LPG Cylinder |ನವೆಂಬರ್ ಅಂತ್ಯ ಬಂದಿದ್ದು, ಇನ್ನೊಂದು ದಿನ ಕಳೆದ್ರೆ ಡಿಸೆಂಬರ್ ಆಗಮನವಾಗಲಿದೆ. ಡಿಸೆಂಬರ್ ಆರಂಭವಾಗುತ್ತಿದ್ದಂತೆ ಬರುವ ಹೊಸ ನಿಯಮಗಳನ್ನು ನೀವು ತಿಳಿದುಕೊಳ್ಳಬೇಕು. (ಸಾಂದರ್ಭಿಕ ಚಿತ್ರ)
2/ 9
ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್, ಪಿಂಚಣಿಯಿಂದ ಜೀವಿತ ಪ್ರಮಾಣ ಪತ್ರ ಸೇರಿದಂತೆ ಹಲವು ನಿಯಮಗಳು ಬದಲಾವಣೆ ಆಗಲಿವೆ. ಈ ಬದಲಾವಣೆ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನು ತಿಳಿದುಕೊಳ್ಳಿ. (ಸಾಂದರ್ಭಿಕ ಚಿತ್ರ)
3/ 9
ಪಂಜಾಬ್ ನ್ಯಾಷನಲ್ ಬ್ಯಾಂಕ್ ಡಿಸೆಂಬರ್ ನಿಂದ ಹೊಸ ನಿಯಮವನ್ನು ತರುತ್ತಿದೆ. ಎಟಿಎಂನಿಂದ ಹಣವನ್ನು ಹಿಂಪಡೆಯಲು ನೀವು OTP ಸಂಖ್ಯೆಯನ್ನು ನಮೂದಿಸಬೇಕು. ಎಟಿಎಂ ವ್ಯವಹಾರವನ್ನು ಹೆಚ್ಚು ಸುರಕ್ಷಿತವಾಗಿರಿಸಲು ಈ ನಿಯಮ ತರಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
4/ 9
ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಈ ತಿಂಗಳ ಅಂತ್ಯದೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು. ಸಲ್ಲಿಕೆ ಮಾಡದಿದ್ರೆ ಡಿಸೆಂಬರ್ನಿಂದ ಪಿಂಚಣಿ ನಿಮಗೆ ಸಿಗಲ್ಲ. ಆದ್ದರಿಂದ ಶೀಘ್ರವೇ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಮಾಡಿ. (ಸಾಂದರ್ಭಿಕ ಚಿತ್ರ)
5/ 9
ಪ್ರತಿ ಬಾರಿಯಂತೆ ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಮತ್ತು ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಬಹುದು. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿತ್ತು. ಈ ಬಾರಿಯೂ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗುವ ನಿರೀಕ್ಷೆಗಳಿವೆ. (ಸಾಂದರ್ಭಿಕ ಚಿತ್ರ)
6/ 9
ಚಳಿಗಾಲ ಆರಂಭವಾಗಿರುವ ಹಿನ್ನೆಲೆ ಡಿಸೆಂಬರ್ 1ರಿಂದ ಕೆಲವು ರೈಲುಗಳ ವೇಳಾಪಟ್ಟಿ ಬದಲಾಗಲಿದೆ. (ಸಾಂದರ್ಭಿಕ ಚಿತ್ರ)
7/ 9
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು KYC ಪೂರ್ಣಗೊಳಿಸಬೇಕು. ಇದಕ್ಕೆ ಡಿಸೆಂಬರ್ 12 ಕೊನೆಯ ದಿನವಾಗಿದೆ. ಕೆವೈಸಿ ಪೂರ್ಣ ಮಾಡದ ಖಾತೆಗಳ ವ್ಯವಹಾರಗಳನ್ನು ತಡೆಹಿಡಿಯಲಾಗುತ್ತದೆ. (ಸಾಂದರ್ಭಿಕ ಚಿತ್ರ)
8/ 9
ಡಿಸೆಂಬರ್ 1 ರಿಂದ ದ್ವಿಚಕ್ರ ವಾಹನಗಳ ಬೆಲೆ ಕೂಡ ಏರಿಕೆಯಾಗಲಿದೆ. ಹೀರೋ ಮೋಟೋಕಾರ್ಪ್ ಬೆಲೆ ಏರಿಕೆಯನ್ನು ಘೋಷಿಸಿದೆ. ಡಿಸೆಂಬರ್ 1 ರಿಂದ ಹೀರೋ ದ್ವಿಚಕ್ರ ವಾಹನಗಳ ಬೆಲೆ ರೂ. 1500 ವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)
9/ 9
ಡಿಸೆಂಬರ್ನಲ್ಲಿ ದೇಶಾದ್ಯಂತ ಬ್ಯಾಂಕ್ಗಳಿಗೆ 14 ದಿನಗಳ ರಜೆ ಇದೆ. ಈ ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. (ಸಾಂದರ್ಭಿಕ ಚಿತ್ರ)