Organic Farming: ದೇಸಿ ಹಸುವಿನ ಸಗಣಿಯಲ್ಲಿ ಬೆಳೆದ ತರಕಾರಿಗೆ ಸಖತ್ ಡಿಮ್ಯಾಂಡ್! ಅರ್ಧ ಎಕರೆಯಲ್ಲೇ ತಿಂಗಳಿಗೆ 40 ಸಾವಿರ ಗಳಿಸ್ತಾರೆ ಈ ರೈತ!

8ನೇ ತರಗತಿವರೆಗೆ ಓದಿರುವ ರೈತನೊಬ್ಬ ಗೋವು ಆಧಾರಿತ ಕೃಷಿ ಮೂಲಕ ತನ್ನ ಅರ್ಧ ಎಕರೆ ಜಮೀನಿನಲ್ಲಿ ವಿವಿಧ ತರಕಾರಿ, ಮೆಕ್ಕೆ ಜೋಳ, ಸೀಬೆ ಹಣ್ಣು ಬೆಳೆಯುತ್ತಿದ್ದಾರೆ.

First published:

  • 17

    Organic Farming: ದೇಸಿ ಹಸುವಿನ ಸಗಣಿಯಲ್ಲಿ ಬೆಳೆದ ತರಕಾರಿಗೆ ಸಖತ್ ಡಿಮ್ಯಾಂಡ್! ಅರ್ಧ ಎಕರೆಯಲ್ಲೇ ತಿಂಗಳಿಗೆ 40 ಸಾವಿರ ಗಳಿಸ್ತಾರೆ ಈ ರೈತ!

    ಗುಜರಾತ್​ನ ಭರೂಚ್ ಜಿಲ್ಲೆಯ ಅಂಕಲೇಶ್ವರದ ಬೋರ್ಭತಾ ಗ್ರಾಮದ ರೈತ ಸುರೇಶ್ ಭಾಯ್  ಠಾಕೋರ್ ಅವರು ಬಾಲ್ಯದಿಂದಲೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೈತ ಓದಿದ್ದು 8ನೇ ತರಗತಿವರೆಗೆ ಮಾತ್ರ, ನಂತರ ತಂದೆಗೆ ಕೃಷಿಯಲ್ಲಿ ಸಹಾಯ ಮಾಡಲು ಶುರು ಮಾಡಿದ್ದರು. ಇದೀಗ 25 ವರ್ಷಗಳಿಂದ ತಂದೆ ತೋರಿಸಿದ ಮಾರ್ಗದಲ್ಲಿಯೇ ಕೃಷಿ ಮಾಡುತ್ತಾ ಆರಾಮವಾಗಿ ಜೀವನ ನಡೆಸುತ್ತಿದ್ದಾರೆ.

    MORE
    GALLERIES

  • 27

    Organic Farming: ದೇಸಿ ಹಸುವಿನ ಸಗಣಿಯಲ್ಲಿ ಬೆಳೆದ ತರಕಾರಿಗೆ ಸಖತ್ ಡಿಮ್ಯಾಂಡ್! ಅರ್ಧ ಎಕರೆಯಲ್ಲೇ ತಿಂಗಳಿಗೆ 40 ಸಾವಿರ ಗಳಿಸ್ತಾರೆ ಈ ರೈತ!

    ರೈತ ಸುರೇಶ್ ಭಾಯ್ ಠಾಕೂರ್ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ವಿವಿದ ಬೆಳೆ ಬೆಳೆಯುತ್ತಿದ್ದಾರೆ.

    MORE
    GALLERIES

  • 37

    Organic Farming: ದೇಸಿ ಹಸುವಿನ ಸಗಣಿಯಲ್ಲಿ ಬೆಳೆದ ತರಕಾರಿಗೆ ಸಖತ್ ಡಿಮ್ಯಾಂಡ್! ಅರ್ಧ ಎಕರೆಯಲ್ಲೇ ತಿಂಗಳಿಗೆ 40 ಸಾವಿರ ಗಳಿಸ್ತಾರೆ ಈ ರೈತ!

    ಸುರೇಶ್​ ಹಲವು ವರ್ಷಗಳಿಂದ ಹಸುಗಳನ್ನು ಸಾಕುತ್ತಿದ್ದಾರೆ. ಇವುಗಳ ನೆರವಿನಿಂದ ಸಾವಯವ ಕೃಷಿ ಮಾಡುತ್ತಾನೆ. ಈ ಹಿಂದೆ ಈತ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಮನಬಂದಂತೆ ಬಳಸುತ್ತಿದ್ದರು. ಇದರಿಂದಾಗಿ ಅವರ ಜಮೀನು ಕಲ್ಲಂತಾಗಿತ್ತು. ಅವರು ಬೆಳೆಗೆ ಖರ್ಚು ಮಾಡಿದಷ್ಟು ಉತ್ಪಾದನೆ ಆಗುತ್ತಿರಲಿಲ್ಲ. ನಂತರ, 2019 ರಿಂದ, ಅವರು ಗೋವು ಆಧಾರಿತ ಕೃಷಿ ಮಾಡುತ್ತಿದ್ದಾರೆ.

    MORE
    GALLERIES

  • 47

    Organic Farming: ದೇಸಿ ಹಸುವಿನ ಸಗಣಿಯಲ್ಲಿ ಬೆಳೆದ ತರಕಾರಿಗೆ ಸಖತ್ ಡಿಮ್ಯಾಂಡ್! ಅರ್ಧ ಎಕರೆಯಲ್ಲೇ ತಿಂಗಳಿಗೆ 40 ಸಾವಿರ ಗಳಿಸ್ತಾರೆ ಈ ರೈತ!

    2019 ವಡ್ತಾಲ್‌ನಲ್ಲಿ ಗೋವು ಆಧಾರಿತ ನೈಸರ್ಗಿಕ ಕೃಷಿ ವಿಚಾರ ಸಂಕಿರಣ ನಡೆದಿತ್ತು. ಏಳು ದಿನಗಳ ಕಾಲ ನೈಸರ್ಗಿಕ ಕೃಷಿ ತರಬೇತಿ ಪಡೆದ ನಂತರ ಹಸುಗಳನ್ನು ಆಧರಿಸಿ ಕೃಷಿ ಆರಂಭಿಸಿದರು.

    MORE
    GALLERIES

  • 57

    Organic Farming: ದೇಸಿ ಹಸುವಿನ ಸಗಣಿಯಲ್ಲಿ ಬೆಳೆದ ತರಕಾರಿಗೆ ಸಖತ್ ಡಿಮ್ಯಾಂಡ್! ಅರ್ಧ ಎಕರೆಯಲ್ಲೇ ತಿಂಗಳಿಗೆ 40 ಸಾವಿರ ಗಳಿಸ್ತಾರೆ ಈ ರೈತ!

    ಸುರೇಶ್ ಒಂದೂವರೆ ಎಕರೆ ಜಮೀನಿನಲ್ಲಿ ನಿತ್ಯ ಜೀವನದಲ್ಲಿ ಬಳಸುವ ವಿವಿಧ ರೀತಿಯ ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಅದರಲ್ಲಿ ಹೀರೆಕಾಯಿ, ಬೆಂಡೆಕಾಯಿ, ಸೋರೆಕಾಯಿ, ಈರುಳ್ಳಿ, ಅಮೇರಿಕನ್ ಕಾರ್ನ್ ಸೇರಿದಂತೆ ಮುಂತಾದವುಗಳನ್ನು ರೈತರು ಬೆಳೆದು ಮೊದಲಿಗಿಂತ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಪಡೆದು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

    MORE
    GALLERIES

  • 67

    Organic Farming: ದೇಸಿ ಹಸುವಿನ ಸಗಣಿಯಲ್ಲಿ ಬೆಳೆದ ತರಕಾರಿಗೆ ಸಖತ್ ಡಿಮ್ಯಾಂಡ್! ಅರ್ಧ ಎಕರೆಯಲ್ಲೇ ತಿಂಗಳಿಗೆ 40 ಸಾವಿರ ಗಳಿಸ್ತಾರೆ ಈ ರೈತ!

    ರೈತ ಸುರೇಶಭಾಯ್ ಠಾಕೂರ್ ಅವರು ಸಾವಯವ ಕೃಷಿ ಮೂಲಕವೇ  ಬಿಟ್ರೋಟ್​, ಪೇರಲ (ಸೀಬೆ ಹಣ್ಣು)  ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಇವರು ಬೆಳೆದ  ಸೀಬೆ ಹಣ್ಣುಗಳು ಒಂದು ಕೆಜಿವರೆಗೂ ತೂಗುತ್ತವೆ. ಇವರು ಇತರ ರೈತರಿಗೂ ಸಾವಯವ ಕೃಷಿ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

    MORE
    GALLERIES

  • 77

    Organic Farming: ದೇಸಿ ಹಸುವಿನ ಸಗಣಿಯಲ್ಲಿ ಬೆಳೆದ ತರಕಾರಿಗೆ ಸಖತ್ ಡಿಮ್ಯಾಂಡ್! ಅರ್ಧ ಎಕರೆಯಲ್ಲೇ ತಿಂಗಳಿಗೆ 40 ಸಾವಿರ ಗಳಿಸ್ತಾರೆ ಈ ರೈತ!

    ಇನ್ನು ಇವರು ಬೆಳೆಯುವ ತರಕಾರಿ ಮತ್ತು ಇತರೆ ಬೆಳೆಗಳನ್ನು ಸ್ವತಃ ಮಾರಾಟ ಮಾಡುತ್ತಾರೆ. ಆದ್ದರಿಂದ ಅವರು ಭರೂಚ್‌ ಪ್ರದೇಶದಲ್ಲಿ ಪ್ರಸಿದ್ಧರಾಗಿದ್ದಾರೆ. ತಾವೇ ಬೆಳೆದ ತರಕಾತಿಗಳನ್ನು ತಾವೇ ಮಾರಾಟ ಮಾಡಿ ತಿಂಗಳಿಗೆ  30-40 ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.

    MORE
    GALLERIES