ತನಿಷ್ಕ್: CNBC-TV18 ಪ್ರಕಾರ, ಅಕ್ಷಯ ತೃತೀಯಕ್ಕೆ ತನಿಷ್ಕ್ ಚಿನ್ನ ಮತ್ತು ವಜ್ರದ ಆಭರಣಗಳ ತಯಾರಿಕೆಯ ಶುಲ್ಕದ ಮೇಲೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಸಾದಾ ಆಭರಣಗಳ ಮೇಲೆ ಪ್ರತಿ ಗ್ರಾಂಗೆ ರೂ 200 ಕಡಿತವನ್ನು ನೀಡುತ್ತಿದೆ. ಈ ಕೊಡುಗೆಗಳು ಹೆಚ್ಚಿನ ಪ್ರದೇಶಗಳಲ್ಲಿ ಏಪ್ರಿಲ್ 24 ರಿಂದ ಮೇ 4 ರವರೆಗೆ ಇರಲಿದೆ. ನಿರ್ದಿಷ್ಟ ವಿವರಗಳಿಗಾಗಿ ಜನರು ತನಿಷ್ಕ್ನ ಅಧಿಕೃತ ವೆಬ್ ಸೈಟ್ಗಳಿಗೆ ಭೇಟಿ ನೀಡಬಹುದು.