ಊರಲ್ಲೇ ಇದ್ದು ಹಣ ಗಳಿಸುವುದು ಇಂದಿನ ಯುವಕರು ಕಂಡುಕೊಂಡ ಅತ್ಯುತ್ತಮ ಆದಾಯದ ದಾರಿ. ಹೆಚ್ಚು ಖರ್ಚಿಲ್ಲದೇ ಆರಾಮದಾಯಕ ಮತ್ತು ನೆಮ್ಮದಿಯ ಜೀವನವೂ ಊರಲ್ಲಿ ಸಿಗುತ್ತದೆ. ನೀವೂ ಊರಲ್ಲೇ ಇದ್ದು ಪ್ರಾಮಾಣಿಕವಾಗಿ ಖುಷಿಯಿಂದ ಹಣ ಗಳಿಸಲು ಹೈನುಗಾರಿಕೆ ಮಾಡಬಹುದು.
2/ 9
ಹಾಗಾದರೆ ಯಾವ ತಳಿಯ ಆಕಳುಗಳನ್ನು ಸಾಕಬೇಕು? ಇಲ್ಲಿದೆ ಉತ್ತರ
3/ 9
ಕೆಂಪು ಸಿಂಧಿ ಆಕಳು ಜನಪ್ರಿಯ ಮತ್ತು ಅತ್ಯಂತ ಹೆಚ್ಚು ಹಾಲು ನೀಡುವ ತಳಿಗಳಾಗಿವೆ. ಈ ತಳಿಯು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹುಟ್ಟಿಕೊಂಡಿತು. ತಳಿಯ ಪ್ರಾಣಿಗಳು ಉಷ್ಣ ಹವಾಮಾನವನ್ನು ಸಹಿಸಿಕೊಳ್ಳುತ್ತವೆ. ಈ ತಳಿಯ ಹಸುಗಳು ಉತ್ತಮ ಹಾಲುಕರೆಯುತ್ತವೆ. ತಳಿಯನ್ನು "ಮಾಲಿರ್", "ರೆಡ್ ಕರಾಚಿ" ಮತ್ತು "ಸಿಂಧಿ" ಎಂದೂ ಕರೆಯಲಾಗುತ್ತದೆ.
4/ 9
ಕೆಂಪು ಸಿಂಧಿ ತಳಿಯ ಹಸುಗಳನ್ನು ಅಮೆರಿಕಾ, ಆಸ್ಟ್ರೇಲಿಯಾ, ಫಿಲಿಪೈನ್ಸ್, ಬ್ರೆಜಿಲ್ ಮತ್ತು ಶ್ರೀಲಂಕಾ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳಲ್ಲೂ ಸಾಕಲಾಗುತ್ತದೆ. ಭಾರತದಲ್ಲಿ ಈ ತಳಿಯ ಆಕಳುಗಳ ಕೊರತೆ ಇರುವುದರಿಂದ ಅಳಿವಿನಂಚಿನಲ್ಲಿರುವ ಹಸುವಿನ ತಳಿ ಎಂದು ಪರಿಗಣಿಸಲಾಗುತ್ತದೆ.
5/ 9
ಕೆಂಪು ಸಿಂಧಿ ಹಸು 116 ಸೆಂ.ಮೀ ಎತ್ತರ ಮತ್ತು ಸರಾಸರಿ 340 ಕೆಜಿ ತೂಗುತ್ತದೆ. ಎತ್ತುಗಳು 134 ಸೆಂ ಎತ್ತರ ಮತ್ತು ಸರಾಸರಿ 420 ಕೆಜಿ ತೂಗುತ್ತವೆ. ಅವು ಸಾಮಾನ್ಯವಾಗಿ ಗಾಢವಾದ ಕೆಂಪು ಬಣ್ಣವನ್ನು ಹೊಂದಿರುತ್ತವೆ.
6/ 9
ಕೆಂಪು ಸಿಂಧಿ ಹಸುಗಳು ಹೆಚ್ಚಿನ ಹಾಲನ್ನು ಕರೆಯುತ್ತವೆ. ಭಾರತೀಯ ಜಾನುವಾರು ತಳಿಗಳಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಆಕಳಿನ ತಳಿಗಳಲ್ಲೊಂದಾಗಿದೆ. ಸಿಂಧಿ ಹಸುಗಳು ಬಹುತೇಕ 41 ನೇ ತಿಂಗಳಲ್ಲಿ ಮೊದಲ ಬಾರಿಗೆ ಕರು ಹಾಕುತ್ತವೆ. (ಸಾಂಕೇತಿಕ ಚಿತ್ರ)
7/ 9
ಸರಿಯಾಗಿ ಚೆನ್ನಾಗಿ ಸಾಕಿದ ಕೆಂಪು ಸಿಂದಿ ಆಕಳು ದಿನಕ್ಕೆ 12 ಕ್ಕೂ ಹೆಚ್ಚು ಲೀಟರ್ ಹಾಲನ್ನು ಉತ್ಪಾದಿಸಬಲ್ಲದು.
8/ 9
ಊರಲ್ಲೇ ಇದ್ದುಕೊಂಡು ಪರಿಸರದ ಜೊತೆ ಬೆರೆದು ಹಣ ಗಳಿಕೆಗೆ ಹೈನುಗಾರಿಕೆ, ಅದರಲ್ಲೂ ಕೆಂಪು ಸಿಂಧಿ ತಳಿಯ ಆಕಳುಗಳ ಸಾಕುವಿಕೆ ಉತ್ತಮ ದಾರಿ (ಸಾಂಕೇತಿಕ ಚಿತ್ರ)
9/ 9
ಆಕಳು ಕೇವಲ ಜೀವಿಯೊಂದೇ ಅಲ್ಲ, ಅದು ಮನುಷ್ಯರ ಜೀವನಕ್ಕೂ ದಾರಿ ಮಾಡಿಕೊಡುವ ಪುಣ್ಯಕೋಟಿ