ಸೀಗಡಿ ಸಾಕಾಣಿಕೆ ಮೂಲಕ ಪಂಜಾಬ್ ರೈತರು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ, ವಿಶೇಷವಾಗಿ ಮುಕ್ತಸರ್ ಜಿಲ್ಲೆಯಲ್ಲಿ ರೈತರಿಗೆ ಸೀಗಡಿ ಲಾಭದಾಯಕ ವ್ಯವಹಾರವಾಗಿಬದಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಮುಕ್ತಸರದಲ್ಲಿ ಸೀಗಡಿ ಸಾಕಾಣಿಕೆ ಪ್ರದೇಶವು 280 ಎಕರೆಗಳಿಂದ 600 ಎಕರೆಗಳಿಗೆ ದ್ವಿಗುಣಗೊಂಡಿದೆ. ಇದು ರಾಜ್ಯದಲ್ಲಿ ಸೀಗಡಿ ಸಾಕಾಣಿಕೆಯಲ್ಲಿ ಅಗ್ರಗಣ್ಯ ಜಿಲ್ಲೆಯಾಗಿದೆ.
ಸೀಗಡಿಯ ಸರಾಸರಿ ಬೆಲೆ ಕೆಜಿಗೆ 400 ರೂಪಾಯಿಗಳಾಗಿದ್ದು, ಇದರಿಂದ ರೈತರು ವರ್ಷಕ್ಕೆ ಎಕರೆಗೆ 4-5 ಲಕ್ಷ ರೂಪಾಯಿ ಲಾಭಗಳಿಸಬಹುದು. ಸೀಗಡಿ ಸುಮಾರು 120 ದಿನಗಳಲ್ಲಿ ಮಾರಾಟಕ್ಕೆ ಸಿದ್ಧವಾಗುತ್ತದೆ. ಸೀಸನ್ ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿ, ನವೆಂಬರ್ ಅಂತ್ಯದವರೆಗೆ ಇರುತ್ತದೆ. ಕರಾವಳಿ ರಾಜ್ಯಗಳ ವ್ಯಾಪಾರಿಗಳು ಮುಕ್ತಸರದಿಂದ ಸೀಗಡಿ ಖರೀದಿಸಲು ಬರುತ್ತಾರೆ. ನಂತರ ಅದನ್ನು ಹವಾನಿಯಂತ್ರಿತ ವ್ಯಾನ್‌ಗಳಲ್ಲಿ ಸಾಗಿಸಲಾಗುತ್ತದೆ.
ಸೀಗಡಿ ಸಾಕಾಣಿಕೆಯ ಯಶಸ್ಸು ಮುಕ್ತಸರ ಜಿಲ್ಲೆಯ ರೈತರ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಿದೆ. ಇದು ಬರಡು ಭೂಮಿಯಲ್ಲೆ ಫಲವತ್ತಾದ ಭೂಮಿಯಲ್ಲಿ ತೆಗೆಯುವಷ್ಟು ಆದಾಯದ ಮೂಲವನ್ನು ಒದಗಿಸಿದೆ. ಜೊತೆಗೆ ಸರ್ಕಾರದ ಸಹಾಯಧನವು ಈ ಕೃಷಿ ಪ್ರಾರಂಭಿಸಲು ಸುಲಭವಾಗಿಸುತ್ತಿದೆ. ನೀರಿನ ಸಮಸ್ಯೆಯಿಂದ ಏನೂ ಮಾಡಲಾಗದೇ ಬಿಟ್ಟಿದ್ದ ಭೂಮಿಯಲ್ಲಿ ಈಗ ರೈತರು ಸರ್ಕಾರದ ನೆರವಿನಿಂದ ಲಕ್ಷಾಂತರ ಆಧಾಯ ಕಾಣುವಂತಾಗಿದೆ.