ಮಗ ಜೀತು ಯಾವಾಗಲೂ ಅಣಬೆ ಕೃಷಿಯ ಬಗ್ಗೆ ಕುತೂಹಲ ತೋರುತ್ತಿದ್ದದ್ದರಿಂದ ಅವನ ತಾಯಿ ಪ್ರೋತ್ಸಾಹಿಸಿದ್ದಾರೆ. ಅಣಬೆ ಬೇಸಾಯವನ್ನು ಸಂಶೋಧನೆ ಮಾಡುತ್ತಲೇ ಅದನ್ನೇ ಸೈಡ್ ಬಿಸಿನೆಸ್ ಮಾಡಿಕೊಂಡು ಇದೀಗ ಯಶಸ್ಸು ಸಾಧಿಸಿದ್ದಾರೆ. ಹಲವು ವರ್ಷಗಳಿಂದ ಯಶಸ್ವಿಯಾಗಿ ಅಣಬೆ ಫಾರ್ಮ್ ನಡೆಸುತ್ತಿರುವ ಅವರು ತಮ್ಮ ಬಳಿ ಬರುವ ರೈತರಿಗೆ, ಯುವಕರಿಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ.