Costliest Mango: ಕೆಜಿಗೆ 2 ಲಕ್ಷ ಬೆಲೆ ಬಾಳುವ ಮಾವಿನ ಹಣ್ಣು ಬೆಳೆದ ರೈತ! ಮಾವಿನ ಗಿಡಗಳಿಂದಲೂ ಲಕ್ಷ ಲಕ್ಷ ಸಂಪಾದನೆ

ಜಪಾನ್​ನ ತಳಿ 'ಮಿಯಾಜಾಕಿ' ಮಾವು ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಜಪಾನ್‌ನಲ್ಲಿ ಈ ಮಾವು ಒಂದು ಕೆಜಿಗೆ 2.5 ಲಕ್ಷ ರೂ.ವರೆಗೂ ಮಾರಾಟವಾದ ದಾಖಲೆಯಿದೆ. ಆದರೆ, ಮಧ್ಯಪ್ರದೇಶದಲ್ಲಿ ಈ ಮಾವು ಕೆಜಿಗೆ 20,000 ರೂಪಾಯಿವರೆಗೆ ಮಾರಾಟವಾಗಿದೆ. ಅಂದರೆ ಒಂದು ಮಾವಿನ ಹಣ್ಣಿಗೆ ಸುಮಾರು 4 ಸಾವಿರ ರೂಪಾಯಿಯಾಗಿದೆ.

First published:

  • 17

    Costliest Mango: ಕೆಜಿಗೆ 2 ಲಕ್ಷ ಬೆಲೆ ಬಾಳುವ ಮಾವಿನ ಹಣ್ಣು ಬೆಳೆದ ರೈತ! ಮಾವಿನ ಗಿಡಗಳಿಂದಲೂ ಲಕ್ಷ ಲಕ್ಷ ಸಂಪಾದನೆ

    ರಾಜಸ್ಥಾನದ ಮರುಭೂಮಿಯಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವು ಬೆಳೆಯಲಾಗುತ್ತಿದೆ ಎಂಬ ವಿಷಯ ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಏಕೆಂದರೆ ನೀರಿಗೆ ಅಭಾವ ಇರುವ ಜಾಗದಲ್ಲಿ ವಿಶ್ವದ ದುಬಾರಿ ಮಾವಿನ ಹಣ್ಣು ಬೆಳೆಯಲಾಗುತ್ತದೆ ಎಂದರೆ ನಂಬಲು ಅಸಾಧ್ಯವೆ ಸರಿ.

    MORE
    GALLERIES

  • 27

    Costliest Mango: ಕೆಜಿಗೆ 2 ಲಕ್ಷ ಬೆಲೆ ಬಾಳುವ ಮಾವಿನ ಹಣ್ಣು ಬೆಳೆದ ರೈತ! ಮಾವಿನ ಗಿಡಗಳಿಂದಲೂ ಲಕ್ಷ ಲಕ್ಷ ಸಂಪಾದನೆ

    ಜಪಾನ್​ನ ತಳಿ 'ಮಿಯಾಜಾಕಿ' ಮಾವು ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಜಪಾನ್‌ನಲ್ಲಿ ಈ ಮಾವು ಒಂದು ಕೆಜಿಗೆ 2.5 ಲಕ್ಷ ರೂ.ವರೆಗೂ ಮಾರಾಟವಾದ ದಾಖಲೆಯಿದೆ. ಆದರೆ, ಮಧ್ಯಪ್ರದೇಶದಲ್ಲಿ ಈ ಮಾವು ಕೆಜಿಗೆ 20,000 ರೂಪಾಯಿವರೆಗೆ ಮಾರಾಟವಾಗಿದೆ. ಅಂದರೆ ಒಂದು ಮಾವಿನ ಹಣ್ಣಿಗೆ ಸುಮಾರು 4 ಸಾವಿರ ರೂಪಾಯಿಯಾಗಿದೆ.

    MORE
    GALLERIES

  • 37

    Costliest Mango: ಕೆಜಿಗೆ 2 ಲಕ್ಷ ಬೆಲೆ ಬಾಳುವ ಮಾವಿನ ಹಣ್ಣು ಬೆಳೆದ ರೈತ! ಮಾವಿನ ಗಿಡಗಳಿಂದಲೂ ಲಕ್ಷ ಲಕ್ಷ ಸಂಪಾದನೆ

    ಕೋಟಾದ ರೈತ ಶ್ರೀಕಿಶನ್ ಸುಮನ್ ಅವರು ಮರುಭೂಮಿಯಲ್ಲಿ ಮಿಯಾಜಾಕಿ ತಳಿಯ ಮಾವಿನ ಗಿಡವನ್ನು ನೆಟ್ಟಿದ್ದಾರೆ. ತಮ್ಮ ನರ್ಸರಿಯಲ್ಲಿ ಮಿಯಾಜಾಕಿ ಮಾವಿನ ತಳಿಯ ಗಿಡಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಮಿಯಾಜಾಕಿ ಮಾವಿನ ತಳಿಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಗಿಡ ಮೂರು ವರ್ಷಗಳಿಂದ ಫಲ ನೀಡುತ್ತಿದೆ. ಇದುವರೆಗೆ ಶ್ರೀಕಿಶನ್ 50 ಗಿಡಗಳನ್ನು ಮಾರಾಟ ಮಾಡಿದ್ದಾರೆ. ಅವರ ಬಳಿ ಈಗಲೂ 100 ಗಿಡಗಳಿಗೆ ಆರ್ಡರ್ ಬಂದಿದೆಯಂತೆ.

    MORE
    GALLERIES

  • 47

    Costliest Mango: ಕೆಜಿಗೆ 2 ಲಕ್ಷ ಬೆಲೆ ಬಾಳುವ ಮಾವಿನ ಹಣ್ಣು ಬೆಳೆದ ರೈತ! ಮಾವಿನ ಗಿಡಗಳಿಂದಲೂ ಲಕ್ಷ ಲಕ್ಷ ಸಂಪಾದನೆ

    ಕೋಟಾ ನಗರದಿಂದ 10 ಕಿ.ಮೀ ದೂರದಲ್ಲಿರುವ ಗಿರ್ಧರಪುರ ಗ್ರಾಮದ ರೈತ ಶ್ರೀಕಿಶನ್ ಸುಮನ್ ಮಿಯಾಜಾಕಿ ಮಾವಿನ ನರ್ಸರಿ ಸಿದ್ಧಪಡಿಸಿದ್ದಾರೆ. 11 ತರಗತಿ ಓದಿರುವ ಶ್ರೀಕಿಶನ್​ಗೆ 2019 ರಲ್ಲಿ ಥಾಯ್ಲೆಂಡ್‌ನಲ್ಲಿ ಪರಿಚಯಸ್ಥರು ಮೂರು ಮಿಯಾಜಾಕಿ ಮಾವಿನ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದರು.

    MORE
    GALLERIES

  • 57

    Costliest Mango: ಕೆಜಿಗೆ 2 ಲಕ್ಷ ಬೆಲೆ ಬಾಳುವ ಮಾವಿನ ಹಣ್ಣು ಬೆಳೆದ ರೈತ! ಮಾವಿನ ಗಿಡಗಳಿಂದಲೂ ಲಕ್ಷ ಲಕ್ಷ ಸಂಪಾದನೆ

    ಜಪಾನಿನ ತಳಿಯ ಆ ಮೂರು ಗಿಡಗಳನ್ನು ತಮ್ಮ ನರ್ಸರಿಯಲ್ಲಿ ನೆಟ್ಟಿದ್ದರು.  ಕೇವಲ ಎರಡು-ಮೂರು ವರ್ಷಗಳಲ್ಲೇ ಅವು ಫಲ ನೀಡಲು ಪ್ರಾರಂಭಿಸಿವೆ. ಇಲ್ಲಿಯವರೆಗೆ ಶ್ರೀಕಿಶನ್​ ಮೂರು ಮರಗಳಿಂದ  10 ಹಣ್ಣುಗಳನ್ನು ಪಡೆದುಕೊಂಡಿದ್ದಾರೆ. ಒಂದು ಹಣ್ಣಿನ ತೂಕ 200 ರಿಂದ 300 ಗ್ರಾಂ ಇರುತ್ತದೆ. ಅವರು ಬೆಳೆದ ಮಾವಿನ ಹಣ್ಣುಗಳನ್ನು ಮನೆಯವರು, ಹಾಗೂ ಸಂಬಂಧಿಕರಿಗೆ ನೀಡಿದ್ದಾರೆ. ಹಣ್ಣುಗಳನ್ನು ಮಾರುವ ಬದಲು ಈ 3 ಗಿಡಗಳಿಂದ ಮತ್ತಷ್ಟು ಗಿಡಗಳನ್ನು ತಯಾರು ಮಾಡಿ ಮಾರಾಟ ಮಾಡಲು ಶುರು ಮಾಡಿದ್ದಾರೆ.

    MORE
    GALLERIES

  • 67

    Costliest Mango: ಕೆಜಿಗೆ 2 ಲಕ್ಷ ಬೆಲೆ ಬಾಳುವ ಮಾವಿನ ಹಣ್ಣು ಬೆಳೆದ ರೈತ! ಮಾವಿನ ಗಿಡಗಳಿಂದಲೂ ಲಕ್ಷ ಲಕ್ಷ ಸಂಪಾದನೆ

    ಈ ತಳಿಯ ಮಾವು ಬೆಳೆಯಲು ಉತ್ತಮ ಬಿಸಿಲು ಮತ್ತು ನೀರಿನ ಅಗತ್ಯವಿದೆ. ಇದು ವರ್ಷಕ್ಕೊಮ್ಮೆ ಫಲ ನೀಡುತ್ತದೆ. ಈ ಮಾವು ಮೇಲಿನಿಂದ ಕೆಂಪು ಬಣ್ಣದ್ದಾಗಿದೆ, ಆದರೆ ಒಳಗೆ ಹಳದಿ ಬಣ್ಣ ಇರುತ್ತದೆ. ಮಿಯಾಜಾಕಿ ಮಾವಿನ ವಿಶೇಷತೆಯೆಂದರೆ ಇದು ಹೆಚ್ಚಿನ ಪೌಷ್ಟಿಕಾಂಶ ಹೊಂದಿದೆ. ಇದರಲ್ಲಿ ಫೋಲಿಕ್ ಆಸಿಡ್, ಆ್ಯಂಟಿ ಆಕ್ಸಿಡೆಂಟ್, ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳೂ ಇದ್ದು ಆರೋಗ್ಯಕ್ಕೆ ಒಳ್ಳೆಯದು. ಈ ಮಾವಿನ ಹಣ್ಣಿನ ಸಿಪ್ಪೆಯನ್ನು ಕೂಡ ಸುಲಭವಾಗಿ ತಿನ್ನಬಹುದು ಎಂದು ಶ್ರೀಕಿಶನ್​ ತಿಳಿಸಿದ್ದಾರೆ.

    MORE
    GALLERIES

  • 77

    Costliest Mango: ಕೆಜಿಗೆ 2 ಲಕ್ಷ ಬೆಲೆ ಬಾಳುವ ಮಾವಿನ ಹಣ್ಣು ಬೆಳೆದ ರೈತ! ಮಾವಿನ ಗಿಡಗಳಿಂದಲೂ ಲಕ್ಷ ಲಕ್ಷ ಸಂಪಾದನೆ

    ಅಂದಹಾಗೆ, ಶ್ರೀಕಿಶನ್ ಸುಮನ್ ಬಹಳ ದಿನಗಳಿಂದ ಮಾವು ಕೃಷಿ ಮಾಡುತ್ತಿದ್ದಾರೆ. ಅವರು ಸದಬಹರ್ ಎಂಬ ವಿಶೇಷ ಮಾವಿನ ತಳಿಯನ್ನು ಸಿದ್ಧಪಡಿಸಿದ್ದಾರೆ. ತಮ್ಮ ನರ್ಸರಿಯಲ್ಲಿ ಮಾವಿನ ಗಿಡಗಳನ್ನು ಮಾರುತ್ತಾರೆ. ಅಲ್ಲದೆ, ಈಗ ಜಪಾನ್ ತಳಿಯ ಮಿಯಾಜಾಕಿ ಮಾವಿನ ಗಿಳಗಳನ್ನು ಬೆಳೆಸುತ್ತಿದ್ದಾರೆ. ಈಗಾಗಲೇ ಪ್ರತಿ ಗಿಡಕ್ಕೆ 2000 ರೂ.ನಂತೆ ಇದುವರೆಗೆ 50 ಗಿಡಗಳನ್ನು ಮಾರಾಟ ಮಾಡಿದ್ದು, ಮತ್ತೆ 100 ಗಿಡಗಳಿಗೆ ಮುಂಗಡ ಬುಕ್ಕಿಂಗ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES