Amul Product: ಮಾರುಕಟ್ಟೆಗೆ ಬರಲಿದೆ ಅಮುಲ್ ಗೋಧಿ ಹಿಟ್ಟು; ಬೆಲೆ ಎಷ್ಟು ಗೊತ್ತಾ?
ಅಮುಲ್ ಬ್ರಾಂಡ್ ಆಂದ್ರೆ ತಕ್ಷಣ ನೆನಪಾಗೋದು ಹಾಲು, ಮೊಸರು, ಐಸ್ ಕ್ರೀಮ್ ಮತ್ತು ಬ್ರೆಡ್ ಮಾದರಿಯ ವಿವಿಧ ಉತ್ಪನ್ನಗಳು. ಇದೀಗ ಅಮುಲ್ ಬ್ರಾಂಡ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ (ಜಿಸಿಎಂಎಂಎಫ್) ಮಾರುಕಟ್ಟೆಯಲ್ಲಿ ತನ್ನ ಗೋಧಿ ಹಿಟ್ಟನ್ನು ಪರಿಚಯಿಸಲು ಹೊರಟಿದೆ.
ಗೋಧಿ ಹಿಟ್ಟು ಪರಿಚಯಿಸುತ್ತಿರುವ ಕುರಿತು ಕಂಪನಿ ಶನಿವಾರ ಅಧಿಕೃತ ಘೋಷಣೆ ಸಹ ಮಾಡಿದೆ. ಅಮುಲ್ ಕಂಪನಿಯ ಸಾವಯವ ಹಿಟ್ಟು ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. (ಸಾಂದರ್ಭಿಕ ಚಿತ್ರ)
2/ 8
ಅಮುಲ್ನ ಸಾವಯವ ಪೋರ್ಟ್ಫೋಲಿಯೊದಲ್ಲಿ ಬಿಡುಗಡೆಯಾದ ಮೊದಲ ಉತ್ಪನ್ನ ಉತ್ಪನ್ನವೆಂದರೆ 'ಅಮುಲ್ ಆರ್ಗ್ಯಾನಿಕ್ ಹೋಲ್ ವೀಟ್ ಅಟ್ಟಾ'. (ಸಾಂದರ್ಭಿಕ ಚಿತ್ರ)
3/ 8
ಗೋಧಿ ಹಿಟ್ಟಿನ ಜೊತೆಗೆ ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಇನ್ನೂ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. (ಸಾಂದರ್ಭಿಕ ಚಿತ್ರ)
4/ 8
ಹೆಸರು ಬೇಳೆ, ತೊಗರಿ ಬೇಳೆ, ಕಡಲೆ ಬೇಳೆ ಮತ್ತು ಬಾಸ್ಮತಿ ಅಕ್ಕಿಯ ಉತ್ಪನ್ನಗಳನ್ನು ಪರಿಚಯಿಸಲು ಕಂಪನಿ ಸಿದ್ಧತೆ ನಡೆಸಿಕೊಂಡಿದೆ. ಅಮುಲ್ ಬ್ರಾಂಡ್ ನ ಈ ಎಲ್ಲ ಉತ್ಪನ್ನಗಳು ಶೀಃಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿವೆ ಎಂದು GCMMF ಶನಿವಾರ ತನ್ನ ಘೋಷಣೆಯಲ್ಲಿ ಹೇಳಿದೆ. (ಸಾಂದರ್ಭಿಕ ಚಿತ್ರ)
5/ 8
ಈ ಉತ್ಪನ್ನಗಳಿಗಾಗಿ ದೇಶದ ಸಾವಯವ ಕೃಷಿ ಮಾಡುವ ರೈತರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತದೆ. ಹಾಲು ಸಂಗ್ರಹಣೆ ಮಾದರಿಯಲ್ಲಿಯೇ ರೈತರನ್ನು ಸಂಪರ್ಕಿಸಲಾಗುತ್ತದೆ ಎಂದು ಕಂಪನಿ ಹೇಳಿದೆ. (ಸಾಂದರ್ಭಿಕ ಚಿತ್ರ)
6/ 8
ಭಾರತದಲ್ಲಿ ಸಾವಯವ ಪರೀಕ್ಷಾ ಸೌಲಭ್ಯಗಳನ್ನು ಸಾಮಾನ್ಯ ರೈತರಿಂದ ಭರಿಸಲಾಗುವುದಿಲ್ಲ. ಆದ್ದರಿಂದ ಕಂಪನಿಯು ದೇಶಾದ್ಯಂತ ಐದು ಸ್ಥಳಗಳಲ್ಲಿ ಸಾವಯವ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುತ್ತದೆ. ಅಹಮದಾಬಾದ್ ನ 'ಅಮುಲ್ ಫೆಡ್ ಡೈರಿ'ಯಲ್ಲಿ ಇಂತಹ ಮೊದಲ ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)
7/ 8
ತ್ರಿಭುವನ್ ದಾಸ್ ಪಟೇಲ್ ಮೊಗರ್ ಆಹಾರ ಸಂಕೀರ್ಣದಲ್ಲಿ ಅಮುಲ್ ಸಾವಯವ ಹಿಟ್ಟನ್ನು ಉತ್ಪಾದಿಸಲಾಗುತ್ತಿದೆ. ಅಮುಲ್ ಬಿಡುಗಡೆ ಮಾಡುವ ಉತ್ಪನ್ನಗಳನ್ನು ಗ್ರಾಹಕರು ಜೂನ್ ಮೊದಲ ವಾರದಿಂದ ಅಮುಲ್ ಪಾರ್ಲರ್ ಗಳಲ್ಲಿ ಖರೀದಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಗುಜರಾತ್, ದೆಹಲಿ, ಮುಂಬೈ ಮತ್ತು ಪುಣೆ ನಗರಗಳಲ್ಲಿ ಆನ್ ಲೈನ್ ಮುಖಾಂತರ ತರಿಸಿಕೊಳ್ಳಬಹುದು. ಅಮುಲ್ ಸಾವಯವ ಹಿಟ್ಟಿನ ಒಂದು ಕೆಜಿ ಪ್ಯಾಕೆಟ್ ಬೆಲೆ 60 ರೂ. ಮತ್ತು ಐದು ಕೆಜಿ ಹಿಟ್ಟಿನ ಪ್ಯಾಕೆಟ್ ಬೆಲೆ 290 ರೂ. ಆಗಿದೆ.