ಈಗಾಗಲೇ ಲಕ್ಷಾಂತರ ಮಂದಿ ರೈತರು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಆ ರೈತರ ಸ್ಟೇಟಸ್ ಚೆಕ್ ಮಾಡಿಸಬಹುದು. ಸ್ಟೇಟಸ್ನಲ್ಲಿ 'ಎಫ್ಟಿಒ ರಚಿಸಲಾಗಿದೆ ಮತ್ತು ಪಾವತಿ ದೃಢೀಕರಣ ಬಾಕಿ ಇದೆ' ಎಂದು ಕಾಣಿಸಿಕೊಂಡರೆ ಪರಿಶೀಲನೆ ಪೂರ್ಣಗೊಂಡಿದೆ. ಆದ್ದರಿಂದ ಅವರಿಗೆ 11ನೇ ಕಂತಿನ ಹಣ ಲಭ್ಯವಿದೆ. ಇನ್ನು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ರೈತರು ತಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಪುಟದಲ್ಲಿ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್ ನಂಬರ್, ಕ್ಯಾಪ್ಚಾ ಕೋಡ್ ನಮೂದಿಸಿ ಸರ್ಚ್ ಮಾಡಬೇಕು. ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ನ ಮೊಬೈಲ್ ನಂಬರ್ ನಮೂದಿಸಬೇಕು. ನಂತರ OTP ಆಯ್ಕೆಯನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ ಓಟಿಪಿ ನಮೂದಿಸಬೇಕು. ಇ-ಕೆವೈಸಿ ಯಶಸ್ವಿಯಾಗಿ ಸಬ್ ಮಿಟ್ ಆಗುತ್ತದೆ.