* ಹೋಂಡಾ ಆಕ್ಟಿವಾ 6G : ಹೋಂಡಾ ಆಕ್ಟಿವಾ ಭಾರತದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್ಗಳಲ್ಲಿ ಒಂದಾಗಿದೆ. ಇದು ಸ್ಟ್ಯಾಂಡರ್ಡ್ ಟ್ರಿಮ್, ಡಿಎಲ್ಎಕ್ಸ್ ಮತ್ತು ಪ್ರೀಮಿಯಂ ಎಡಿಷನ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ರೂಪಾಂತರಗಳ ಬೆಲೆಗಳು ಇದು ರೂ.73,086 ರಿಂದ ರೂ.76,587 ರ ನಡುವೆ ಇದೆ. ಪ್ರಸ್ತುತ BS6-ಕಾಂಪ್ಲೈಂಟ್ Activa 6G 109.51cc, ಸಿಂಗಲ್-ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ನೊಂದಿಗೆ ಲಭ್ಯವಿದೆ. ಇದು 7.79PS ಗರಿಷ್ಠ ಶಕ್ತಿಯನ್ನು ಜೊತೆಗೆ 8.84Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟಿಯು 60 kmpl ಮೈಲೇಜ್ ನೀಡುತ್ತದೆ.
* ಸುಜುಕಿ ಆಕ್ಸೆಸ್ 125 : ಜಪಾನಿನ ಬೈಕ್ ತಯಾರಕ ಸುಜುಕಿಯ ಆಕ್ಸೆಸ್ 125 ಸ್ಕೂಟಿ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್, ಸ್ಪೆಷಲ್ ಎಡಿಷನ್, ರೈಡ್ ಕನೆಕ್ಟೆಡ್ ಎಡಿಷನ್ ಮುಂತಾದ ರೂಪಾಂತರಗಳಲ್ಲಿ ಲಭ್ಯವಿದೆ. ಸುಜುಕಿ ಆಕ್ಸೆಸ್ 125 ಸ್ಕೂಟಿಯು 124cc ಇಂಧನ-ಇಂಜೆಕ್ಟೆಡ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ. ಇದು 64 kmpl ಮೈಲೇಜ್ ನೀಡುತ್ತದೆ. ಈ ಸ್ಕೂಟಿಯಲ್ಲಿ 5 ಲೀಟರ್ ಇಂಧನ ಟ್ಯಾಂಕ್ ಇದೆ. ಇದು ಟ್ಯಾಂಕ್ ವ್ಯಾಪ್ತಿಯನ್ನು 300 ಕಿಲೋಮೀಟರ್ಗಳಿಗಿಂತ ಹೆಚ್ಚು ಮಾಡುತ್ತದೆ. ಸುಜುಕಿ ಆಕ್ಸೆಸ್ 125 ಬೆಲೆ ರೂ. 77,600 ರಿಂದ ರೂ.87,200 (ಎಕ್ಸ್ ಶೋ ರೂಂ).
* ಯಮಹಾ ರೇಜರ್ 125: ಯಮಹಾ ಕಂಪನಿಯ ಯಮಹಾ ರೇಜರ್ 125 ಬೈಕ್ ಐದು ರೂಪಾಂತರಗಳಲ್ಲಿ ಲಭ್ಯವಿದೆ. ಡ್ರಮ್, ಡಿಸ್ಕ್, DLX, MotoGP ಮತ್ತು ಸ್ಟ್ರೀಟ್ ರ್ಯಾಲಿ ಆವೃತ್ತಿಗಳಲ್ಲಿ ಲಭ್ಯವಿದೆ. ವಿನ್ಯಾಸದ ವಿಷಯದಲ್ಲಿ, Yamaha Fascino 125cc ಮೈಲ್ಡ್-ಹೈಬ್ರಿಡ್ ಸ್ಕೂಟರ್ ಹೋಲುತ್ತದೆ. ಈ ಸ್ಪೋರ್ಟಿಯರ್ RayZR ಸರಿಸುಮಾರು 66 kmpl ಮೈಲೇಜ್ ನೀಡುತ್ತದೆ. ಈ ಸ್ಕೂಟಿಯ ಬೆಲೆಗಳು ರೂ.80,730 ರಿಂದ ರೂ. 90,130 (ಎಕ್ಸ್ ಶೋ ರೂಂ).
* ಯಮಹಾ ಫ್ಯಾಸಿನೊ ಹೈಬ್ರಿಡ್ 125 : ಯಮಹಾ ಕಂಪನಿಯ ಈ ಸ್ಕೂಟರ್ ಉತ್ತಮ ಸ್ಟೈಲಿಶ್ ಲುಕ್ ನೀಡುತ್ತದೆ. ಹೊಸ ಫ್ಯಾಸಿನೊ 125 ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಡ್ರಮ್ ಬ್ರೇಕ್ ರೂಪಾಂತರದ ಬೆಲೆ ರೂ 76,600 (ಎಕ್ಸ್ ಶೋ ರೂಂ ದೆಹಲಿ). SPL ಡಿಸ್ಕ್ ರೂಪಾಂತರದ ಬೆಲೆ ರೂ 87,830 (ಎಕ್ಸ್ ಶೋ ರೂಂ ದೆಹಲಿ). ಯಮಹಾ ಫ್ಯಾಸಿನೊ ಹೈಬ್ರಿಡ್ ತನ್ನ ಸೌಮ್ಯ-ಹೈಬ್ರಿಡ್ ವಿನ್ಯಾಸದೊಂದಿಗೆ ಭಾರತದಲ್ಲಿ ಹೆಚ್ಚು ಇಂಧನ ದಕ್ಷತೆಯ 125cc ಸ್ಕೂಟಿಯಾಗಿ ಜನಪ್ರಿಯವಾಗಿದೆ.