ದಿನೇಶ್ ತೆಂಗುರಿಯಾ ಅವರು ಬೆಳೆದಿರುವ ಗೋಧಿ ಬಗ್ಗೆ ನ್ಯೂಸ್ 18 ವರದಿ ಪ್ರಕಟಿಸಿತ್ತು. ಇದೀಗ ಐದು ದಿನಗಳಲ್ಲಿ ಈ ಗೋಧಿಯ ಬೀಜಗಳಿಗೆ ಮುಂಗಡ ಬುಕ್ಕಿಂಗ್ ಶುರುವಾಗಿವೆಯಂತೆ. ಇದು ನ್ಯೂಸ್ 18 ಸುದ್ದಿ ದೇಶಾದ್ಯಂತ ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ತೋರಿಸಿದೆ. ದಿನೇಶ್ಗೆ ಹೊಸ ತಳಿ ಗೋಧಿಯ ಬಿತ್ತನೆ ಬೀಜಕ್ಕಾಗಿ ದೇಶಾದ್ಯಂತ ಸಾವಿರಾರು ರೈತರು ಕರೆ ಮಾಡುತ್ತಿದ್ದಾರೆ ಎಂದು ದಿನೇಶ್ ಹೇಳಿದ್ದಾರೆ.