ಇತ್ತೀಚಿಗೆ ಅನೇಕ ಜನರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದಾರೆ. ಕೆಲಸದಿಂದ ಬೇಸತ್ತ ಅನೇಕರು ಸ್ವಂತ ಉದ್ಯಮ ಆರಂಭಿಸಿ ಬೇರೆಯವರಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದ್ದಾರೆ. ಅನೇಕರು ವ್ಯಾಪಾರ ಮಾಡಲು ಆಸಕ್ತಿ ಹೊಂದಿದ್ದರೂ ಹೂಡಿಕೆ ಹಣದ ವಿಚಾರದಲ್ಲಿ ಹಿಂದೆ ಸರಿಯುತ್ತಿದ್ದಾರೆ. ಆದರೆ ಅತಿ ಕಡಿಮೆ ಹೂಡಿಕೆಯಲ್ಲಿ ಉದ್ಯಮ ಆರಂಭಿಸಬಹುದು. (ಸಾಂಕೇತಿಕ ಚಿತ್ರ)
ಕೇವಲ 850 ರೂ.ಗೆ ಯಂತ್ರವನ್ನು ಖರೀದಿಸುವ ಮೂಲಕ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಲಾಭಗಳು ಪ್ರಾರಂಭವಾಗುತ್ತಿದ್ದಂತೆ, ಲಾಭವನ್ನು ಹೆಚ್ಚಿಸಲು ದೊಡ್ಡದಾಗಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ಇದಲ್ಲದೇ ಕಚ್ಚಾವಸ್ತುಗಳಿಗೆ ಒಂದಿಷ್ಟು ಹಣ ಖರ್ಚು ಮಾಡಬೇಕು. ಮೊದಲ ಹಂತದಲ್ಲಿ ರೂ.100ರಿಂದ 200 ದರದಲ್ಲಿ ಕಚ್ಚಾವಸ್ತು ಖರೀದಿಸಬಹುದು. (ಸಾಂಕೇತಿಕ ಚಿತ್ರ)
ಈ ಚಿಪ್ಸ್ ವ್ಯಾಪಾರವನ್ನು ಸಣ್ಣ ಬಂಡಿ ಅಥವಾ ಮನೆಯ ಮುಂದೆ ಸ್ಟಾಲ್ನಿಂದ ಮಾರಾಟ ಮಾಡಲು ಪ್ರಾರಂಭಿಸಬಹುದು. ಕೆಲವು ಅಂಗಡಿಯವರೊಂದಿಗೆ ಮಾತನಾಡಿ ಒಪ್ಪಂದ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ವ್ಯಾಪಾರವು ಹೆಚ್ಚು ಜನರನ್ನು ತಲುಪುತ್ತದೆ ಮತ್ತು ಜನಪ್ರಿಯವಾಗುತ್ತದೆ. ಆಲೂಗಡ್ಡೆ, ಬಿಟ್ರೋಟ್, ಬಾಳೆಕಾಯಿ ಚಿಪ್ಸ್ ಆದಾಯವು ವೆಚ್ಚಕ್ಕಿಂತ 7 ಪಟ್ಟು ಹೆಚ್ಚು. (ಸಾಂಕೇತಿಕ ಚಿತ್ರ)