ತಮ್ಮ ಗ್ರಾಮದಲ್ಲಿ ಸಾಂಪ್ರದಾಯಿಕ ಕೃಷಿ ಮಾಡುವ ಬದಲು ವಾಣಿಜ್ಯ ಬೆಳೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಇದರಿಂದ ಗ್ರಾಮದ ಶೇ.90ರಷ್ಟು ರೈತರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆ. ಕಳೆದ 5 ವರ್ಷಗಳಿಂದ ತನ್ನ ಸ್ನೇಹಿತ ಮಾನ್ ಸಿಂಗ್ ಎಂಬುವರು ಅಶ್ವಗಂಧ ಮತ್ತು ತುಳಸಿಯನ್ನು ಬೆಳೆದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುತ್ತಿದ್ದರು, ಆದ್ದರಿಂದ ನಾನು ಕೂಡ ಅಶ್ವಗಂಧ ಬೆಳಯುತ್ತಿದ್ದೇನೆ ಎಂದು ಜ್ಯೋತಿರಾಮ್ ಗುರ್ಜರ್ ತಿಳಿಸಿದ್ದಾರೆ.
ತಾವೂ 2 ವರ್ಷಗಳ ಹಿಂದೆ ಸುಮಾರು 4 ಎಕರೆ ಜಮೀನಿನಲ್ಲಿ ಅಶ್ವಗಂಧ ಬೇಸಾಯ ಆರಂಭಿಸಿದ್ದು, 5 ರಿಂದ 6 ತಿಂಗಳಲ್ಲಿ ಎಕರೆಗೆ 5 ಕ್ವಿಂಟಾಲ್ ವರೆಗೆ ಫಸಲು ಬರುತ್ತದೆ. ಒಂದು ವರ್ಷದಲ್ಲಿ ನಾಲ್ಕು ಎಕರೆಯಲ್ಲಿ 10 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದೇನೆ. ಇದನ್ನು ಆಯುರ್ವೇದ ಔಷಧ ತಯಾರಿಸುವ ಕಂಪನಿಗಳು ನೇರವಾಗಿ ಈ ಬೆಳೆ ಖರೀದಿಸುವುದರಿಂದ ಉತ್ತಮ ಬೆಲೆ ಸಿಗುತ್ತದೆ ಎನ್ನುತ್ತಾರೆ ಗುರ್ಜರ್.