Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

Bank License Cancel | ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಸರಿಯಾಗಿ ಕಾರ್ಯನಿರ್ವಹಿಸದ ಮತ್ತು ಕಡಿಮೆ ಬಂಡವಾಳ ಹೊಂದಿರುವ ಬ್ಯಾಂಕ್​ಗಳಿಗೆ ಚಾಟಿ ಬೀಸಿದೆ. ಸುಮಾರು 8 ಬ್ಯಾಂಕುಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದೆ. ಜೊತೆಗೆ ಆ ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಲು ನಿರ್ಧರಿಸಿದೆ.

First published:

  • 110

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    Reserve Bank of India | ಜನಸಾಮಾನ್ಯರಿಗೆ ಸಹಕಾರಿ ಬ್ಯಾಂಕುಗಳು ಬಹಳ ಮುಖ್ಯ. ಆ ಬ್ಯಾಂಕುಗಳು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತವೆ. ಆದರೆ ಆ ಬ್ಯಾಂಕುಗಳ ಮೇಲೆ ಹೆಚ್ಚಿನ ಒತ್ತಡವಿದೆ. ಕಠಿಣ ನಿಯಮಗಳು, ಕಳಪೆ ಆರ್ಥಿಕ ಪರಿಸ್ಥಿತಿಗಳು ಮತ್ತು ಸ್ಥಳೀಯ ರಾಜಕೀಯದಿಂದಾಗಿ ಈ ಸಹಕಾರಿ ಬ್ಯಾಂಕ್‌ಗಳ ಮೇಲೆ ಒತ್ತಡ ಹೇರಲಾಗಿದೆ.

    MORE
    GALLERIES

  • 210

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    ಅದೇ ರೀತಿ, ದೇಶದ ಅತೀ ದೊಡ್ಡ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಸಹಕಾರಿ ಬ್ಯಾಂಕ್‌ಗಳ ಮೇಲೆ ತೀವ್ರ ನಿಗಾ ಇರಿಸಿದೆ. ಕಾಲಕಾಲಕ್ಕೆ ಅವುಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

    MORE
    GALLERIES

  • 310

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    ಸಹಕಾರಿ ಬ್ಯಾಂಕ್​​ಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೆ, ಅಂದರೆ ಆರ್ಥಿಕವಾಗಿ ದುರ್ಬಲವಾಗಿ ದಿವಾಳಿಯಾಗುವ ಸಂಭವವಿದ್ದರೆ, RBI ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಅವುಗಳ ಪರವಾನಗಿ ರದ್ದುಪಡಿಸಲು ಸಹ ಹಿಂಜರಿಯುವುದಿಲ್ಲ.

    MORE
    GALLERIES

  • 410

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    2023ರ ಹಣಕಾಸು ವರ್ಷದಲ್ಲಿ ಸುಮಾರು 8 ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನು RBI ರದ್ದುಗೊಳಿಸಿದೆ. ಅದಕ್ಕಾಗಿಯೇ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಇಡುವವರು ಎಲ್ಲದರ ಬಗ್ಗೆ ತಿಳಿದಿರಬೇಕು. ಯಾವ ಬ್ಯಾಂಕುಗಳ ಲೈಸೆನ್ಸ್​ ರದ್ದಾಗಿದೆ ಎಂದು ಇಲ್ಲಿ ನೋಡೋಣ.

    MORE
    GALLERIES

  • 510

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    ಸೇವಾ ವಿಕಾಸ ಸಹಕಾರಿ ಬ್ಯಾಂಕ್, ಡೆಕ್ಕನ್ ಅರ್ಬನ್ ಸಹಕಾರಿ ಬ್ಯಾಂಕ್, ಮಿಲತ್ ಸಹಕಾರಿ ಬ್ಯಾಂಕ್, ಮುಧೋಳ ಸಹಕಾರಿ ಬ್ಯಾಂಕ್, ಶ್ರೀ ಆನಂದ ಸಹಕಾರಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್​ಗಳ ಪರವಾನಗಿಯನ್ನು ರಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ.

    MORE
    GALLERIES

  • 610

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    ಈ ಪಟ್ಟಿಯಲ್ಲಿ ರೂಪಿ ಸಹಕಾರಿ ಬ್ಯಾಂಕ್, ಬಾಬಾಜಿ ಡೇಟ್ ಮಹಿಳಾ ಅರ್ಬನ್ ಬ್ಯಾಂಕ್, ಲಕ್ಷ್ಮಿ ಸಹಕಾರಿ ಬ್ಯಾಂಕ್ ಸಹ ಇವೆ. ಹಾಗಾಗಿ ಬ್ಯಾಂಕ್ ಗ್ರಾಹಕರು ಇವುಗಳಲ್ಲಿ ತಮ್ಮ ಖಾತೆ ಇದೆಯೇ? ಎಂಬುದನ್ನು ಪರಿಶೀಲಿಸಿಕೊಳ್ಳಿ.

    MORE
    GALLERIES

  • 710

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    ಸಾಕಷ್ಟು ಲಭ್ಯವಿಲ್ಲದ ಬಂಡವಾಳ ಮತ್ತು ಇತರ ನಿಯಮಗಳ ಉಲ್ಲಂಘನೆಯಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಸಹಕಾರಿ ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಿದೆ.

    MORE
    GALLERIES

  • 810

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    ಅಷ್ಟೇ ಅಲ್ಲದೇ, ಈ ಬ್ಯಾಂಕ್‌ಗಳಿಗೆ ಭವಿಷ್ಯದ ಆದಾಯ ಮಾರ್ಗಗಳಿಲ್ಲದ ಕಾರಣ ಆರ್‌ಬಿಐ ಪರವಾನಗಿಯನ್ನು ರದ್ದುಗೊಳಿಸಿದೆ. ಅಲ್ಲದೆ, ಆರ್‌ಬಿಐ ಕೆಲವು ಸಹಕಾರಿ ಬ್ಯಾಂಕ್‌ಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಅಂದರೆ ಕಳೆದ ಕೆಲವು ವರ್ಷಗಳಿಂದ ರಿಸರ್ವ್ ಬ್ಯಾಂಕ್ ಸಹಕಾರಿ ಬ್ಯಾಂಕ್ ಗಳ ಮೇಲೆ ನಿಗಾ ಇಟ್ಟಿದೆ.

    MORE
    GALLERIES

  • 910

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    ಹಾಗಾಗಿ ಸಹಕಾರಿ ಬ್ಯಾಂಕ್​ಗಳಲ್ಲಿ ಹಣ ಇಡುವವರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. 5 ಲಕ್ಷ ರೂ.ವರೆಗೆ ಹಣ ಇಟ್ಟರೆ ಭಯವಿಲ್ಲ. ಅದಕ್ಕೂ ಮೀರಿದ ಹಣ ಕೂಡಿಡುವವರು ಬ್ಯಾಂಕಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ತಿಳಿದಿರಬೇಕು.

    MORE
    GALLERIES

  • 1010

    Bank News: 8 ಬ್ಯಾಂಕ್​ಗಳ ಲೈಸೆನ್ಸ್​ ರದ್ದು ಮಾಡಿದ RBI- ದುಡ್ಡು ಇಟ್ಟವರ ಕಥೆ ಗೋವಿಂದಾ!

    ಯಾಕೆಂದರೆ ಬ್ಯಾಂಕ್ ದಿವಾಳಿಯಾದರೆ ಅಥವಾ ಆರ್ ಬಿಐ ಬ್ಯಾಂಕ್ ಲೈಸೆನ್ಸ್​​ನ್ನು ರದ್ದುಗೊಳಿಸಿದರೆ ಗ್ರಾಹಕರಿಗೆ ತೊಂದರೆಯಾಗುತ್ತದೆ. 5 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಯಾವುದೇ ತೊಂದರೆ ಇಲ್ಲ. ಪೂರ್ಣ ಮರುಪಾವತಿ ಮಾಡಲಾಗುತ್ತದೆ. ಆದರೆ ಅದಕ್ಕೂ ಹೆಚ್ಚಿನ ಹಣ ಇಟ್ಟಿದ್ದರೆ ಕಷ್ಟ.

    MORE
    GALLERIES