Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

Budget 2023: ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಕೇಂದ್ರ ಬಜೆಟ್​ ಮಂಡನೆ ಮಾಡಲಿದ್ದಾರೆ. ಆದರೆ ಕೆಲ ವರದಿಗಳ ಪ್ರಕಾರ ಬಜೆಟ್​ ಬಳಿಕ ಆಮದು ಸುಂಕ ಸೇರಿದಂತೆ ಕೆಲವು ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

First published:

  • 18

    Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

    ಕೇಂದ್ರ ಸರ್ಕಾರ ಇದೀಗ ಬಜೆಟ್ 2023 ಮಂಡನೆ ಮಾಡಲು ಸಿದ್ದವಾಗಿದೆ. ಮೋದಿ ಸರ್ಕಾರ 2023-24ರ ಹಣಕಾಸು ವರ್ಷಕ್ಕೆ ಹೊಸ ಬಜೆಟ್ ಅನ್ನು ತರಲಿದೆ. ಈ ಬಾರಿಯ ಬಜೆಟ್ ಮೇಲೆ ಎಲ್ಲರಿಗೂ ಭಾರಿ ನಿರೀಕ್ಷೆ ಇದೆ.

    MORE
    GALLERIES

  • 28

    Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

    ಆದರೆ ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸಲು ಮತ್ತು ದೇಶೀಯ ಉತ್ಪಾದಕರಿಗೆ ಪರಿಹಾರ ನೀಡಲು ಕೇಂದ್ರವು ಈ ನಿರ್ಧಾರವನ್ನು ತೆಗೆದುಕೊಳ್ಳಬಹುದೆಂದು ವರದಿಗಳಾಗಿದೆ.

    MORE
    GALLERIES

  • 38

    Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

    ಈ ಬಜೆಟ್‌ನಲ್ಲಿ ಮೋದಿ ಸರ್ಕಾರ ಸುಮಾರು 35 ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಆಮದು ಸುಂಕವನ್ನು ಹೆಚ್ಚಿಸುವ ಪಟ್ಟಿಯನ್ನು ಕೇಂದ್ರ ಸರ್ಕಾರ ಈಗಾಗಲೇ ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 48

    Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

    ಖಾಸಗಿ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ವಸ್ತುಗಳು, ಆಭರಣಗಳು, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಇತರ ಹಲವು ವಸ್ತುಗಳ ಮೇಲೆ ಸುಂಕಗಳು ಹೆಚ್ಚಾಗಬಹುದು. ವಿವಿಧ ಸಚಿವಾಲಯಗಳಿಂದ ಸುಂಕವನ್ನು ಹೆಚ್ಚಿಸಬೇಕಾದ ಉತ್ಪನ್ನಗಳ ಪಟ್ಟಿಯನ್ನು ಕೇಂದ್ರ ಸಿದ್ಧಪಡಿಸಿಕೊಂಡಿದೆ ಎಂದು ವರದಿಯಾಗಿದೆ.

    MORE
    GALLERIES

  • 58

    Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

    ಆಮದು ಹೆಚ್ಚು ದುಬಾರಿಯಾದರೆ, ದೇಶೀಯ ಉತ್ಪಾದನೆಯು ಹೆಚ್ಚಾಗುತ್ತದೆ ಎಂದು ಕೇಂದ್ರವು ಆಶಿಸಿದೆ. ಡಿಸೆಂಬರ್ ತಿಂಗಳಲ್ಲಿ, ವಾಣಿಜ್ಯ ಸಚಿವಾಲಯವು ಆಮದು ಸುಂಕವನ್ನು ಹೆಚ್ಚಿಸುವ ಅವಕಾಶವಿರುವ ಉತ್ಪನ್ನಗಳ ವಿವರಗಳನ್ನು ನೀಡುವಂತೆ ವಿವಿಧ ಸಚಿವಾಲಯಗಳನ್ನು ಕೇಳಿತ್ತು.

    MORE
    GALLERIES

  • 68

    Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

    ಇದಲ್ಲದೆ, ಚಾಲ್ತಿ ಖಾತೆ ಕೊರತೆ ಹೆಚ್ಚುತ್ತಿರುವ ಸಮಯದಲ್ಲಿ ಆಮದು ಕಡಿಮೆ ಮಾಡಲು ಕೇಂದ್ರ ಸರ್ಕಾರವೂ ಉದ್ದೇಶಿಸಿದೆ. ಚಾಲ್ತಿ ಖಾತೆ ಕೊರತೆಯು 9 ತಿಂಗಳ ಗರಿಷ್ಠ 4.4 ಶೇಕಡಾಕ್ಕೆ ವಿಸ್ತರಿಸಿದೆ. ಇದು ಜುಲೈ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲಾಗಿದೆ.

    MORE
    GALLERIES

  • 78

    Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

    ಇದಲ್ಲದೆ, ಭಾರತದ ಜಿಡಿಪಿ ಬೆಳವಣಿಗೆಯು ನಿಧಾನವಾಗಬಹುದು ಎಂದು ಐಎಂಎಫ್ ಭವಿಷ್ಯ ನುಡಿದಿದೆ. 2023-24ರಲ್ಲಿ ಬೆಳವಣಿಗೆ ದರ ಶೇ.6.1ರಷ್ಟು ದಾಖಲಾಗುವ ನಿರೀಕ್ಷೆಯಿದೆ. ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ಹಿಂಜರಿತವು ಭಾರತದ ಮೇಲೆ ಪರಿಣಾಮ ಬೀರಲಿದೆ ಎಂದು IMF ಭವಿಷ್ಯ ನುಡಿದಿದೆ.

    MORE
    GALLERIES

  • 88

    Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್‌ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯೂ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಜನಸಾಮಾನ್ಯರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೇಂದ್ರ ಯಾವ ರೀತಿಯ ವರವನ್ನು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    MORE
    GALLERIES