ನೀವು ಅದ್ಧೂರಿ ಮದುವೆ ಕನಸು ಕಂಡಿದ್ರೆ ಅದರ ವೆಚ್ಚಗಳು ಸಹ ಹೆಚ್ಚಾಗುತ್ತವೆ. ವಿಶೇಷ ಆಹ್ವಾನ ಪತ್ರಿಕೆಗಳು, ಡಿಸೈನರ್ ಬಟ್ಟೆ, ಮೆಹೆಂದಿ, ಅರಿಶಿನ, ಮದುವೆ, ಆರತಕ್ಷತೆ, ಸಂಗೀತ್ ಹೀಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ರೆ ಮದುವೆ ಮತ್ತಷ್ಟು ದುಬಾರಿಯಾಗುತ್ತದೆ. ವೆಚ್ಚಗಳು ಇಲ್ಲಿಗೆ ನಿಲ್ಲಲ್ಲ. ಮದುವೆ ನಂತರ ಹನಿಮೂನ್ ಗೆ ತೆರಳಿದ್ರೆ ನಿಮ್ಮ ಹಣ ಮತ್ತಷ್ಟು ಖರ್ಚು ಆಗಲಿದೆ. (ಸಾಂದರ್ಭಿಕ ಚಿತ್ರ)
ವಿವಾಹ ಸಾಲಕ್ಕಾಗಿ ಅರ್ಜಿದಾರರು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು. ಕೆಲವು ಸಂಸ್ಥೆಗಳಿಗೆ ಕನಿಷ್ಠ ವಯಸ್ಸು 23 ವರ್ಷ ಆಗಿದ್ದು, ಗರಿಷ್ಠ ವಯಸ್ಸು 58 ವರ್ಷ ಆಗಿದೆ. ಮದುವೆಗೆ ಸಾಲ ಮಾಡುವವರಿಗೆ ಮಾಸಿಕ 15 ಸಾವಿರದಿಂದ 25 ಸಾವಿರ ಆದಾಯ ಬಂದರೆ ಬ್ಯಾಂಕ್‌ಗಳು ಮದುವೆ ಸಾಲ ನೀಡುತ್ತವೆ. ವೃತ್ತಿಪರರು, ಸ್ವಯಂ ಉದ್ಯೋಗಿಗಳು, ಸಂಬಳ ಪಡೆಯುವವರು ಮದುವೆ ಸಾಲ ತೆಗೆದುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
ಮದುವೆಯ ಸಾಲವನ್ನು ತೆಗೆದುಕೊಳ್ಳಲು ತಮ್ಮ ಆದಾಯದ ಪುರಾವೆಗಳನ್ನು ತೋರಿಸಬೇಕು. ಸಂಬಳ ಪಡೆಯುವ ಉದ್ಯೋಗಿಗಳ ವಿಷಯದಲ್ಲಿ, ಅವರು ಕನಿಷ್ಠ ಒಂದು ವರ್ಷ ಪ್ರಸ್ತುತ ಕೆಲಸದಲ್ಲಿ ಕೆಲಸ ಮಾಡುತ್ತಿರಬೇಕು. ಒಟ್ಟಿನಲ್ಲಿ ಕನಿಷ್ಠ ಎರಡು ವರ್ಷ ಉದ್ಯೋಗ ಮಾಡಿರಬೇಕು. ಮದುವೆ ಸಾಲಕ್ಕೂ ಕ್ರೆಡಿಟ್ ಸ್ಕೋರ್ ಅತ್ಯಗತ್ಯ. CIBIL ಸ್ಕೋರ್ 700 ಕ್ಕಿಂತ ಹೆಚ್ಚು ಇರುವವರಿಗೆ ಮದುವೆ ಸಾಲ ನೀಡಲು ಬ್ಯಾಂಕ್‌ಗಳು ಆಸಕ್ತಿ ತೋರಿಸುತ್ತವೆ. CIBIL ಸ್ಕೋರ್ ಕಡಿಮೆಯಾದಷ್ಟೂ ಬಡ್ಡಿ ದರ ಹೆಚ್ಚಾಗುತ್ತದೆ. (ಸಾಂದರ್ಭಿಕ ಚಿತ್ರ)