ತೆಲಂಗಾಣ ರಾಜ್ಯವು ಫಾಮ್ ತಾಳೆ ಕೃಷಿಗೆ ವಿಶೇಷ ಗಮನ ನೀಡುತ್ತಿದೆ. ರೈತರಿಗೆ ಲಾಭದಾಯಕವಾದ ತಾಳೆ ಕೃಷಿಗೆ ಪ್ರೋತ್ಸಾಹವನ್ನು ನೀಡಲು ಮುಂದಾಗಿದೆ. ಪ್ರತಿ ಎಕರೆಗೆ ವರ್ಷಕ್ಕೆ 4500 ರೂ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದೆ. ಮಾರ್ಚ್ ಅಂತ್ಯದೊಳಗೆ 5 ಸಾವಿರ ಎಕರೆಯಲ್ಲಿ ತಾಳೆ ಬೆಳೆಯಲು ಕ್ರಮಕೈಗೊಳ್ಳಲಾಗಿದೆ. ತಾಳೆ ಕೃಷಿ ಬೆಳೆಗೆ ಹನಿ ನೀರಾವರಿ ವ್ಯವಸ್ಥೆ ಮಂಜೂರಾತಿ ಮತ್ತು ವಿತರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಲ್ಲಿನ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಭಾರತವು ವಿಶ್ವದಲ್ಲಿ ಅಡುಗೆ ಎಣ್ಣೆಯ ಖರೀದಿಸುವ ಎರಡನೇ ಅತಿದೊಡ್ಡ ಗ್ರಾಹಕ ರಾಷ್ಟ್ರ ಮತ್ತು ವೆಜಿಟೇಬಲ್ ಆಯಿಲ್ ಉಪಯೋಗಿಸುವ ನಂಬರ್ 1 ರಾಷ್ಟ್ರವಾಗಿದೆ. ಅಂದರೆ ದೇಶಕ್ಕೆ ಅಗತ್ಯ ಇರುವ ಎಣ್ಣೆಯಲ್ಲಿ ಸುಮಾರು 60 ಪ್ರತಿಶತವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ನಮ್ಮ ರೈತರಿಗೆ ಆದಾಯವನ್ನು ನೀಡುವ ತಾಳೆ ಕೃಷಿಯನ್ನು ಕೈಗೊಳ್ಳಲು ಪ್ರೇರೇಪಿಸಲು ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ಹರೀಶ್ ರಾವ್ ಹೇಳಿದ್ದಾರೆ.