ಕಳೆದ 72 ಗಂಟೆಗಳಲ್ಲಿ ಖಾಸಗಿ ಬ್ಯಾಂಕ್‌ನ ಕನಿಷ್ಠ 40 ಗ್ರಾಹಕರು ಈ ರೀತಿ ಮೆಸೇಜ್ ಪಡೆದಿದ್ದಾರೆ. ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಖಾತೆಯಿಂದ ಹಣ ಕಣ್ಮರೆಯಾಗುತ್ತಿದೆ. ಇದು 'ಫಿಶಿಂಗ್', ನಕಲಿ ಇಮೇಲ್‌ಗಳು ಅಥವಾ SMS ಮೂಲಕ ವೈಯಕ್ತಿಕ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಸಂಬಂಧಿತ ಪಾಸ್‌ವರ್ಡ್‌ಗಳು, ಪಿನ್‌ಗಳು, OTP ಗಳು ಮುಂತಾದ ಸೂಕ್ಷ್ಮ ಮಾಹಿತಿಯನ್ನು ಹೊರತೆಗೆಯಲು ವಂಚಕರು ಬಳಸುವ ತಂತ್ರವಾಗಿದೆ.
ಶ್ವೇತಾ ಎಂಬ ಮಹಿಳೆಯಿಂದ ವಂಚಕರು 57,600 ರೂಪಾಯಿ ಎಗರಿಸಿದ್ದಾರೆ. ಈ ಕುರಿತು ಗುರುವಾರ ಬ್ಯಾಂಕ್ ಹಾಗೂ ಖಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ನಂತರ ಎರಡು OTP ಗಳು ಬಂದವು ಎಂದು ಶ್ವೇತಾ ಹೇಳಿದರು. ಅವುಗಳನ್ನು ನೀಡಿದ ನಂತರ, ಪ್ಯಾನ್ ಕಾರ್ಡ್ ಸಂಖ್ಯೆ, ನೆಟ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ನಮೂದಿಸಿದ್ದರು. ಇದಾದ ಬಳಿಕ ಆಕೆಯ ಖಾತೆಯಲ್ಲಿದ್ದ ಹಣವೆಲ್ಲಾ ಮಾಯವಾಗಿತ್ತು.