ವಿಷ್ಣು ಶರ್ಮಾ ಎಂಬ ರೈತ ತಮ್ಮ ಭೂಮಿ ಮಣ್ಣಿನ ಸವಕಳಿಯಾಗಿ ಗುಂಡಿ ಬಿದ್ದಿದ್ದರಿಂದ ಏನೂ ಮಾಡಲಾಗದೇ ಉದ್ಯೋಗ ಅರಸಿ ಫೂಪ್ ಹಳ್ಳಿ ಬಿಟ್ಟು ನಗರದಕ್ಕೆ ಬಂದು ಕೆಲವು ಸಮಯ ಕೆಲಸ ಮಾಡಿದ್ದಾರೆ. ಆದರೆ ನಗರದ ಜೀವನ ಅವರಿಗೆ ಇಷ್ಟವಾಗದೇ ಮತ್ತೆ ಗ್ರಾಮಕ್ಕೆ ಹಿಂತಿರುಗಿ ಗುಂಡಿ ಬಿದ್ದಿದ್ದ ಹತ್ತಾರು ಎಕರೆ ಜಮೀನನ್ನು ಸಮತಟ್ಟು ಮಾಡಿಸಿದ್ದಾರೆ. ಇದಕ್ಕೆ ಸುಮಾರು ಒಂದು ವರ್ಷ ತೆಗೆದುಕೊಂಡಿತ್ತು.
ಇನ್ನು ತಮ್ಮ ಗ್ರಾಮದಲ್ಲಿ ಜಾನುವಾರುಗಳ ಕಾಟ ವಿಪರೀತವಾಗಿರುವುದರಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ವಿಷ್ಣು ಶರ್ಮ ಟೆಕ್ನಾಲಜಿ ಮೊರೆ ಹೋಗಿದ್ದಾರೆ. ಹಸು, ಮೇಕೆ, ನೀಲಗಾಯ್ ಮುಂತಾದ ಅನೇಕ ಪ್ರಾಣಿಗಳು ಬೆಳೆಯನ್ನು ನಾಶಪಡಿಸುತ್ತಿದ್ದವು. ನಮಗೆ ಅದರ ಅರಿವೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಮೀನಿನ ಸುತ್ತ 6 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಈಗ ಜಮೀನಿನಲ್ಲಿಯೇ ಬೆಳೆಯನ್ನು ಮನೆಯಲ್ಲಿಯೇ ಕುಳಿತು ಕಾವಲು ಕಾಯುತ್ತಿದ್ದೇವೆ. ಎಷ್ಟೋ ತೊಂದರೆಗಳು ಮುಗಿದಿವೆ ಎಂದು ತಿಳಿಸಿದ್ದಾರೆ.