನೋ ಆಮ್ಲಗಳು, ನಿಯಾಸಿನ್, ವಿಟಮಿನ್-ಬಿ ಮುಂತಾದ ಜೀವಸತ್ವಗಳಿಂದ ತುಂಬಿರುತ್ತದೆ. ಇದು ಅಪರ್ಯಾಪ್ತ ಕೊಬ್ಬಿನಾಮ್ಲಗಳು ಮತ್ತು ಇತರ ಅಗತ್ಯ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ.