ಟರ್ಕಿಕೋಳಿಗಳಿಗೆ ಮನೆಯಲ್ಲಿ ಉಳಿದಂತಹ ಆಹಾರ, ತರಕಾರಿ ತ್ಯಾಜ್ಯ, ಜೊತೆಗೆ ಗೆದ್ದಲು ಹುಳು, ಸಣ್ಣ ಕೀಟಗಳನ್ನು ಅಹಾರವಾಗಿ ನೀಡಬಹುದು. ಹಸಿರೆಲೆಗಳನ್ನು ಕತ್ತರಿಸಿ ಸಹ ಹಾಕಬಹುದು. ಜವಾರಿ ಕೋಳಿಯಂತೆ ಇದು ಕಾಳು, ಬೀಜ, ಕೀಟ, ಹಸಿರು ಹುಲ್ಲು, ಎರೆಹುಳು, ಸಣ್ಣಹುಳು, ಗೆದ್ದಲುಹುಳು ಹಾಗೂ ಮಿಕ್ಕಿದ ಅಡುಗೆ ಸೇರಿದಂತೆ ಇತರೆ ಆಹಾರವನ್ನು ಸೇವಿಸುತ್ತದೆ.ಇದರ ನಿರ್ವಹಣೆ ಕೂಡ ಕಡಿಮೆ ವೆಚ್ಚದಲ್ಲಿ ಮಾಡಹುದಾಗಿದೆ.
ಈ ತಳಿ ಹೊರದೇಶದ ಮೂಲದವು, ಹಾಗಾಗಿ ನಮ್ಮ ಪರಿಸರಕ್ಕೆ ಒಗ್ಗಿಕೊಳ್ಳುವವರೆಗೆ ಪೋಷಣೆ ಅಗತ್ಯ, ಆರಂಭದ ನಾಲ್ಕು ವಾರಗಳವರೆಗೆ ಕೋಳಿಮರಿಗಳನ್ನು 35 ಸೆಂಟಿಗ್ರೇಡ್ ತಾಪಮಾನದಲ್ಲಿ ಬ್ರೀಡಿಂಗ್ ಮಾಡಬೇಕಾಗುತ್ತವೆ. ನಂತರ ಕ್ರಮೇಣ 25 ರಿಂದ 27 ಸೆಂಟಿಗ್ರೇಡ್ ಉಷ್ಣತೆಯಲ್ಲಿ ಸಾಕಬಹುದು. ಎರಡು ಇಂಚಿನಷ್ಟು ಭತ್ತದ ಹೊಟ್ಟನ್ನೋ ಅಥವಾ ಮರದ ಹುಡಿಯನ್ನು ನೆಲಕ್ಕೆ ಹಾಕಿ ಅದರ ಮೇಲೆ ಸಾಕಬಹುದಾಗಿದೆ.