ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಳಿ ಶ್ರೀಗಂಧದ ಮರದ ಬೆಲೆ ಐದರಿಂದ ಆರು ಲಕ್ಷ ರೂಪಾಯಿ ಇದೆ. ನನ್ನ ಎರಡು ಹೆಕ್ಟೇರ್ ಜಮೀನಿನಲ್ಲಿ ಸುಮಾರು 200 ಶ್ರೀಗಂಧದ ಮರಗಳು ಉಳಿದಿವೆ. ಈ ಮರಗಳ ಮಾರಾಟ ಮಾಡಿದರೆ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಿಗಲಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ ನೀಡುವ ಈ ಕೃಷಿಯನ್ನು ನೋಡಿ ಸುತ್ತಮುತ್ತಲಿನ ರೈತರೂ ಕೂಡ ಶ್ರೀಗಂಧದ ಕೃಷಿ ಆರಂಭಿಸಿದ್ದಾರೆ ಎಂದು ರೂಪ್ ಸಿಂಗ್ ಹೇಳಿದ್ದಾರೆ.