Apple Farming: ಈ ತಳಿಯ ಸೇಬನ್ನು ಶಿಮ್ಲಾದಲ್ಲಷ್ಟೇ ಅಲ್ಲ, ನಿಮ್ಮ ಹೊಲದಲ್ಲೂ ಬೆಳೆಯಬಹುದು! ಸಖತ್ ಇಳುವರಿ, ಲಕ್ಷ ಲಕ್ಷ ಆದಾಯ

Apple Farming: ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರ ಸೇಬು ಕೃಷಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಇದೀಗ ಬಿಹಾರ ಕೂಡ ಈ ವರ್ಗಕ್ಕೆ ಸೇರ್ಪಡೆಯಾಗಿದೆ.

First published:

 • 17

  Apple Farming: ಈ ತಳಿಯ ಸೇಬನ್ನು ಶಿಮ್ಲಾದಲ್ಲಷ್ಟೇ ಅಲ್ಲ, ನಿಮ್ಮ ಹೊಲದಲ್ಲೂ ಬೆಳೆಯಬಹುದು! ಸಖತ್ ಇಳುವರಿ, ಲಕ್ಷ ಲಕ್ಷ ಆದಾಯ

  ಸೇಬನ್ನು ಹೆಚ್ಚು ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಮಾತ್ರ ಬೆಳಯಲಾಗುತ್ತಿದೆ. ಆದರೆ ಕೃಷಿ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆಗಳ ಪರಿಶ್ರಮದಿಂದ ಬಿಹಾರ ಸರ್ಕಾರವು ಹರ್ಮನ್-99 ಎಂಬ ಸೇಬಿನ ಹೊಸ ತಳಿಯನ್ನು ಅಭಿವೃದ್ಧಿಪಡಿಸಿದ್ದು, ರೈತರಿಗೆ ನೀಡಿ ಸೇಬು ಕೃಷಿಗೆ ಪ್ರೋತ್ಸಾಹಿಸುತ್ತಿದೆ.   

  MORE
  GALLERIES

 • 27

  Apple Farming: ಈ ತಳಿಯ ಸೇಬನ್ನು ಶಿಮ್ಲಾದಲ್ಲಷ್ಟೇ ಅಲ್ಲ, ನಿಮ್ಮ ಹೊಲದಲ್ಲೂ ಬೆಳೆಯಬಹುದು! ಸಖತ್ ಇಳುವರಿ, ಲಕ್ಷ ಲಕ್ಷ ಆದಾಯ

  ಬಿಹಾರದ ಬೇಗುಸರಾಯ್​ನ ನವಕೋಥಿ ಬ್ಲಾಕ್​ನ ವನದ್ವಾರದ ರೈತ ರಾಜೇಶ್ ಸೇಬು ಕೃಷಿ ಮಾಡಿದ್ದಾರೆ. ರಾಜೇಶ್ 15 ತಿಂಗಳ ಹಿಂದೆ ಹಿಮಾಚಲ ಪ್ರದೇಶದಿಂದ ತೋಟಗಾರಿಕಾ ಇಲಾಖೆಯಲ್ಲಿ ಹರ್ಮನ್-99 ಸೇಬಿನ ಸಸಿಗಳನ್ನು ಆಮದು ಮಾಡಿಕೊಂಡು ತೋಟಗಾರಿಕೆ ಆರಂಭಿಸಿದ್ದರು.

  MORE
  GALLERIES

 • 37

  Apple Farming: ಈ ತಳಿಯ ಸೇಬನ್ನು ಶಿಮ್ಲಾದಲ್ಲಷ್ಟೇ ಅಲ್ಲ, ನಿಮ್ಮ ಹೊಲದಲ್ಲೂ ಬೆಳೆಯಬಹುದು! ಸಖತ್ ಇಳುವರಿ, ಲಕ್ಷ ಲಕ್ಷ ಆದಾಯ

  ಅವರು ತಮ್ಮ ಒಂದು ಹೆಕ್ಟೇರ್ ನಲ್ಲಿ ಜಮೀನಿನಲ್ಲಿ 250 ಸಸಿಗಳನ್ನು ನೆಟ್ಟು ತೋಟ ನಿರ್ಮಿಸಿದ್ದಾರೆ. ಇದೀಗ ಬೇಗುಸರೈನ ರೈತರು ರಾಜೇಶ್ ಅವರನ್ನು ಆಪಲ್ ಮ್ಯಾನ್ ಎಂದು ಕರೆಯುತ್ತಾರೆ.

  MORE
  GALLERIES

 • 47

  Apple Farming: ಈ ತಳಿಯ ಸೇಬನ್ನು ಶಿಮ್ಲಾದಲ್ಲಷ್ಟೇ ಅಲ್ಲ, ನಿಮ್ಮ ಹೊಲದಲ್ಲೂ ಬೆಳೆಯಬಹುದು! ಸಖತ್ ಇಳುವರಿ, ಲಕ್ಷ ಲಕ್ಷ ಆದಾಯ

  ರಾಜೇಶ್ ತಮ್ಮ ತೋಟದಲ್ಲಿ 250 ಸೇಬು ಗಿಡಗಳನ್ನು ನೆಟ್ಟಿದ್ದಾರೆ. ಒಂದು ಗಿಡದ ಸರಾಸರಿ ಬೆಲೆ 100 ರೂಪಾಯಿಯಾಗಿದ್ದು, ಮರಗಳಿಗೆ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಸೇಬಿನ ಮರವು ವರ್ಷಕ್ಕೆ ಸುಮಾರು 50 ಕೆಜಿ ಹಣ್ಣುಗಳನ್ನು ನೀಡುತ್ತದೆ. ಆದರೆ, ಮೊದಲ ವರ್ಷದಲ್ಲಿ 20 ಕೆಜಿ ಸೇಬು ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಒಂದು ವರ್ಷದಲ್ಲಿ 250 ಸೇಬು ಗಿಡಗಳನ್ನು ನೆಡಲು 23 ಸಾವಿರ ಖರ್ಚು ಮಾಡಿರುವುದಾಗಿ ರಾಜೇಶ್ ತಿಳಿಸಿದ್ದಾರೆ.

  MORE
  GALLERIES

 • 57

  Apple Farming: ಈ ತಳಿಯ ಸೇಬನ್ನು ಶಿಮ್ಲಾದಲ್ಲಷ್ಟೇ ಅಲ್ಲ, ನಿಮ್ಮ ಹೊಲದಲ್ಲೂ ಬೆಳೆಯಬಹುದು! ಸಖತ್ ಇಳುವರಿ, ಲಕ್ಷ ಲಕ್ಷ ಆದಾಯ

  ಉದ್ಯಾನವನ ಇಲಾಖೆಯಿಂದ 10 ಸಾವಿರ ಅನುದಾನವೂ ಬಂದಿದೆ. ರಾಜೇಶ್ ಪ್ರಕಾರ, ಅವರ ಸೇಬು ತೋಟಗಳನ್ನು ನೋಡಿದ ನಂತರ, ಇತರ ರೈತರು ಸಹ ಸೇಬು ಕೃಷಿಗೆ ಮುಂದಾಗಿದ್ದಾರೆ. ರೈತರು ರಾಜೇಶ್‌ನಿಂದ ಸೇಬು ಗಿಡಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮುಂದೆ ಈ ಗಿಡಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಹಿಮಾಚಲ ಪ್ರದೇಶದ ಹರ್ಮನ್ ಶರ್ಮಾ ಅವರೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದರೆ, ಅವರು ಚಿಕಿತ್ಸೆಯ ವಿಧಾನಗಳನ್ನು ಸೂಚಿಸುತ್ತಾರೆ ಎಂದರು.

  MORE
  GALLERIES

 • 67

  Apple Farming: ಈ ತಳಿಯ ಸೇಬನ್ನು ಶಿಮ್ಲಾದಲ್ಲಷ್ಟೇ ಅಲ್ಲ, ನಿಮ್ಮ ಹೊಲದಲ್ಲೂ ಬೆಳೆಯಬಹುದು! ಸಖತ್ ಇಳುವರಿ, ಲಕ್ಷ ಲಕ್ಷ ಆದಾಯ

  ನನ್ನ ಹೊಲದಲ್ಲಿ ಪ್ರಸ್ತುತ ಸುಮಾರು 250 ಮರಗಳಿವೆ. ಸೇಬಿನ ಗಿಡವು ಒಂದು ವರ್ಷದಲ್ಲಿ ಫಲ ನೀಡಲು ಪ್ರಾರಂಭಿಸುತ್ತದೆ. ಇದರಲ್ಲಿ ಒಂದು ಗಿಡ 25 ವರ್ಷಗಳವರೆಗೆ ಫಲ ನೀಡುತ್ತದೆ. ಅಲ್ಲದೆ, ಸೇಬಿನ ಮರವು ಮೊದಲ ವರ್ಷದಲ್ಲಿ ಕಡಿಮೆ ಅಂದರೂ 10 ರಿಂದ 15 ಕೆಜಿ ಹಣ್ಣುಗಳನ್ನು ನೀಡುತ್ತದೆ ಎಂದು ತಿಳಿಸಿದರು. 

  MORE
  GALLERIES

 • 77

  Apple Farming: ಈ ತಳಿಯ ಸೇಬನ್ನು ಶಿಮ್ಲಾದಲ್ಲಷ್ಟೇ ಅಲ್ಲ, ನಿಮ್ಮ ಹೊಲದಲ್ಲೂ ಬೆಳೆಯಬಹುದು! ಸಖತ್ ಇಳುವರಿ, ಲಕ್ಷ ಲಕ್ಷ ಆದಾಯ

  ಆದರೆ ಎರಡನೇ ವರ್ಷದಿಂದ ಒಂದು ಮರ 50 ಕೆಜಿವರೆಗೆ ನೀಡುತ್ತದೆ. ಅಂತೆಯೇ, ವರ್ಷಗಳಲ್ಲಿ ಇಳುವರಿಯೂ ಹೆಚ್ಚಾಗುತ್ತದೆ. ಮೊದಲ ವರ್ಷದಲ್ಲಿ ಸೇಬಿನ ತೋಟದಿಂದ ಎರಡರಿಂದ ಮೂರು ಲಕ್ಷ ರೂಪಾಯಿ ಆದಾಯ ಬರುತ್ತದೆ. ಹಾಗಾಗಿ ಪ್ರತಿ ವರ್ಷ ಆದಾಯ ದ್ವಿಗುಣವಾಗುತ್ತಿದೆ. ಇದೇ ವೇಳೆ ಜಿಲ್ಲೆಯಲ್ಲಿ ಸೇಬು ಕೆಜಿಗೆ 150 ರೂ.ಗೆ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಸೇಬು ಬೆಳೆಯುತ್ತಿರುವುದರಿಂದ ಬೆಲೆಯೂ ಇಳಿಕೆಯಾಗುತ್ತಿದೆ.

  MORE
  GALLERIES