ಪ್ರಾಚೀನ ಕಾಲದಲ್ಲಿ ಮನೆಗಳಲ್ಲಿ ಮಡಕೆಗಳನ್ನು ಬಳಸಲಾಗುತ್ತಿತ್ತು. ಎಲ್ಲ ತಿಂಡಿ ತಿನಿಸು- ಭಕ್ಷ್ಯವನ್ನು ಮಣ್ಣಿನ ಪಾತ್ರೆಗಳಲ್ಲಿ ಮಾಡಲಾಗುತ್ತಿತ್ತು. ಆದರೆ, ಕಾಲಕ್ರಮೇಣ ಉಂಟಾದ ಬದಲಾವಣೆಗಳಿಂದ ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು ಬಂದು ಮಡಿಕೆಗಳಿಗೆ ಬದಲಿಯಾಗಿವೆ. ಅದೇನೇ ಇರಲಿ, ಅಲ್ಯೂಮಿನಿಯಂ, ಸ್ಟೀಲ್, ಪ್ಲಾಸ್ಟಿಕ್ ನಿಂದ ತಯಾರಿಸಿದ ಪಾತ್ರೆಗಳನ್ನು ಹೆಚ್ಚು ಹೆಚ್ಚು ಬಳಸತೊಡಗಿದಾಗಿನಿಂದ ಕಾಯಿಲೆಗಳೂ ಹೆಚ್ಚಾಗತೊಡಗಿವೆ ಎನ್ನುತ್ತಾರೆ ದೊಡ್ಡವರು.