ಬಿಹಾರದ ಬಕ್ಸಾರ್ ಜಿಲ್ಲೆಯ ನಯಾ ಭೋಜ್‌ಪುರ್ ಗ್ರಾಮದ ನಿವಾಸಿ ಅಶುತೋಷ್ ಪಾಂಡೆ ಅವರು ಸಾಂಪ್ರದಾಯಿಕ ಕೃಷಿ ಬಿಟ್ಟು ವಾಣಿಜ್ಯ ಬೆಳೆ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಕ್ಯಾಪ್ಸಿಕಂ, ಟೊಮ್ಯಾಟೊ, ಗುಲಾಬಿ, ಎಲೆಕೋಸು ಕೃಷಿಯಲ್ಲಿ ಯಶಸ್ಸುಗಳಿಸಿದ್ದ ಅವರು ಈಗ ದೊಡ್ಡ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆಯುವ ಮೂಲಕ ಕಡಿಮೆ ವೆಚ್ಚದಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ಪ್ರತಿ ಕೊಯ್ಲಿಗೂ ತೋಟದಿಂದ 3ರಿಂದ 3.5 ಟನ್ ಕಲ್ಲಂಗಡಿ ಉತ್ಪಾದನೆಯಾಗುತ್ತಿದೆ. ವರ್ತಕರು ಕ್ವಿಂಟಲ್ಗೆ 1300 ರೂಪಾಯಿ ದರದಲ್ಲಿ ಖರೀದಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಹಾಗೂ ಆರಾ, ರೋಹ್ಟಾಸ್, ಬಲ್ಲಿಯಾ ಮೊದಲಾದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಪಾಂಡೆ ಪ್ರಕಾರ ಎಕರೆಗೆ ಕಡಿಮೆ ಅಂದರೂ ಖರ್ಚು ಕಳೆದು 2 ಲಕ್ಷ ಸಿಗುತ್ತದೆ ಅಂದರೆ 5 ಎಕರೆಯಲ್ಲಿ ಒಂದು ಬೆಳೆಗೆ 10 ಲಕ್ಷದ ವರೆಗೆ ಸಂಪಾದಿಸುತ್ತಿದ್ದಾರೆ.