ಹೊಸ ಆರ್ಥಿಕ ವರ್ಷ ಶುರುವಾಗೇಬಿಡಲಿದೆ. ಏಪ್ರಿಲ್ 1 ರಿಂದ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ನಾವು ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸ ಆರ್ಥಿಕ ವರ್ಷದಲ್ಲಿ ಹಲವು ನಿಯಮಗಳು ಬದಲಾಗುತ್ತಿವೆ. ಹಾಗಾದರೆ ಆ ನಿಯಮಗಳು ಯಾವುವು? ಇಲ್ಲಿದೆ ನೋಡಿ.
2/ 8
ಇದೇ ಏಪ್ರಿಲ್ 1ರಿಂದ ಎಲ್ಲ ರೀತಿಯ ಕ್ರಿಪ್ಟೋ ಕರೆನ್ಸಿಗಳಿಗೆ ಶೇಕಡಾ 30ರಷ್ಟು ತೆರಿಗೆ ಪಾವತಿಸಬೇಕಿದೆ. ಅಲ್ಲದೇ ಜುಲೈ 1ರಿಂದ ಎಲ್ಲ ರೀತಿಯ ಕ್ರಿಪ್ಟೊ ವಹಿವಾಟುಗಳಿಗೆ ಶೇಕಡಾ 1ರಷ್ಟು ಟಿಡಿಎಸ್ ಪಾವತಿಸಬೇಕಿದೆ.
3/ 8
ಅಲ್ಲದೇ ಇನ್ನೊಂದು ಹೊಸ ನಿಯಮ ಎಂದರೆ ವಿಶೇಷ ಚೇತನರನ್ನು ಹೊಂದಿರುವ ಪೋಷಕರಿಗೆ ಕೆಲವು ಷರತ್ತು ಬದ್ಧ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆ. ಜೊತೆಗೆ ಕೋವಿಡ್ ಚಿಕಿತ್ಸೆಯ ಔಷಧ ಮತ್ತು ಪರಿಕರಗಳಿಗೆ ತೆರಿಗೆ ವಿನಾಯಿತಿ ದೊರೆಯಲಿದೆ.
4/ 8
ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮದಲ್ಲಿ ಆದಾಯ ತೆರಿಗೆ ಪಾವತಿದಾರರು ಈಮುನ್ನ ಸಲ್ಲಿಸಿದ್ದ ರಿಟರ್ನ್ನಲ್ಲಿ ಯಾವುದಾದರೂ ತಪ್ಪುಗಳು ಇದ್ದಲ್ಲಿ ಅದನ್ನು ಸರಿಪಡಿಸಿ ಹೊಸದಾಗಿ ಸಲ್ಲಿಸುವ ಅವಕಾಶ ಇರಲಿದೆ.
5/ 8
ಮಾರ್ಚ್ 31ರ ಒಳಗೆ ಪಿಎಫ್ ಖಾತೆಗೆ ನಿಮ್ಮ ನಾಮಿನಿದಾರರನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಏಪ್ರಿಲ್ 1ರ ಒಳಗೆ ನೀವು ಈ ಪ್ರಕ್ರಿಯೆಯನ್ನು ಮಾಡಿರಬೇಕು.
6/ 8
ಇದೇ ಏಪ್ರಿಲ್ 1ರಿಂದ ಎಲ್ಲ ರೀತಿಯ ಕ್ರಿಪ್ಟೋ ಕರೆನ್ಸಿಗಳಿಗೆ ಶೇಕಡಾ 30ರಷ್ಟು ತೆರಿಗೆ ಪಾವತಿಸಬೇಕಿದೆ. ಅಲ್ಲದೇ ಜುಲೈ 1ರಿಂದ ಎಲ್ಲ ರೀತಿಯ ಕ್ರಿಪ್ಟೊ ವಹಿವಾಟುಗಳಿಗೆ ಶೇಕಡಾ 1ರಷ್ಟು ಟಿಡಿಎಸ್ ಪಾವತಿಸಬೇಕಿದೆ.
7/ 8
ಮಾರ್ಚ್ 31ರ ಒಳಗೆ ಪಿಎಫ್ ಖಾತೆಗೆ ನಿಮ್ಮ ನಾಮಿನಿದಾರರನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಏಪ್ರಿಲ್ 1ರ ಒಳಗೆ ನೀವು ಈ ಪ್ರಕ್ರಿಯೆಯನ್ನು ಮಾಡಿರಬೇಕು.
8/ 8
ಸದ್ಯ ಭವಿಷ್ಯ ನಿಧಿಯಲ್ಲಿ 2.5 ಲಕ್ಷದವರೆಗೆ ತೆರಿಗೆ ಮುಕ್ತ ಕೊಡುಗೆ ವಿನಾಯಿತಿ ಇದ್ದು ಏಪ್ರಿಲ್ 1ರಿಂದ ಈ ಮಿತಿಯನ್ನು ಮೀರಿದರೆ ಮಾತ್ರ ಆದಾಯ ತೆರಿಗೆ ಬಡ್ಡಿ ಅನ್ವಯವಾಗಲಿದೆ.