Electric Car: ಕೈಗೆಟಕುವ ದರದಲ್ಲಿ ಸೂಪರ್‌ ಎಲೆಕ್ಟ್ರಿಕ್‌ ಕಾರ್‌ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್‌!

ಕನಸು ಯಾರ್ ಕಾಣಲ್ಲ ಹೇಳಿ. ಎಲ್ಲರೂ ಕಾಣ್ತಾರೆ. ಕನಸು ಕಾಣೋದು ಮುಖ್ಯವಲ್ಲ. ಆದರೆ ಎಂತಹ ಕನಸು ಕಾಣುತ್ತೇವೆ? ಆ ಕನಸುಗಳನ್ನು ನನಸು ಮಾಡಲು ನಾವೆಷ್ಟು ಪ್ರಯತ್ನಗಳನ್ನು ಮಾಡುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಈ ಮಾತನ್ನು ಇಲ್ಲಿ ಯಾಕೆ ಉಲ್ಲೇಖ ಮಾಡಿದ್ದೀವಿ ಅಂದ್ರೆ, ಶ್ರಮಪಟ್ಟರೆ ಏನು ಬೇಕಾದರೂ ಸಾಧಿಸಬಹುದು ಅನ್ನೋದನ್ನು ನಿರೂಪಿಸಿದ ಆಟೋ ಚಾಲಕನೊಬ್ಬನ ಕಾರಣಕ್ಕೆ.

  • Local18
  • |
  •   | Hyderabad, India
First published:

  • 17

    Electric Car: ಕೈಗೆಟಕುವ ದರದಲ್ಲಿ ಸೂಪರ್‌ ಎಲೆಕ್ಟ್ರಿಕ್‌ ಕಾರ್‌ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್‌!

    ಹೌದು.. ಬಡ ಕುಟುಂಬದಲ್ಲಿ ಹುಟ್ಟಿ, ಬಾಲ್ಯದಿಂದಲೂ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹಾಗೂ ದೃಢ ಸಂಕಲ್ಪ ತೊಟ್ಟಿದ್ದ ಆಟೋ ಚಾಲಕನೊಬ್ಬ ಎಲೆಕ್ಟ್ರಿಕ್‌ ಕಾರು ತಯಾರಿಸುವ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

    MORE
    GALLERIES

  • 27

    Electric Car: ಕೈಗೆಟಕುವ ದರದಲ್ಲಿ ಸೂಪರ್‌ ಎಲೆಕ್ಟ್ರಿಕ್‌ ಕಾರ್‌ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್‌!

    ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಉಂಡವಳ್ಳಿ ಮಂಡಲದ ಬೊಂಕೂರು ಗ್ರಾಮದ ಮಧ್ಯಮ ಕುಟುಂಬ ಆಟೋ ಚಾಲಕ ಬೀಚುಪಲ್ಲಿ ಎಂಬುವವರರೇ ಈ ಬ್ಯಾಟರಿ ಚಾಲಿತ ಕಾರು ತಯಾರಿಸಿದ ಸಾಧಕನಾಗಿದ್ದು, ಇದೀಗ ಇವರ ಸಾಧನೆಗೆ ಎಲ್ಲರೂ ಅವರನ್ನು ಹುಡುಕಿಕೊಂಡು ಬರುವಂತಾಗಿದೆ.

    MORE
    GALLERIES

  • 37

    Electric Car: ಕೈಗೆಟಕುವ ದರದಲ್ಲಿ ಸೂಪರ್‌ ಎಲೆಕ್ಟ್ರಿಕ್‌ ಕಾರ್‌ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್‌!

    ಕರ್ನೂಲ್ ಜಿಲ್ಲೆಯಲ್ಲಿ ಆಟೋ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬೀಚುಪಲ್ಲಿ ಅವರು, ಬಾಲ್ಯದಿಂದಲೂ ತಾನು ಕುಟುಂಬ ಸದಸ್ಯರೊಂದಿಗೆ ಕಾರ್‌ನಲ್ಲಿ ಚಲಾಯಿಸಬೇಕು ಎನ್ನುವ ಕನಸನ್ನು ಕಂಡಿದ್ದರು. ಆದರೆ ಬಡತನದ ಕಾರಣದಿಂದ ಈ ಕನಸು ನನಸಾಗಲು ಸಾಧ್ಯವಿರಲಿಲ್ಲ.

    MORE
    GALLERIES

  • 47

    Electric Car: ಕೈಗೆಟಕುವ ದರದಲ್ಲಿ ಸೂಪರ್‌ ಎಲೆಕ್ಟ್ರಿಕ್‌ ಕಾರ್‌ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್‌!

    ಹೀಗಾಗಿ ಪರ್ಯಾಯ ಮಾರ್ಗ ಹುಡುಕಿದ ಅವರು, ಆರಂಭದಲ್ಲಿ ತನ್ನ ಆಟೋವನ್ನು ಡೀಸೆಲ್‌ನಿಂದ ಎಲೆಕ್ಟ್ರಿಕ್‌ ಆಟೋವನ್ನಾಗಿ ಪರಿವರ್ತನೆ ಮಾಡಿದರು. ನಂತರ ಅವರು ಅದೇ ಉತ್ಸಾಹದಿಂದ ಎಲೆಕ್ಟ್ರಿಕ್‌ ಕಾರ್‌ ತಯಾರಿಸಿ ಯಶಸ್ವಿಯಾದರು.

    MORE
    GALLERIES

  • 57

    Electric Car: ಕೈಗೆಟಕುವ ದರದಲ್ಲಿ ಸೂಪರ್‌ ಎಲೆಕ್ಟ್ರಿಕ್‌ ಕಾರ್‌ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್‌!

    ಬೀಚುಪಲ್ಲಿ ತಯಾರಿಸಿದ ಎಲೆಕ್ಟ್ರಿಕ್‌ ಕಾರ್‌ಗೆ ಸುಮಾರು 1 ಲಕ್ಷದ 20 ಸಾವಿರ ರೂಪಾಯಿ ಖರ್ಚಾಗಿದ್ದು, ಒಂದು ಬಾರಿ ಚಾರ್ಜ್‌ ಮಾಡಿದರೆ ಸುಮಾರು 100 ಕಿಲೋ ಮೀಟರ್ ತನಕ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

    MORE
    GALLERIES

  • 67

    Electric Car: ಕೈಗೆಟಕುವ ದರದಲ್ಲಿ ಸೂಪರ್‌ ಎಲೆಕ್ಟ್ರಿಕ್‌ ಕಾರ್‌ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್‌!

    ಬೀಚುಪಲ್ಲಿ ಅವರು ತಯಾರಿಸಿದ ಎಲೆಕ್ಷ್ರಿಕ್ ಕಾರ್ ಇದೀಗ ಜಿಲ್ಲಾದ್ಯಂತ ಭಾರೀ ಸುದ್ದಿಯಾಗಿದ್ದು, ಹೊರ ಊರಿನ ಜನರು ಕಾರ್‌ನ್ನು ನೋಡಲು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಕಾರ್ನಿವಲ್ ಕಾರ್ಯಕ್ರಮದಲ್ಲಿಯೂ ಬೀಚುಪಲ್ಲಿಯ ಕಾರು ಪ್ರದರ್ಶನಕ್ಕೆ ಇಡಲಾಗಿತ್ತು.

    MORE
    GALLERIES

  • 77

    Electric Car: ಕೈಗೆಟಕುವ ದರದಲ್ಲಿ ಸೂಪರ್‌ ಎಲೆಕ್ಟ್ರಿಕ್‌ ಕಾರ್‌ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್‌!

    ಸದ್ಯ ಬೀಚುಪಲ್ಲಿ ಅವರ ಕಾರ್ ದೊಡ್ಡ ದೊಡ್ಡ ಕಂಪನಿಗಳ ಗಮನವನ್ನೂ ಸೆಳೆದಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೀಚುಪಲ್ಲಿ, ಈ ಕಾರ್‌ ದೂರದ ಹಳ್ಳಿಗಳ ರಸ್ತೆಗಳಲ್ಲಿ ಸಂಚರಿಸಬಲ್ಲದು. ಕೃಷಿ ಕೆಲಸಗಳಿಗೂ ಉಪಯುಕ್ತವಾಗಿದ್ದು, ಸುಮಾರು 5 ಕ್ವಿಂಟಾಲ್‌ವರೆಗೆ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ ಎನ್ನುತ್ತಾರೆ.

    MORE
    GALLERIES