ಡಿಸಿಜಿಐ ವಿಜಿ ಸೋಮಾನಿ ಅವರು ಡಿಸೆಂಬರ್ 12, 2018 ರ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಫೆಬ್ರವರಿ 8 ರಂದು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಹೈಕೋರ್ಟ್ ತೀರ್ಪಿನ ಪ್ರಕಾರ, ಪರವಾನಗಿ ಇಲ್ಲದೇ ಆನ್‌ಲೈನ್ ಔಷಧಿಗಳ ಮಾರಾಟವನ್ನು ನಿಷೇಧಿಸಲಾಗಿದೆ. ಆದ್ದರಿಂದ, ಪರವಾನಗಿ ಇಲ್ಲದೆ ಆನ್‌ಲೈನ್‌ನಲ್ಲಿ ಔಷಧಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. (ಸಾಂದರ್ಭಿಕ ಚಿತ್ರ)
ಈ ಸಂಬಂಧ ಫ್ಲಿಪ್ ಕಾರ್ಟ್ ಹೆಲ್ತ್ ಪ್ಲಸ್ ಪ್ರತಿಕ್ರಿಯೆ ನೀಡಿವೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನಿಂದ ನೋಟಿಸ್‌ಗಳನ್ನು ಸ್ವೀಕರಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ಸಹ ನೀಡಲಾಗಿದೆ ಎಂದು ಹೇಳಿದೆ. ಒಂದು ಕಂಪನಿಯಾಗಿ ನಿಯಮಗಳನ್ನು ಪಾಲಿಸುವುದು ತನ್ನ ಆದ್ಯ ಕರ್ತವ್ಯ ಎಂದು ಹೇಳಿದೆ. ನೋಟಿಸ್‌ಗಳಿಗೆ ಅಮೆಜಾನ್ ಇನ್ನೂ ಪ್ರತಿಕ್ರಿಯಿಸಿಲ್ಲ. ಇದಕ್ಕೆ ಇನ್ನುಳಿದ ಕಂಪನಿಗಳು ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ. (ಸಾಂದರ್ಭಿಕ ಚಿತ್ರ)