ಹಿಂದಿನ ಕಾಲದಲ್ಲಿ ಪಾರಂಪರಿಕ ಕೃಷಿ ಮಾಡುತ್ತಿದ್ದು ಹೆಚ್ಚು ಲಾಭ ಬರುತ್ತಿರಲಿಲ್ಲ. ನನ್ನ ತಾತ ಮನೆಯಲ್ಲಿಯೂ ಪನ್ನೀರು, ಗುಲ್ಕಂದ, ಸುಗಂಧ ದ್ರವ್ಯ ತಯಾರಿಸುತ್ತಿದ್ದರು. ಪ್ರಸ್ತುತ ತನ್ನ ಮಗ ಮಕ್ಸೂದ್ ಜೊತೆಗೆ ಜಮೀನಿನಲ್ಲಿ ಗುಲಾಬಿ ಬೆಳೆದು, ಅವುಗಳನ್ನು ರೋಸ್ ವಾಟರ್, ಸುಗಂಧ ದ್ರವ್ಯ, ಗುಲ್ಕಂದ್ ಮತ್ತು ಗುಲಾಬಿ ಸಿರಪ್ ಮಾಡುತ್ತಿದ್ದೇವೆ ಎಂದು ತಂದೆ ಸೈಫುದ್ದೀನ್ ತಿಳಿಸಿದ್ದಾರೆ.
ಗುಲಾಬಿ ಅತ್ಯಂತ ಸುಂದರವಾದ ಹೂವುಗಳಲ್ಲಿ ಒಂದಾಗಿದೆ. ಹೂವುಗಳಲ್ಲಿ ರಾಣಿ ಗುಲಾಬಿ ಹೂವು. ವಾಣಿಜ್ಯ ಬೆಳೆಯಾಗಿ ಗುಲಾಬಿ ಕೃಷಿಯ ಲಾಭವನ್ನು ರೈತರು ಈಗ ಅರಿತುಕೊಳ್ಳುತ್ತಿದ್ದಾರೆ. ರೈತರು ಗುಲಾಬಿ ಕೃಷಿಯ ತಂತ್ರಗಳತ್ತ ಗಮನ ಹರಿಸುತ್ತಿದ್ದಾರೆ. ಗುಲಾಬಿ ಕೃಷಿಗೆ ಕಡಿಮೆ ವೆಚ್ಚ, ಕಡಿಮೆ ಭೂಮಿ ಸಾಕಾಗುತ್ತದೆ, ಆದರೆ ಹೆಚ್ಚು ಆದಾಯ ಪಡೆಯಬಹುದು ಎಂದು ತಂದೆ ಮಗ ತಿಳಿಸಿದ್ದಾರೆ.