Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

ಸೌತೆಕಾಯಿ ವರ್ಷಪೂರ್ತಿ ಬೆಳೆಯಬಹುದಾದ ಬೆಳೆ. ಈ ಬೆಳೆಯನ್ನು ಯಾವಾಗ ಬೇಕಾದರೂ ಬೆಳೆಯಬಹುದು. ರೈತರೊಬ್ಬರು ಒಂದು ಸೀಸನ್​ಗೆ ಎರಡು ಲಕ್ಷ ರೂಪಾಯಿ ಗಳಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

First published:

  • 110

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ಸಾಂಪ್ರದಾಯಿಕ ಬೆಳೆ ಬೆಳೆಯುವುದನ್ನು ಬಿಟ್ಟು ಲಾಭದಾಯಕ ಬೆಳೆಗಳತ್ತ ರೈತರು ಹೆಜ್ಜೆ ಹಾಕುತ್ತಿದ್ದಾರೆ. ಕಡಿಮೆ ಬಂಡವಾಳ, ಕಡಿಮೆ ವೆಚ್ಚ, ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ನೀಡುವ ಬೆಳೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬ ರೈತರ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವ ಸೌತೆಕಾಯಿ ಬೆಳೆ ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸುತ್ತಿದ್ದಾರೆ.

    MORE
    GALLERIES

  • 210

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ಸೌತೆಕಾಯಿ ವರ್ಷಪೂರ್ತಿ ಬೆಳೆಯಬಹುದಾದ ಬೆಳೆ. ಈ ಬೆಳೆಯನ್ನು ಯಾವಾಗ ಬೇಕಾದರೂ ಬೆಳೆಯಬಹುದು. ನಿಜಾಮಾಬಾದ್ ಜಿಲ್ಲೆಯ ರೈತರೊಬ್ಬರು ಒಂದು ಸೀಸನ್​ಗೆ ಎರಡು ಲಕ್ಷ ರೂಪಾಯಿ ಗಳಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಸೌತೆಕಾಯಿ ಕೃಷಿ ಪದ್ಧತಿ ಕುರಿತು ನ್ಯೂಸ್ 18 ವಿಶೇಷ ಸ್ಟೋರಿ ಇಲ್ಲಿದೆ.

    MORE
    GALLERIES

  • 310

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ನಿಜಾಮಾಬಾದ್ ಜಿಲ್ಲೆಯ ಜಕ್ರನ್ ಪಲ್ಲಿ ತಾಲೂಕಿನ ಚಿಂತಲೂರು ಗ್ರಾಮದ ರೈತ ಗೋಪಿಡಿ ಶ್ರೀನಿವಾಸ್ ಎಂಬುವವರಿಗೆ ಹತ್ತು ಎಕರೆ ಸಾಗುವಳಿ ಜಮೀನಿದೆ. ಆದರೆ ಐದು ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಇನ್ನೂ ಎರಡೂವರೆ ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಉಳಿದ ಎರಡು ಎಕರೆಯಲ್ಲಿ ಹನಿ ನೀರಾವರಿ ಮೂಲಕ ಸೌತೆಕಾಯಿ ಬೆಳೆ ಬೆಳೆಯುತ್ತಿದ್ದಾರೆ.

    MORE
    GALLERIES

  • 410

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ಮೊದಲು ಹರಿಸಿನ ಬೆಳಯುತ್ತಿದ್ದ ಶ್ರೀನಿವಾಸ್ ಆ ಜಾಗದಲ್ಲಿ ಸೌತೆಕಾಯಿ ಹಾಕಿದ್ದಾರೆ. ಈಗ ಸೌತೆಕಾಯಿ ಬೆಳೆ ಕೈಗೆ ಬಂದಿದೆ. ದಿನ ಬಿಟ್ಟು ದಿನಕ್ಕೆ ಸೌತೆಕಾಯಿ ಕೊಯ್ಲು ಮಾಡುತ್ತಿದ್ದಾರೆ. ಮೊದಲ ಮೂರು ಕೊಯ್ಲಿಗೆ ಎರಡರಿಂದ ಮೂರು ಟನ್ ಇಳುವರಿ ಬಂದಿದೆ.

    MORE
    GALLERIES

  • 510

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ಐದನೇ ಕೊಯ್ಲಿನಿಂದ ಎಕರೆಗೆ 13 ಟನ್ ಇಳುವರಿ ಬಂದಿದ್ದು, ಶ್ರೀನಿವಾಸ್ ಪ್ರತಿ ಋತುವಿಗೆ ಎರಡು ಲಕ್ಷ ಆದಾಯ ಪಡೆಯುತ್ತಿದ್ದಾರೆ. ಇವರು ಕಂಪನಿಯೊಂದಿಗೆ ಖರೀದಿ ಒಪ್ಪಂದ ಮಾಡಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇದೇ ಕೃಷಿ ಮಾಡುತ್ತಿದ್ದಾರೆ. ಎಕರೆಗೆ 10 ಸಾವಿರ ಬೀಜ ಬಿತ್ತಲಾಗುತ್ತದೆ. ಸಾವಯವ ಗೊಬ್ಬರಗಳನ್ನು ಸಿಂಪಡಿಸುವುದಲ್ಲದೆ, ಕೀಟಗಳಿಂದ ಬೆಳೆಯನ್ನು ರಕ್ಷಿಸಲು ಅವರು ಲಿಂಗಾಕರ್ಷಕ ಬುಟ್ಟಿಗಳನ್ನು ಬಳಸುತ್ತಾರೆ.

    MORE
    GALLERIES

  • 610

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ಮುಂಗಾರು ಕಾಲದಲ್ಲಿ ಸ್ವಲ್ಪಮಟ್ಟಿಗೆ ತೊಂದರೆಯಾದರೂ ಇತರ ಋತುಗಳಲ್ಲಿ ಬೆಳೆಯಿಂದ ಲಾಭವನ್ನು ಗಳಿಸಬಹುದು. ಬಿತ್ತನೆ ಮಾಡಿದ 45 ದಿನಗಳ ನಂತರ ಫಸಲು ಬರುತ್ತದೆ. ಒಂದು ಋತುವಿನಲ್ಲಿ 15 ಬಾರಿ ಕೊಯ್ಲು ಮಾಡಬಹುದು.

    MORE
    GALLERIES

  • 710

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ಮೊದಲ ನಾಲ್ಕು ಕೊಯ್ಲುಗಳಲ್ಲಿ ಅಲ್ಪ ಇಳುವರಿ ಸಿಗುತ್ತದೆ. 5 ರಿಂದ 12 ಕೊಯ್ಲಿನ ವರೆಗೆ 15 ಟನ್ ವರೆಗೆ ಇಳುವರಿ ಸಿಗುತ್ತದೆ. ಪ್ರತಿ ಹಂಗಾಮಿನಲ್ಲಿ ಬೀಜ ಮತ್ತು ಕೂಲಿ ವೆಚ್ಚವನ್ನು ಕಳೆದು ಎಕರೆಗೆ ಒಂದು ಲಕ್ಷ ಆದಾಯ ಬರುತ್ತದೆ. ಶ್ರೀನಿವಾಸ್​ ಮೂರು ಹಂಗಾಮಿನಲ್ಲೂ ಸೌತೆಕಾಯಿ ಬೆಳೆಯುವ ಮೂಲಕ ಪ್ರತಿ ಎಕರೆಗೆ 3 ಲಕ್ಷದಂತೆ ವಾರ್ಷಿಕ 6 ಲಕ್ಷ ಆದಾಯ ಪಡೆಯುತ್ತಿದ್ದಾರೆ.

    MORE
    GALLERIES

  • 810

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ನನಗೆ 10 ಎಕರೆ ಸಾಗುವಳಿ ಭೂಮಿ ಇದೆ. ಅದರಲ್ಲಿ ಭತ್ತ, ಜೋಳ ಮತ್ತು ಹರಿಸಿನ ಬೆಳೆಗಳನ್ನು ಬೆಳೆಯುತ್ತಿದ್ದೆ. ಈಗ ಸೌತೆಕಾಯಿ ಬೆಳೆಯುತ್ತಿದ್ದೇನೆ.  ಸೌತೆಕಾಯಿ ಬಹಳ ಕಡಿಮೆ ಅವಧಿಯಲ್ಲಿ ಬರುತ್ತದೆ. ಮೂರು ಋತುಗಳನ್ನು ಬೆಳೆಯಲು ಸಾಧ್ಯವಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ಈ ತರಕಾರಿ ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾರೆ ಶ್ರೀನಿವಾಸ್​.

    MORE
    GALLERIES

  • 910

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ಒಂದು ಟನ್ ಬೆಲೆ 9 ಸಾವಿರ. ನಾವು ಕಂಪನಿಯೊಂದಿಗೆ ಬೈ ಬ್ಯಾಕ್ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ನನ್ನ ಜೊತೆಗೆ ಇನ್ನೂ ಕೆಲವು ರೈತರು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ. ನಾಟಿ ಮಾಡಿದ 45 ದಿನಗಳ ನಂತರ ಬೆಳೆ ಕಟಾವಿಗೆ ಬರುತ್ತದೆ.

    MORE
    GALLERIES

  • 1010

    Farmer Success Story: ಸೌತೆಕಾಯಿ ಬೆಳೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಸಂಪಾದಿಸುತ್ತಿದ್ದಾರೆ ಈ ರೈತ!

    ದಿನ ಬಿಟ್ಟು ದಿನಕ್ಕೆ ಸೌತೆಕಾಯಿಯನ್ನು ಕೀಳಬಹುದು. ಇನ್ನು 80 ದಿನಗಳಲ್ಲಿ ಇದರ ಸೀಸನ್​ ಮುಗಿಯಲಿದೆ. 80 ದಿನಗಳ ನಂತರ ಖರ್ಚೆಲ್ಲಾ ಕಳೆದು ಒಂದು ಲಕ್ಷದ ವರೆಗೆ ಲಾಭ ಸಿಗಲಿದೆ ಎಂದು ಗೋಪಿಡಿ ಶ್ರೀನಿವಾಸ್​ ಹೇಳಿದ್ದಾರೆ.

    MORE
    GALLERIES