ಭಾರತದಲ್ಲಿ ಮಾವಿನ ಸೀಸನ್ ಮಾರ್ಚ್ನಿಂದ ಜುಲೈವರೆಗೆ ಇರುತ್ತದೆ. ಈ ಸಮಯದಲ್ಲಿ ಹಣ್ಣಾಗುವ ಮಾವು ಉತ್ತಮ ರುಚಿಯನ್ನು ಹೊಂದಿರುತ್ತದೆ. ಹಾಗಾಗಿ ಭಾರತದಲ್ಲಿ ಹಲವು ಬಗೆಯ ಮಾವಿನ ಹಣ್ಣುಗಳು ಲಭ್ಯವಿವೆ. ಸುಮಾರು 12 ರಾಜ್ಯಗಳು ಅತ್ಯುತ್ತಮ ಮಾವನ್ನು ಬೆಳೆಯುತ್ತವೆ. ಅಲ್ಫೋನ್ಸೋ, ಕೇಸರ್, ದಾಸರಿ, ಲಾಂಗ್ರಾ, ಬಂಗನಪಲ್ಲಿ, ತೋತಾಪುರಿ ಮತ್ತು ಇನ್ನೂ ಅನೇಕ ತಳಿಯ ಮಾವುಗಳನ್ನು ಬೆಳೆಯಲಾಗುತ್ತದೆ. ಯಾವ ಯಾವ ರಾಜ್ಯಗಳಿಂದ ಯಾವ ತಳಿಯ ಮಾವಿನ ಹಣ್ಣುಗಳು ಬರುತ್ತಿವೆ ಎಂಬುದನ್ನು ಈ ಗ್ರಾಫಿಕ್ಸ್‌ನಲ್ಲಿ ತಿಳಿದುಕೊಳ್ಳೋಣ.