ರಸಗೊಬ್ಬರದ ಅಂಗಡಿ Fertilizer and Seeds shop license
ಗ್ರಾಮದ ಬಹುತೇಕ ಜನರು ಕೃಷಿ ಮಾಡುತ್ತಿರುತ್ತಾರೆ. ಹಾಗಾಗಿ ರೈತರಿಗೆ ರಸಗೊಬ್ಬರ ಮತ್ತು ಬೀಜಗಳ ಅಗತ್ಯ ಇರುತ್ತೆ. ನೀವು ಹಳ್ಳಿ ಅಥವಾ ಸಮೀಪದ ಪಟ್ಟಣದಲ್ಲಿ ರಸಗೊಬ್ಬರ ಮತ್ತು ಬೀಜದ ಅಂಗಡಿಯನ್ನು ತೆರೆಯಬಹುದು. ಇದಲ್ಲದೇ ಸರಕಾರದಿಂದ ಸಿಗುವ ರಸಗೊಬ್ಬರ ಮತ್ತು ಬೀಜಗಳ ಮೇಲಿನ ಸಬ್ಸಿಡಿ ಲಾಭವನ್ನು ಗ್ರಾಹಕರಿಗೆ ನೀಡಿದರೆ ನಿಮ್ಮ ಅಂಗಡಿಯಿಂದ ಹೆಚ್ಚು ಹೆಚ್ಚು ಗ್ರಾಹಕರು ಖರೀದಿಸುತ್ತಾರೆ. (ಸಾಂದರ್ಭಿಕ ಚಿತ್ರ)
ಸಾವಯವ ಕೃಷಿ Organic farming
ಕಲಬೆರಕೆ ಯುಗದಲ್ಲಿ ಈಗ ಪ್ರತಿಯೊಬ್ಬರೂ ಸಾವಯವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಸಾವಯವ ವಸ್ತುಗಳಿಗೆ ಜನರು ಹೆಚ್ಚಿನ ಬೆಲೆ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಐಐಟಿ ವಿದ್ಯಾರ್ಥಿಗಳು ಸಾವಯವ ಕೃಷಿಯತ್ತ ಗಮನಹರಿಸಿ ದೊಡ್ಡ ಮೊತ್ತವನ್ನು ಗಳಿಸುತ್ತಿದ್ದಾರೆ. ಈ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ನೀವು ಸಹ ಉತ್ತಮ ಹಣವನ್ನು ಗಳಿಸಬಹುದು. (ಸಾಂದರ್ಭಿಕ ಚಿತ್ರ)