ಅಜಯ್ ಬಂಗಾ ಪ್ರಸ್ತುತ ಜನರಲ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಅವರು ಮಾಸ್ಟರ್‌ಕಾರ್ಡ್‌ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದರು. ಈ ಸಮಯದಲ್ಲಿ ಅವರು ಮಾಸ್ಟರ್‌ಕಾರ್ಡ್‌ನ 24,000 ಉದ್ಯೋಗಿಗಳನ್ನು ಮುನ್ನಡೆಸಿದರು. ವಿಶ್ವ ಬ್ಯಾಂಕ್ ಬಿಡುಗಡೆಯ ಪ್ರಕಾರ, ಅವರ ನಾಯಕತ್ವದಲ್ಲಿ, ಮಾಸ್ಟರ್‌ಕಾರ್ಡ್ ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿತು.
ಇಂಟರ್ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ನ ಗೌರವಾಧ್ಯಕ್ಷರಾಗಿದ್ದಾರೆ. 2020-22 ರ ನಡುವೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಜನರಲ್ ಎಲೆಕ್ಟ್ರಿಕ್‌ನ ಹವಾಮಾನ ಕೇಂದ್ರೀಕೃತ ನಿಧಿ ಬಿಯಾಂಡ್ ನೆಟ್ ಝೀರೋಗೆ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಬಂಗಾ ಮಧ್ಯ ಅಮೆರಿಕದ ಪಾಲುದಾರಿಕೆಯ ಸಹ-ಅಧ್ಯಕ್ಷರಾಗಿದ್ದಾರೆ. ಇದು ಎಲ್ ಸಾಲ್ವಡಾರ್, ಗ್ವಾಟೆಮಾಲಾ ಮತ್ತು ಹೊಂಡುರಾಸ್‌ನಲ್ಲಿ ಬಡವರಿಗೆ ಸಹಾಯ ಮಾಡುವ ಖಾಸಗಿ ಉದ್ಯಮಗಳ ಪಾಲುದಾರಿಕೆಯಾಗಿದೆ.