ಹೈನುಗಾರಿಕೆಯಲ್ಲಿ ಹೆಚ್ಚಾಗಿ ಪುರಷರೇ ಇರುವುದನ್ನು ನಾವು ನೋಡಿದ್ದೇವೆ. ಆದರೆ, ಗುಜರಾತ್ ಭರೂಚ್ ತಾಲೂಕಿನಲ್ಲಿ ಹೈನುಗಾರಿಕೆಯಲ್ಲಿ ಈ ಮಹಿಳೆ ಹೆಚ್ಚು ಹೆಸರು ಮಾಡುತ್ತಿದ್ದಾರೆ. ಯಾಕೆ ಅಂತೀರಾ? ಶ್ರುಕ್ರಬೆನ್ ಎಂಬ ಮಹಿಳೆ ಪಶು ಆಹಾರದಲ್ಲಿ ಅಜೋಲಾವನ್ನು ಬಳಸುತ್ತಾರೆ. ಅಜೋಲಾ ಪ್ರಾಣಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತದೆ. ಈ ಆಹಾರವು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿದೆ.