ಮಧ್ಯಪ್ರದೇಶದಲ್ಲಿ ಗುನಾದ ಅಮೀಶ್ ವಿಶಾಲ್ ಎಂಬ ಯುವಕ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಮಾಡಿದ್ದಾರೆ. ಓದುತ್ತಿರುವಾಗಲೇ ಕ್ಯಾಂಪಸ್ ಆಯ್ಕೆ ಕೂಡ ನಡೆದಿದ್ದು, ಆತನನ್ನು ಜರ್ಮನಿ ಮೂಲದ ಓವರ್ ಸೀಸ್ ಟ್ರಾವೆಲ್ ಕಂಪನಿಯಲ್ಲಿ ಸಲಹೆಗಾರ ಹುದ್ದೆ ಸಿಕ್ಕಿದೆ. ಅವರಿಗೆ ಈ ಉದ್ಯೋಗಕ್ಕಾಗಿ ವಾರ್ಷಿಕವಾಗಿ 13 ಲಕ್ಷ ಪ್ಯಾಕೇಜ್ ಕೂಡ ಸಿಕ್ಕಿತ್ತು. ಅವರು ಇಂದೋರ್‌ನಲ್ಲಿ ಕೆಲಸ ಆರಂಭಿಸಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಅವರು ಮನೆಗೆ ಮರಳಬೇಕಾಯಿತು.
ಅಮೀಶ್ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಕಳೆದ ಮೂರು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಕಲ್ಲಂಗಡಿ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇದರೊಂದಿಗೆ 25ರಿಂದ 30 ಮಂದಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ. ಅವರ ಬಳಿ 25 ಮಹಿಳೆಯರು ಮತ್ತು 5 ಪುರುಷರು ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷದ ಹಿಂದೆ ಕೃಷಿ ಆರಂಭಿಸಿದಾಗ 5 ಜನ ಕೆಲಸದವರಿದ್ದರು. ಇದೀಗ ಕೃಷಿ ಮೂಲಕ ತಾವೂ ಹಣಗಳಿಸುತ್ತಿರುವುದಲ್ಲದೆ, ಇಂದು ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಆದರೆ ಅಮೀಶ್ಗೆ ಮೊದಲ ಬೇಸಾಯದಲ್ಲಿ ಹಾಕಿದ ಬಂಡವಾಳ ಮಾತ್ರ ಹಿಂದಿರುಗಿದೆ. ಆದರೆ ಎರಡನೇ ಬಾರಿಗೆ ಎರಡು ಪಟ್ಟು ಲಾಭ ಸಿಗಲು ಪ್ರಾರಂಭವಾಗಿದೆ. ಈ ಕರ್ಬೂಜ ಕೆಲವೊಮ್ಮೆ ಹೊಲದಲ್ಲೇ ಹೆಚ್ಚು ಮಾರಾಟವಾಗುತ್ತದೆ. ಕೆಲವೊಮ್ಮೆ ಪಾಟ್ನಾದ ಮಂಡಿಗೆ ಮಾರಾಟ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತದೆ. ಒಂದು ಕಿಲೋ ಕರ್ಬೂಜಕ್ಕೆ ಮಾರುಕಟ್ಟೆ ದರ 25 ರಿಂದ 40 ರೂಪಾಯಿದೆ. ವೈಜ್ಞಾನಿಕ ವಿಧಾನದಲ್ಲಿ ಒಂದು ಎಕರೆಯಲ್ಲಿ ಕೃಷಿ ಮಾಡಲು ಅಮೀಶ್ 50 ರಿಂದ 70 ಸಾವಿರ ರೂಪಾಯಿ ಖರ್ಚುಮಾಡುತ್ತಿದ್ದಾರೆ.
ಆದರೆ ಒಂದು ಎಕರೆ ಕೃಷಿಯಿಂದ ಅಮೀಶ್ 2.5 ಲಕ್ಷದಿಂದ 3 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. ವಿಶಾಲ್ ಒಟ್ಟು 4 ಎಕರೆಯಲ್ಲಿ ಕರ್ಬೂಜ ಕೃಷಿ ಮಾಡಿದ್ದಾರೆ. ಒಂದು ಋತುವಿನಲ್ಲಿ 35 ರಿಂದ 40 ಕ್ವಿಂಟಾಲ್ ಕಲ್ಲಂಗಡಿ ಉತ್ಪಾದನೆಯಾಗುತ್ತದೆ. ಒಟ್ಟಾರೆ 4 ಎಕರೆಯಲ್ಲಿ ಸೀಸನ್ಗೆ 10 ರಿಂದ 12 ಲಕ್ಷ ಸಂಪಾದಿಸುತ್ತಿದ್ದಾರೆ. ಅಮೀಶ್ ವಿಶಾಲ್ ವೃತ್ತಿಯಲ್ಲಿ ಇಂಜಿನಿಯರ್ ಆದರೂ ಕೃಷಿ ಮೇಲೆ ತೋರುವ ಆಸಕ್ತಿ ಸಾವಿರಾರು ಯುವಕರಿಗೆ ಮಾದರಿಯಾಗಿದೆ.