ಹೈನುಗಾರಿಕೆಯಲ್ಲಿ ಪ್ರತಿ ರಾಸುವಿನ ಉತ್ಪಾದನೆಯು ಅವುಗಳಿಗೆ ನೀಡುವ ಗುಣಮಟ್ಟದ ಹಸಿರು ಮೇವು, ಒಣ ಮೇವು ಹಾಗೂ ಸಮತೋಲನ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ರೈತರು ಹಾಲಿನಿಂದ ಸಿಗುವ ಆದಾಯದಲ್ಲಿ ಶೇಕಡಾ 60 ರಷ್ಟು ಅದರ ಆಹಾರಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ವ್ಯಯ ಮಾಡುತ್ತಿರುವ ಖರ್ಚು ಅಧಿಕವಾಗುತ್ತಿದೆ ಹಾಗೂ ಆದಾಯ ಕಡಿಮೆಯಾಗುತ್ತಿದೆ.