Miyazaki Mango: ವಿಶ್ವದ ದುಬಾರಿ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈ ಮ್ಯಾಂಗೋ ಬೆಲೆ 2 ಲಕ್ಷ!

Japan Miyazaki Mango in Gujarat: ಸುಮಿತ್ ಜರಿಯಾ ಎಂಬ ರೈತ ಹಲವು ತಳಿಯ ಮಾವನ್ನು ತಮ್ಮ ಫಾರ್ಮ್​ನಲ್ಲಿ ಬೆಳೆದಿದ್ದಾರೆ. ಇದೀಗ ವಿಶ್ವದ ದುಬಾರಿ ಮಿಯಾಜಾಕಿ ಮಾವನ್ನು ಕೂಡ ಬೆಳೆದಿದ್ದ ತಮ್ಮ ಭಾಗದ ರೈತರಿಗೆ ಪರಿಚಯಿಸಿ ಅವರನ್ನು ಶ್ರೀಮಂತರನ್ನಾಗಿಸಲು ಮುಂದಾಗಿದ್ದಾರೆ.

First published:

  • 17

    Miyazaki Mango: ವಿಶ್ವದ ದುಬಾರಿ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈ ಮ್ಯಾಂಗೋ ಬೆಲೆ 2 ಲಕ್ಷ!

    ಸೋರತ್‌ನ ಕೇಸರಿ ಮಾವನ್ನು ಮಾವುಗಳ ರಾಣಿ ಎಂದು ಕರೆಯಲಾಗುತ್ತದೆ. ಹೊರ ದೇಶಗಳಲ್ಲಿ ಈ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು, ವಿದೇಶಿಗರು ಅತಿ ಹೆಚ್ಚು ಬೆಲೆಗೆ ಈ ಮಾವನ್ನು ಖರೀದಿಸುತ್ತಾರೆ. ಈಗ ಸಸಾನ್​ ಗಿರ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಸಸಾನ್‌ನ ಪ್ರಗತಿಪರ ರೈತ ಜಪಾನ್‌ನ ಪ್ರಸಿದ್ಧ ಮಿಯಾಜಾಕಿ ಮಾವಿನ ಹಣ್ಣುಗಳನ್ನು ಬಗ್ಗೆ ತಿಳಿದುಕೊಂಡು ತನ್ನ ಜಮೀನಿನಲ್ಲಿ ಅವುಗಳನ್ನು ಬೆಳೆಸಿದ್ದಾರೆ. ಸೌರಾಷ್ಟ್ರ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಜಪಾನಿನ ಮಾವು ಬೆಳೆಯಲಾಗುತ್ತದೆ.

    MORE
    GALLERIES

  • 27

    Miyazaki Mango: ವಿಶ್ವದ ದುಬಾರಿ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈ ಮ್ಯಾಂಗೋ ಬೆಲೆ 2 ಲಕ್ಷ!

    ಸಿಂಹಗಳ ಕೊನೆಯ ಆವಾಸಸ್ಥಾನವಾದ ಸಸಾನ್‌ನಲ್ಲಿ ಅನಿಲ್ ಫಾರ್ಮ್ ನಡೆಸುತ್ತಿರುವ ರೈತ ಸುಮಿತ್ ಝರಿಯಾ ಹಲವಾರು ಮಾವಿನ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಮಾವು ಕೃಷಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಂತರ, ಕೆಲವು ದಿನಗಳ ಹಿಂದೆ, ಜಪಾನ್‌ನ ಪ್ರಸಿದ್ಧ ಇರ್ವಿನ್ ಆಪಲ್ ಮ್ಯಾಂಗೊವನ್ನು ಬೆಳೆಸಿದ್ದಾರೆ. ಇದು ಮಿಯಾಜಾಕಿ ಮಾವು ಎಂದು ಪ್ರಸಿದ್ಧವಾಗಿದೆ.

    MORE
    GALLERIES

  • 37

    Miyazaki Mango: ವಿಶ್ವದ ದುಬಾರಿ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈ ಮ್ಯಾಂಗೋ ಬೆಲೆ 2 ಲಕ್ಷ!

    ಈ ಮಿಯಾಝಾಕಿ ಮಾವಿನ ಹಣ್ಣನ್ನು ಅಧ್ಯಯನ ಮಾಡಲು ಹೋದ ಅವರು ವಿಶ್ವದ ಅತ್ಯಂತ ದುಬಾರಿ ಮಾವಿನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅವರ ಪ್ರಕಾರ ಮಿಯಾಜಾಕಿ ಮಾವಿನ ಹಣ್ಣು ತುಂಬಾ ಚೆನ್ನಾಗಿದ್ದರೆ 1 ಕೆಜಿಗೆ ಎರಡು ಲಕ್ಷ ರೂಪಾಯಿಗಿಂತ ಹೆಚ್ಚು ಬೆಲೆ ಸಿಗುತ್ತದೆ. ಆದರೆ ಸಾಮಾನ್ಯವಾಗಿ ಈ ಮಾವು ಭಾರತದದಲ್ಲಿ ಕೆಜಿಗೆ 20 ರಿಂದ 25 ಸಾವಿರಕ್ಕೆ ಮಾರಾಟವಾಗುತ್ತಿದೆಯಂತೆ.

    MORE
    GALLERIES

  • 47

    Miyazaki Mango: ವಿಶ್ವದ ದುಬಾರಿ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈ ಮ್ಯಾಂಗೋ ಬೆಲೆ 2 ಲಕ್ಷ!

    ಜಪಾನ್‌ನಲ್ಲಿ ಹಿಮಪಾತವಾಗುತ್ತದೆ, ಹಾಗಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ಹಸಿರು ಮನೆ ಮಾಡಿ ಈ ಮಾವನ್ನು ಬೆಳೆಯುತ್ತಾರೆ. ಆದರೆ ಗುಜರಾತ್‌ನಲ್ಲಿ ಈ ಮಾವನ್ನು ಬೆಳೆಸುವುದು ಸುಲಭ. ಜಪಾನಿನಲ್ಲಿ ಈ ಮಾವಿಗೆ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ.

    MORE
    GALLERIES

  • 57

    Miyazaki Mango: ವಿಶ್ವದ ದುಬಾರಿ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈ ಮ್ಯಾಂಗೋ ಬೆಲೆ 2 ಲಕ್ಷ!

    ಈ ಮಾವು ಕೇಸರಿ ಅಥವಾ ಇತರ ಮಾವಿನಹಣ್ಣುಗಳಿಗಿಂತ ಸ್ವಲ್ಪ ಕಡಿಮೆ ಸಿಹಿಯಾಗಿರುತ್ತದೆ ಮತ್ತು ಸುಮಾರು 300 ಗ್ರಾಂ ತೂಗುತ್ತದೆ. ಇದು ಹಣ್ಣಿನ ಮೇಲೆ ಯಾವುದೇ ರೀತಿಯ ಕಲೆಗಳನ್ನು ಹೊಂದಿರುವುದಿಲ್ಲ. ವಿದೇಶಿಗರು ಹೆಚ್ಚು ಸಿಹಿಯನ್ನು ಇಷ್ಟಪಡುವುದಿಲ್ಲವಾದ್ದರಿಂದ ಈ ಮಾವಿಗೆ ಹೆಚ್ಚು ಬೇಡಿಕೆಯಿದೆ ಎಂದು ಹೇಳಿದ ಸುಮಿತ್ ಜಪಾನ್‌ನಿಂದ ತಾವು 10 ಮಾವಿನ ಕಸಿಗಳನ್ನು ತಂದಿದ್ದಾರೆ, ಈಗ ನಾಟಿ ಮಾಡಲಾಗಿದ್ದು, ಭವಿಷ್ಯದಲ್ಲಿ ಫಲ ಸಿಗಲಿದೆ ಎನ್ನುತ್ತಾರೆ.

    MORE
    GALLERIES

  • 67

    Miyazaki Mango: ವಿಶ್ವದ ದುಬಾರಿ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈ ಮ್ಯಾಂಗೋ ಬೆಲೆ 2 ಲಕ್ಷ!

    ಇನ್ನು ಮಿಯಾಝಾಕಿ ಮಾವು ಬಗ್ಗೆ ಹೇಳುವುದಾದರೆ, ಇದು ವಿಶ್ವದ ಅತ್ಯಂತ ದುಬಾರಿ ಮಾವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾವು ಬೆಲೆ 2.70 ಲಕ್ಷ ರೂಪಾಯಿವರೆಗೂ ಇದೆ. ಮಿಯಾಜಾಕಿ ಮಾವು ಸೂರ್ಯನ ಮೊಟ್ಟೆ ಎಂದೂ ಕರೆಯುತ್ತಾರೆ. ಮಿಯಾಜಾಕಿ ಮಾವುಗಳನ್ನು ಜಪಾನ್‌ನ ಮಿಯಾಜಾಕಿಯಲ್ಲಿ ಬೆಳೆಯಲಾಗುತ್ತದೆ. ಈ ಮಾವಿಗೆ ಮಿಯಾಜಾಕಿ ನಗರದ ಹೆಸರನ್ನು ಇಡಲಾಗಿದೆ.

    MORE
    GALLERIES

  • 77

    Miyazaki Mango: ವಿಶ್ವದ ದುಬಾರಿ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈ ಮ್ಯಾಂಗೋ ಬೆಲೆ 2 ಲಕ್ಷ!

    ಜಾರ್ಖಂಡ್‌ನ ಜಮ್ತಾರಾ ಬಳಿಯ ಅಂಬಾ ಗ್ರಾಮದಲ್ಲಿ ಇಬ್ಬರು ರೈತ ಸಹೋದರರು ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವನ್ನು ಬೆಳೆದಿದ್ದಾರೆ. ಈ ಮಾವಿನ ಬೆಳೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ನಂತರ ಹಣ್ಣು ಬಂದಾಗ ಯಾರೂ ಕದಿಯದಂತೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಮಧ್ಯ ಪ್ರದೇಶದಲ್ಲಿ ಒಬ್ಬರ ರೈತ ಬೆಳೆದಿದ್ದು, ಕಳ್ಳತನ ತಡೆಯಲು ನಾಲ್ಕೈದು ಕಾರ್ಮಿಕರು, ನಾಯಿ ಮತ್ತು ಸಿಸಿಟಿವಿ ಅಳವಡಿಸಿದ್ದು, ಈ ಹಿಂದೆ ವೈರಲ್ ಆಗಿತ್ತು.

    MORE
    GALLERIES