ದೇಶಾದ್ಯಂತ ದೀಪಾವಳಿ ಸಂಭ್ರಮ ಆರಂಭವಾಗುತ್ತಿದ್ದಂತೆಯೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಖ್ಯಾತ ಕಂಪನಿ ಅಮುಲ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಕಂಪನಿಯು ದೆಹಲಿಯಲ್ಲಿ ತನ್ನ ಹಾಲಿನ ದರವನ್ನು ಲೀಟರ್ಗೆ 2 ರೂಪಾಯಿ ಹೆಚ್ಚಿಸಿದೆ. (ಸಾಂಕೇತಿಕ ಚಿತ್ರ)
2/ 6
ಇಂದು ಬೆಳಗ್ಗೆ ಹಾಲು ಖರೀದಿಸಲು ಬಂದಿದ್ದ ಜನರು ಪ್ರತಿ ಲೀಟರ್ ಹಾಲಿನ ಪ್ಯಾಕೆಟ್ಗೆ 61 ರೂ.ಗೆ ಬದಲಾಗಿ 63 ರೂ ನೀಡಿದ್ದಾರೆ. ಅಮುಲ್ ಫುಲ್ ಕ್ರೀಮ್ ಹಾಲಿನ ದರವನ್ನು ಲೀಟರ್ ಗೆ ರೂ.61 ರಿಂದ ರೂ.63ಕ್ಕೆ ಏರಿಸಿದೆ.(ಸಾಂಕೇತಿಕ ಚಿತ್ರ)
3/ 6
ಆದರೆ, ಹಾಲಿನ ದರ ಏರಿಕೆ ಕುರಿತು ಕಂಪನಿಯಿಂದ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಆದರೆ.. ಅಮುಲ್ ನಂತರ ಇದೀಗ ಇತರೆ ಕಂಪನಿಗಳೂ ಈ ಹಬ್ಬದ ಸೀಸನ್ ನಲ್ಲಿ ಹಾಲಿನ ದರವನ್ನು ಹೆಚ್ಚಿಸುವ ಸಾಧ್ಯತೆ ಇದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. (ಸಾಂಕೇತಿಕ ಚಿತ್ರ)
4/ 6
ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ತನ್ನ ಹಾಲಿನ ಉತ್ಪನ್ನಗಳನ್ನು ಅಮುಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ. ಪ್ರಮುಖ ಹಾಲಿನ ಬ್ರ್ಯಾಂಡ್ ಗಳಾದ ಅಮುಲ್ ಮತ್ತು ಮದರ್ ಡೈರಿ ಕಳೆದ ಆಗಸ್ಟ್ ನಲ್ಲಿ ಹಾಲಿನ ದರವನ್ನು ಲೀಟರ್ ಗೆ 2 ರೂ ಹೆಚ್ಚಿಸಿದೆ (ಸಾಂಕೇತಿಕ ಚಿತ್ರ)
5/ 6
ಈ ಹಿಂದೆ ಮಾರ್ಚ್ನಲ್ಲಿ ಹಾಲಿನ ದರ ಏರಿಕೆಯಾಗಿತ್ತು. ಇತ್ತೀಚೆಗೆ ಮತ್ತೆ ಬೆಲೆ ಏರಿಕೆಯಾಗಿದೆ. ಹಾಲು ಭಾರತೀಯ ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ವಸ್ತುವಾಗಿದೆ. ಹಾಗಾಗಿ ಈ ಬೆಲೆಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತವೆ. (ಸಾಂಕೇತಿಕ ಚಿತ್ರ)
6/ 6
ಈ ವಾರ ಎರಡೂ ಕಂಪನಿಗಳು ಹಾಲಿನ ದರವನ್ನು ಹೆಚ್ಚಿಸಿವೆ. ಅಕ್ಟೋಬರ್ 11 ರಂದು ಮೇಧಾ ಮತ್ತು ಸುಧಾ ಡೈರಿ ಹಾಲಿನ ದರದಲ್ಲಿ ಹೆಚ್ಚಳವನ್ನು ಘೋಷಿಸಿತು. ಈ ಎರಡು ಕಂಪನಿಗಳ ಹಾಲಿನ ದರ ಲೀಟರ್ ಗೆ ರೂ.2 ಏರಿಕೆಯಾಗಿದೆ. (ಸಾಂಕೇತಿಕ ಚಿತ್ರ)