Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!
Success Story: ಪತಿಯ ಮರಣದ ನಂತರ ಸಾಂಪ್ರದಾಯಿಕ ದೃಡಿಗೆಡದ ಮಹಿಳೆ ಕೃಷಿ ಮಾಡಿಕೊಂಡೇ ತಮ್ಮ ಇಬ್ಬರು ಮಕ್ಕಳನ್ನು ಓದಿಸಿ ಒಳ್ಳೆಯ ಕೆಲಸಕ್ಕೆ ಸೇರುವಂತೆ ಮಾಡಿದ್ದಾರೆ. ಅಲ್ಲದೆ ಬರಪೀಡಿತ ಪ್ರದೇಶದಲ್ಲಿ ಸೇಬು ಬೆಳೆದು ಮಹಿಳೆಯರು ಯಾವ ಕ್ಷೇತ್ರಕ್ಕೂ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ವ್ಯವಸಾಯವನ್ನು ಮಹಿಳೆಯರು ಕಂಡುಹಿಡಿದರು ಎಂದು ಹೇಳಲಾಗುತ್ತದೆ. ಈಗ ಇದೇ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಕೃಷಿಯ ಮೂಲಕವೂ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಅದಕ್ಕೆ ಈ ಮಹಿಳೆಯೇ ಅತ್ಯುತ್ತಮ ಉದಾಹರಣೆ.
2/ 10
ಮಹಾರಾಷ್ಟ್ರದ ಅನೇಕ ರೈತರು ಸಾಂಪ್ರದಾಯಿಕ ಕೃಷಿಯನ್ನು ತೊರೆದು ಆಧುನಿಕ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ತರಕಾರಿ, ಹಣ್ಣು-ಹಂಪಲುಗಳ ಕೃಷಿಯಿಂದ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರೆ.
3/ 10
ನೀರು ಸಿಗದ ಜಮೀನಿನಲ್ಲಿ ಈ ರೈತ ಮಹಿಳೆ ಕೃಷಿಯಲ್ಲಿ ಅಭೂತಪೂರ್ವ ಪ್ರಯೋಗ ಮಾಡಿದ್ದಾರೆ. ಅಷ್ಟಿ ತಾಲೂಕಿನ ಕೆಲ್ಸವಂಗಿ ಎಂಬ ಪ್ರದೇಶಗಳಲ್ಲಿ ಬೇಸಾಯ ಆರಂಭಿಸಿದ್ದರು.
4/ 10
ಪತಿಯ ಮರಣದ ನಂತರ ವಿಜಯಾ ಘೂಲೆ ಸಾಂಪ್ರದಾಯಿಕ ಕೃಷಿಯನ್ನು ಕೈಗೊಂಡರು. ಕೃಷಿ ಮಾಡುತ್ತಲೇ ಕುಟುಂಬದ ಎಲ್ಲ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ.
5/ 10
ವಿಜಯಾ ವ್ಯವಸಾಯ ಮಾಡಿ ಒಬ್ಬ ಮಗನನ್ನು ಇಂಜಿನಿಯರ್ ಮತ್ತು ಇನ್ನೊಬ್ಬನನ್ನು ಶಿಕ್ಷಕ ಹುದ್ದೆಗೇರುವಂತೆ ಮಾಡಿದ್ದಾರೆ. ತಮ್ಮ ಹೊಲದಲ್ಲಿ ವಿವಿಧ ಪ್ರಯೋಗಗಳನ್ನು ಮುಂದುವರಿಸುತ್ತಿದ್ದಾರೆ.
6/ 10
2020ರಲ್ಲಿ, ವಿಜಯ ಉಷ್ಣವಲಯದ ಈ ಪ್ರದೇಶಗಳಲ್ಲಿ ಹರ್ಮನ್ ಸೇಬು ಕೃಷಿ ಮಾಡುವುದಕ್ಕಾಗಿ ನಿರ್ಧರಿಸಿ, ತಮ್ಮ ಒಂದು ಎಕರೆ ಪ್ರದೇಶದಲ್ಲಿ 240 ಸಸಿಗಳನ್ನು ನೆಟ್ಟಿದ್ದಾರೆ.
7/ 10
ವಿಜಯಾ ಅವರು ತಮ್ಮ ಒಂದು ಎಕರೆಯಲ್ಲಿ ಸೇಬು ಕೃಷಿ ಮಾಡುವುದಕ್ಕೆ ಸುಮಾರು 60 ಸಾವಿರ ರೂಪಾಯಿ ಖರ್ಚು ಮಾಡಿ, ತುಂಬಾ ಕಾಳಜಿ ವಹಿಸಿ ಸೇಬಿನ ತೋಟವನ್ನು ಬೆಳೆಸಿದರು.
8/ 10
ಇದೀಗ ಮೂರು ವರ್ಷಗಳ ನಂತರ ಆ ಮರಗಳು ಫಲ ನೀಡುತ್ತಿವೆ. ಪ್ರತಿ ಮರವು 40 ರಿಂದ 50 ಸೇಬುಗಳನ್ನು ನೀಡುತ್ತಿವೆ. ಒಂದು ಮರವು 10 ರಿಂದ 20 ಕೆಜಿ ಸೇಬುಗಳನ್ನು ನೀಡುತ್ತದೆ. ಒಂದು ಹಣ್ಣು 100 ರಿಂದ 200 ಗ್ರಾಮ್ ವರೆಗೆ ತೂಗುತ್ತದೆ.
9/ 10
ಇಲ್ಲಿಯವರೆಗೆ 5 ಟನ್ ಹಣ್ಣುಗಳನ್ನು ಕೊಯ್ಲು ಮಾಡಲಾಗಿದ್ದು, ಇಡೀ ತೋಟದಲ್ಲಿ 20 ಟನ್ ಸೇಬು ಉತ್ಪಾದನೆಯಾಗುವ ಅಂದಾಜಿದೆ. 4 ಲಕ್ಷಕ್ಕೂ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ.
10/ 10
ಬೀಡಿನಂತಹ ಬರಪೀಡಿತ ಪ್ರದೇಶದಲ್ಲಿ ರೈತ ಮಹಿಳೆಯೊಬ್ಬರು ಮಾಡಿರುವ ಅಭೂತಪೂರ್ವ ಪ್ರಯೋಗಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸೇಬಿನ ತೋಟ ನೋಡಲು ಸುತ್ತಮುತ್ತಲಿನ ಪ್ರದೇಶದಿಂದ ಜನರು ಬರುತ್ತಿದ್ದಾರೆ.
First published:
110