Success Story: ಎಲ್​ಎಲ್​ಬಿ ಮುಗಿಸಿ ಸಾವಯವ ಕೃಷಿ ಆರಂಭಿಸಿದ ಯುವ ರೈತನ ಅದೃಷ್ಟವೇ ಬದಲಾಯ್ತು! ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆದಾಯ

ಪ್ರಸ್ತುತ ರೈತರು ವ್ಯವಸಾಯದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿಕೊಂಡಿದ್ದಾರೆ. ಬಹುತೇಕ ರೈತರಿಗೆ ಸಾಂಪ್ರದಾಯಿಕ ಬೆಳಗಳಿಗಿಂತ ವಾಣಿಜ್ಯ ಅಥವಾ ತೋಟಗಾರಿಕೆ ಬೆಳೆಗಳತ್ತಾ ಮುಖ ಮಾಡುತ್ತಿದ್ದಾರೆ. ಅನೇಕ ರೈತರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

  • Local18
  • |
  •   | Rajasthan, India
First published:

  • 17

    Success Story: ಎಲ್​ಎಲ್​ಬಿ ಮುಗಿಸಿ ಸಾವಯವ ಕೃಷಿ ಆರಂಭಿಸಿದ ಯುವ ರೈತನ ಅದೃಷ್ಟವೇ ಬದಲಾಯ್ತು! ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆದಾಯ

    ಪ್ರಸ್ತುತ ರೈತರು ವ್ಯವಸಾಯದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿಕೊಂಡಿದ್ದಾರೆ. ಬಹುತೇಕ ರೈತರಿಗೆ ಸಾಂಪ್ರದಾಯಿಕ ಬೆಳಗಳಿಗಿಂತ ವಾಣಿಜ್ಯ ಅಥವಾ ತೋಟಗಾರಿಕೆ ಬೆಳೆಗಳತ್ತಾ ಮುಖ ಮಾಡುತ್ತಿದ್ದಾರೆ. ಅನೇಕ ರೈತರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

    MORE
    GALLERIES

  • 27

    Success Story: ಎಲ್​ಎಲ್​ಬಿ ಮುಗಿಸಿ ಸಾವಯವ ಕೃಷಿ ಆರಂಭಿಸಿದ ಯುವ ರೈತನ ಅದೃಷ್ಟವೇ ಬದಲಾಯ್ತು! ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆದಾಯ

    ಕೆಲವು ರೈತರೂ ಅದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ, ಹೊಸ ಬೆಳೆಗಳು, ಸಂಶೋಧನೆಗಳು ಕೃಷಿ ವ್ಯವಹಾರಕ್ಕೆ ಹೊಸ ರೂಪ ನೀಡಲಾರಂಭಿಸಿವೆ. ಕೋಟಾ ಜಿಲ್ಲೆಯ ಪೀಪಾಲ್ಡಾ ಎಂಬ ಪುಟ್ಟ ಹಳ್ಳಿಯ ನಿವಾಸಿ ಭಗವತ್ ಸಿಂಗ್ ಕೂಡ ಅಂತಹವರಲ್ಲಿ ಒಬ್ಬರು. ಭಗವತ್ ಸಿಂಗ್ ಅವರ ಮೂಲತಃ ವಕೀಲರೆಂಬುದು ಇಲ್ಲಿ ಕುತೂಹಲಕಾರಿಯಾಗಿದೆ. ಕಾನೂನು ಅಭ್ಯಾಸದ ಜೊತೆಗೆ ಆಧುನಿಕ ಕೃಷಿಯನ್ನೂ ರೂಢಿಸಿಕೊಂಡಿದ್ದಾರೆ.

    MORE
    GALLERIES

  • 37

    Success Story: ಎಲ್​ಎಲ್​ಬಿ ಮುಗಿಸಿ ಸಾವಯವ ಕೃಷಿ ಆರಂಭಿಸಿದ ಯುವ ರೈತನ ಅದೃಷ್ಟವೇ ಬದಲಾಯ್ತು! ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆದಾಯ

    ಭಗವತ್ ಸಿಂಗ್ ಅವರಿಗೆ ಆರ್‌ಎಎಸ್ ಅಧಿಕಾರಿಯಾಗುವ ಕನಸಾಗಿತ್ತು. ಆದರೆ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಇದಾದ ನಂತರ ಎಲ್​ಎಲ್​ಬಿ ಮುಗಿಸಿ ನಂತರ ವಕೀಲಿ ವೃತ್ತಿ ಆರಂಭಿಸಿದ ಅವರು ವಕೀಲಿ ವೃತ್ತಿಯ ಜತೆಗೆ ಕೃಷಿಯನ್ನೂ ಮಾಡತೊಡಗಿದರು.

    MORE
    GALLERIES

  • 47

    Success Story: ಎಲ್​ಎಲ್​ಬಿ ಮುಗಿಸಿ ಸಾವಯವ ಕೃಷಿ ಆರಂಭಿಸಿದ ಯುವ ರೈತನ ಅದೃಷ್ಟವೇ ಬದಲಾಯ್ತು! ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆದಾಯ

    ಆರಂಭದಲ್ಲಿ ಸಾಂಪ್ರದಾಯಿಕ ಕೃಷಿಯನ್ನೇ ಮಾಡುತ್ತಿದ್ದರು. ಆದರೆ, ಸಾಂಪ್ರದಾಯಿಕ ಕೃಷಿಯಲ್ಲಿ ಲಾಭ ಕಡಿಮೆ. ಇದರಿಂದಾಗಿ ಸಾಂಪ್ರದಾಯಿಕ ಕೃಷಿ ಬಿಟ್ಟು ತೋಟಗಾರಿಕೆಯತ್ತ ಮುಖಮಾಡಿ ಅದರ ಬಗ್ಗೆ ಮಾಹಿತಿ ಪಡೆದುಕೊಂಡರು. ಇಂದು ರಾಜಸ್ಥಾನದ ಕೋಟಾ ಜಿಲ್ಲೆಯ ಪ್ರಗತಿಪರ ರೈತರಲ್ಲಿ ಭಗವಾ ಸಿಂಗ್ ಅವರ ಹೆಸರು ಸೇರಿಕೊಂಡಿದೆ.

    MORE
    GALLERIES

  • 57

    Success Story: ಎಲ್​ಎಲ್​ಬಿ ಮುಗಿಸಿ ಸಾವಯವ ಕೃಷಿ ಆರಂಭಿಸಿದ ಯುವ ರೈತನ ಅದೃಷ್ಟವೇ ಬದಲಾಯ್ತು! ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆದಾಯ

    ಭಗವತ್ ಸಿಂಗ್ ಅವರು ಮೊದಲು ತಮ್ಮ ತಂದೆಯ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು. ನಂತರ ಆಧುನಿಕ ಕೃಷಿಯತ್ತ ಮುಖಮಾಡಿ ಕ್ರಮೇಣ ಯಶಸ್ಸು ಪಡೆದರು. ಇಂದು ಹಲವು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸೀಸನ್​ ಆಧಾರದ ಮೇಲೆ ಇಸ್ರೇಲಿ ಗೋಧಿ, ಸಾವಯವ ಗೋಧಿ ಮತ್ತು ಕಪ್ಪು ಗೋಧಿ ಬೆಳೆಯುವುದರ ಜೊತೆಗೆ ತೋಟಗಾರಿಕೆಯನ್ನು ಮಾಡುತ್ತಿದ್ದು, ಋತುವಿನ ಪ್ರಕಾರ ವಿವಿಧ ತರಕಾರಿಗಳನ್ನು ಬೆಳೆಯಲಾಗುತ್ತದೆ.

    MORE
    GALLERIES

  • 67

    Success Story: ಎಲ್​ಎಲ್​ಬಿ ಮುಗಿಸಿ ಸಾವಯವ ಕೃಷಿ ಆರಂಭಿಸಿದ ಯುವ ರೈತನ ಅದೃಷ್ಟವೇ ಬದಲಾಯ್ತು! ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆದಾಯ

    ಭಗವತ್ ಸಿಂಗ್ ಅವರು ತಮ್ಮ 25 ಎಕರೆ ಜಮೀನಿನಲ್ಲಿ ಕೃಷಿಗಾಗಿ ಡ್ರಿಪಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಅವರು ಬಹುತೇಕ ಬೆಳಗಳಿಗೆ ಹನಿ ಹನಿ ನೀರಾವರಿ ಮಾಡಿದ್ದಾರೆ. ಕೃಷಿಯ ಜೊತೆಗೆ ಪಶುಪಾಲನೆಯನ್ನೂ ಮಾಡುತ್ತಾರೆ. ಜಾನುವಾರುಗಳ ಸಗಣಿಯಿಂದ ಸಾವಯವ ಗೊಬ್ಬರವನ್ನು ತಾವೇ ತಯಾರಿಸುತ್ತಾರೆ. ಅವರು ಈ ಗೊಬ್ಬರವನ್ನು ಹೊಲಗಳಲ್ಲಿ ಬಳಸುತ್ತಾರೆ.

    MORE
    GALLERIES

  • 77

    Success Story: ಎಲ್​ಎಲ್​ಬಿ ಮುಗಿಸಿ ಸಾವಯವ ಕೃಷಿ ಆರಂಭಿಸಿದ ಯುವ ರೈತನ ಅದೃಷ್ಟವೇ ಬದಲಾಯ್ತು! ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆದಾಯ

    ಭಗವಂತ್ ಸಿಂಗ್ ತಮ್ಮ ಕೃಷಿಯಲ್ಲಿನ ಸಾಧನೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಂದ ಆಧುನಿಕ ಕೃಷಿಕ ಎಂಬ ಗೌರವ ಪಡೆದು ಸನ್ಮಾನ ಮಾಡಿಸುಕೊಂಡಿದ್ದರು . ಭಗವಂತ್ ಸಿಂಗ್ ಅವರು ಗೋದಿ, ಹಣ್ಣು ಮತ್ತು ತರಕಾರಿ ಸೇರಿದಂತೆ ವಿವಿಧ ಬೆಳೆಗಳಿಂದ ವಾರ್ಷಿಕವಾಗಿ 20 ರಿಂದ 22 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ..

    MORE
    GALLERIES